ಶಾಸಕ ರಾಜುಗೌಡ ಹೆಸರಿನಲ್ಲಿ ಮಹಿಳೆಯಿಂದ ವಂಚನೆ: ಸುರಪುರ ಪೊಲೀಸರಿಂದ ಕೆ.ಆರ್. ಪುರಂನಲ್ಲಿ ಆರೋಪಿ ಮಹಿಳೆ ಅರೆಸ್ಟ್
ಆರೋಪಿ ರೇಖಾ ಶಾಸಕ ರಾಜುಗೌಡ ಹೆಸರು ಹೇಳಿಕೊಂಡು ವಂಚನೆ ಎಸಗುತ್ತಿದ್ದಳು. ಇನ್ನು ಈರಪ್ಪಗೌಡ ಕೆ.ಆರ್. ಪುರಂ ನಲ್ಲಿ ಬೇಕರಿ ಇಟ್ಟುಕೊಂಡಿದ್ದಾನೆ. ಸುರಪುರ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಮೂಲಿಮನಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ರೇಖಾಳನ್ನು ಬಂಧಿಸಲಾಗಿದೆ.
ಯಾದಗಿರಿ: ಸುರಪುರದ ಬಿಜೆಪಿ ಶಾಸಕ ರಾಜುಗೌಡ ಹೆಸರು (Surpur BJP MLA Raju Gowda) ಹೇಳಿಕೊಂಡು ಮಹಿಳೆಯಿಂದ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆ.ಆರ್. ಪುರಂನಲ್ಲಿ (KR Puram) ವಾಸವಿದ್ದ, ಸಕಲೇಶಪುರ ಮೂಲದ ರೇಖಾಳನ್ನು ಸುರಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ನಡೆಸುತ್ತಿದ್ದ ರೇಖಾಗೆ ಸುರಪುರ ಮೂಲದ ಈರಪ್ಪಗೌಡ ಎಂಬಾತ ಮಧ್ಯವರ್ತಿಯಾಗಿದ್ದ. ಮಧ್ಯವರ್ತಿ ಈರಪ್ಪಗೌಡನಿಂದ ರೇಖಾ ಹಣ ದೋಚುತ್ತಿದ್ದಳು ಎನ್ನಲಾಗಿದೆ. ರೇಖಾಳನ್ನು (arrest) ಬೆಂಗಳೂರಲ್ಲಿ ಬಂಧಿಸಿ, ಸುರಪುರ ಪೊಲೀಸರು ಸದ್ಯ ಸುರಪುರಕ್ಕೆ ಕರೆತಂದಿದ್ದಾರೆ.
ಆರೋಪಿ ವಂಚಕಿ ರೇಖಾ ಎನ್ಜಿಒ ಮೂಲಕ ಬ್ಯಾಂಕ್ವೊಂದನ್ನು ತೆರೆದಿದ್ದಳು. ಬ್ಯಾಂಕ್ನಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಳು. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹತ್ತಾರು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದಾಳೆ ಎಂದು ದೂರಲಾಗಿದೆ. ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ದೂರಿನನ್ವಯ ಪೊಲೀಸರು ರೇಖಾಳನ್ನು ಬಂಧಿಸಿದ್ದಾರೆ.
ಆರೋಪಿ ರೇಖಾ ಶಾಸಕ ರಾಜುಗೌಡ ಹೆಸರು ಹೇಳಿಕೊಂಡು ವಂಚನೆ ಎಸಗುತ್ತಿದ್ದಳು. ಇನ್ನು ಈರಪ್ಪಗೌಡ ಕೆ.ಆರ್. ಪುರಂ ನಲ್ಲಿ ಬೇಕರಿ ಇಟ್ಟುಕೊಂಡಿದ್ದಾನೆ. ಸುರಪುರ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಮೂಲಿಮನಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ರೇಖಾಳನ್ನು ಬಂಧಿಸಲಾಗಿದೆ.
ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾ ಬಂಧನ ಬೆಂಗಳೂರು: ಬಿಜೆಪಿ ಪಕ್ಷದ ಪ್ರಮುಖ ನಾಯಕ, ಸಚಿವರಿಗೂ ಆಪ್ತನಾಗಿದ್ದ ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನಿಟ್ರ್ಯಾಪ್ ಬ್ಲಾಕ್ಮೇಲ್ಗೆ ಹೆದರಿ ಮೇ 12ರಂದು ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಅನಂತರಾಜು ಪತ್ನಿ ದೂರು ಆಧರಿಸಿ ರೇಖಾ, ವಿನೋದ್, ಸ್ಪಂದನ ವಿರುದ್ಧ FIR ದಾಖಲಾಗಿತ್ತು. ಸದ್ಯ ರೇಖಾಳ ಬಂಧನವಾಗಿದ್ದು ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಬಿಜೆಪಿ ನಾಯಕನ ಸೂಸೈಡ್ ಹಿಂದೆ ಹನಿಟ್ರ್ಯಾಪ್ ಜಾಲ ಹಣ, ಅಂತಸ್ತು, ಊರಲ್ಲಿ ಒಳ್ಳೆ ಹೆಸರು, ಜನರ ಬೆಂಬಲ ಎಲ್ಲಾ ಜತೆಗಿದ್ದ ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ರು. ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ರು. ದಿಢೀರ್ ಎಂದು ಉಸಿರು ಚೆಲ್ಲಿದ ನಾಯಕನಿಗೆ, ಏರಿಯಾ ಜನರೆಲ್ಲ ಕಣ್ಣೀರಿಟ್ಟಿದ್ರು. ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ, ಸಚಿವ ಎಸ್.ಟಿ.ಸೋಮಶೇಖರ್ರ ಆಪ್ತನಾಗಿದ್ದವರು ಇದೇ ಅನಂತರಾಜು. ಕಮಲ ಪಾಳೆಯದಲ್ಲಿ ದೊಡ್ಡ ದೊಡ್ಡ ನಾಯಕರ ಜತೆ ಸ್ನೇಹಹೊಂದಿದ್ದ ಅನಂತರಾಜು, ಮೇ 12 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡ್ಕೊಂಡಿದ್ರು. ಅನಂತರಾಜು ಸೂಸೈಡ್ ಹಿಂದೆ ಹನಿಟ್ರ್ಯಾಪ್ ಕಹಾನಿ ಇರೋದು ಹೊರಬಿದ್ದಿದೆ. ಇದನ್ನೂ ಓದಿ: Video: ಐತಿಹಾಸಿಕ ಸಾಧನೆ; ದೇಶೀ ನಿರ್ಮಿತ ಯುದ್ಧನೌಕೆ ನಾಶಕ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ
ಹೇರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡನಾಗಿದ್ದ, ಅನಂತರಾಜ್ ಸಾವಿಗೆ ಹನಿಟ್ರ್ಯಾಪ್ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ, ಅನಂತರಾಜು ಪತ್ನಿ ಸುಮಾ, ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಕೆ.ಆರ್.ಪುರಂನ ರೇಖಾ, ವಿನೋದ್ ಮತ್ತು ಸ್ಪಂದನಾ ಎಂಬುವವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ವಿಷ್ಯ ಏನಂದ್ರೆ, ಅನಂತರಾಜ್ಗೆ ಕೆಲ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರೇಖಾ ಎಂಬಾಕೆ ಪರಿಚಯ ಆಗಿದ್ಳಂತೆ. ನಂತರ ಅದೇನಾಗಿದೆಯೋ ಏನೋ, ಅನಂತರಾಜ್ರ ಖಾಸಗಿ ಫೋಟೋ, ವಿಡಿಯೋಗಳನ್ನ ಪಡೆದು, ಹಣಕ್ಕಾಗಿ ರೇಖಾ ಡಿಮ್ಯಾಂಡ್ ಮಾಡುತ್ತಿದ್ಳಂತೆ. ಹಣ ನೀಡದಿದ್ರೆ ಪಕ್ಷದ ಮುಖಂಡರು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ರಂತೆ. ಸಾಕಷ್ಟು ಹಣ ಕೊಟ್ಟು ಬೇಸತ್ತಿದ್ದ ಅನಂತರಾಜು, ಪತ್ನಿ ಜತೆಗೂ ಈ ವಿಷ್ಯ ಹೇಳ್ಕೊಂಡಿದ್ರಂತೆ. ಆದ್ರೆ, ಮಾನಸಿಕವಾಗಿ ನೊಂದಿದ್ದ ಅವರು ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಪತ್ನಿ ದೂರು ನೀಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:10 pm, Wed, 18 May 22