ಪ್ರೇಯಸಿಯ ಮಾಜಿ ಲವ್ವರ್ನಿಂದ ಹಾಲಿ ಲವ್ವರ್ ಕೊಲೆ: ಕಿರಣ್ ಅಂಡ್ ಟೀಮ್ ಅಂದರ್
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ-ಕಾಡಾನೆ ನಡುವಿನ ಸಂಘರ್ಷ ಮುಂದುವರೆದಿದ್ದು, ಕಾಡಾನೆ ತುಳಿತಕ್ಕೆ ಕಾರ್ಮಿಕ ಬಲಿಯಾಗಿರುವಂತಹ ಘಟನೆ ಜಿಲ್ಲೆ, ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‌ನಲ್ಲಿ ನಡೆದಿದೆ.
ಬೆಂಗಳೂರು: ಪ್ರೇಯಸಿಯ ಮಾಜಿ ಲವ್ವರ್ನಿಂದ ಹಾಲಿ ಲವ್ವರ್ ಕೊಲೆ (Murder) ಮಾಡಿರುವಂತಹ ಘಟನೆ ನಗರದ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಸಮರ್ತ್ ನಾಯರ್ ಕೊಲೆಯಾದ ವ್ಯಕ್ತಿ. ಭದ್ರಾವತಿ ಮೂಲದ ಯುವತಿಯ ಪ್ರೀತಿಸುತಿದ್ದ ಸರ್ಮತ್, ಯುವತಿ ಈ ಹಿಂದೆ ತಾನು ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಕಿರಣ್ ಎಂಬಾತ ಲವ್ ಮಾಡ್ತಿದ್ದಳು. ಹಲವಾರು ವಿಚಾರಕ್ಕೆ ಕಿರಣ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಳು. ಬಳಿಕ ಸಮರ್ತ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಸರ್ಮತ್ ಜೊತೆಗೆ ಇದ್ದ ಸಮಯದಲ್ಲಿ ಎಂಟ್ರಿ ಕೊಟ್ಟಿದ್ದ ಕಿರಣ್ ಅಂಡ್ ಟೀಮ್, ಕಿರಣ್ ಗೆಳೆಯರಾದ ಅರುಣ್ ಹಾಗು ರಾಕೇಶ್ ಜೊತೆಗೆ ಬಂದಿದ್ದರು. ಬಂದವರು ಏಕಾಏಕಿ ಸಮರ್ತ್ ಮೇಲೆ ಹಲ್ಲೆ ಮಾಡಿ, ತಲೆಗೆ ಕಾಲಿನಿಂದ ಒದ್ದು ಗೋಡೆಗೆ ತಲೆ ಹಿಡಿದು ಚಚ್ಚಿದ್ದಾರೆ. ಬಳಿಕ ಸಮರ್ತ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಕಿರಣ್, ಅರೂಣ್ ಮತ್ತು ರಾಕೇಶ್ನ್ನು ಬೊಮ್ಮನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಟ್ರಕ್ ಬೈಕ್ ನಡುವೆ ಅಪಘಾತ; ಬೈಕ ಸವಾರ ಸಾವು
ಚಿಕ್ಕೋಡಿ: ಟ್ರಕ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ ಸವಾರ ಸಾವನ್ನಪ್ಪಿರುವಂತಹ ಘಟನೆ ಕುಡಚಿ- ಜಮಖಂಡಿ ರಸ್ತೆಯ ಯಲ್ಪಾರಟ್ಟಿ ಬಂಗ್ಲೆಯ ಹತ್ತಿರ ನಡೆದಿದೆ. ಅನೀಲ ಗುಂಡು ಘೋರ್ಪಡೆ (20) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ನಿವಾಸಿ ಅನೀಲ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಖತರ್ನಾಕ್ ಖದೀಮ ಅಂದರ್
ಯಾದಗಿರಿ: ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಖತರ್ನಾಕ್ ಬೈಕ್ ಕಳ್ಳರು ಅಂದರ್ ಆಗಿದ್ದಾರೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳರು, ಹುಣಸಗಿ ಪೊಲೀಸರ ಯಶಸ್ವಿ ಕಾರ್ಯಚರಣೆ ಬಳಿಕ ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಗೌಡುರು ಗ್ರಾಮದ ತಿರುಪತಿ ರಾಠೋಡ್ ಬಂಧನ ಮಾಡಲಾಗಿದೆ. 15 ರಿಂದ 20 ಸಾವಿರ ರೂ. ಬೈಕ್ ಅಡವಿಟ್ಟು ಸಾಲ ಪಡೆದು ಎಸ್ಕೇಪ್ ಆಗುತ್ತಿದ್ದರು. ಸಾಲದ ಹಣ ಪಾವತಿ ಮಾಡಲು ಸಾಧ್ಯವಾಗದೆ ಬೈಕ್ ಕಳ್ಳತನ ಕೃತ್ಯಕ್ಕೆ ತಿರುಪತಿ ಕೈಹಾಕಿದ. ಒಂದೇ ತಿಂಗಳಲ್ಲೇ ಪೊಲೀಸರ ಖೆಡ್ಡಾಕ್ಕೆ ಬಿದ್ದ ಬೈಕ್ ಕಳ್ಳ. 14 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ಅಂದಾಜು 6 ಲಕ್ಷ 50 ಸಾವಿರ ರೂಪಾಯಿ ಬೆಲೆ ಬಾಳುವ ಬೈಕ್ಗಳಾಗಿದ್ದು, ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನ, ಸಿಪಿಐ ದೌಲತ್ ಕುರಿ ನೇತೃತ್ವದಲ್ಲಿ ಕಳ್ಳನ ಬಂಧನ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರು ಬೈಕ್ ಕಳ್ಳತನ ಮಾಡಿ ಪರಾರಿಯಾಗುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ವಿಡಿಯೋದಿಂದ ಆರೋಪಿಯನ್ನು ಪತ್ತೆ ಹಚ್ಚಿ ಹುಣಸಗಿ ಪೊಲೀಸರು ಬಂಧಿಸಿದ್ದಾರೆ.
ಹಳೇ ದ್ವೇಷ ಹಿನ್ನೆಲೆ ತಲ್ವಾರ್ನಿಂದ ಕೊಚ್ಚಿ ಬರ್ಬರ ಕೊಲೆ
ಕೋಲಾರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ತಲ್ವಾರ್ನಿಂದ ಕೊಚ್ಚಿ ಬರ್ಬರವಾಗಿ ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೀರನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬೀರನಕುಪ್ಪೆ ಗ್ರಾಮದಲ್ಲಿ ನಾರಾಯಣಪ್ಪ(48) ಬರ್ಬರ ಹತ್ಯೆ ಮಾಡಲಾಗಿದೆ. ನಾರಾಯಣಪ್ಪನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಕೃಷ್ಣಾ ರೆಡ್ಡಿ, ನಾರಾಯಣಪ್ಪನ ಪತ್ನಿ ಲಕ್ಷ್ಮಮ್ಮ ಮೇಲೂ ತಲ್ವಾರ್ನಿಂದ ಹಲ್ಲೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಲಕ್ಷ್ಮಮ್ಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುಯತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೃಷ್ಣಾ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಕೊಲೆ ಯತ್ನ ಆರೋಪದಡಿ ದೂರು ನೀಡಿದ್ದ ನಾರಾಯಣಪ್ಪ, ಕ್ಯಾಸಂಬಳ್ಳಿ ಠಾಣೆ ಪೊಲೀಸರಿಂದ ಆರೋಪಿ ಕೃಷ್ಣಾ ರೆಡ್ಡಿ ಬಂಧನ ಮಾಡಲಾಗಿದೆ.
ಅಪರಿಚಿತ ಶವ ಪತ್ತೆ
ಧಾರವಾಡ: ನಗರದ ಸುಭಾಸ್ ರಸ್ತೆಯ ಹೂವಿನ ಮಾರುಕಟ್ಟೆ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಪಾನಮತ್ತನಾಗಿ ಮಲಗಿರೋ ಶಂಕೆ ವ್ಯಕ್ತವಾಗಿದ್ದು, ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸುಮಾರು 30 ವರ್ಷದ ವ್ಯಕ್ತಿಯಾಗಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಕಾಡಾನೆ ದಾಲಿ; ಕಾರ್ಮಿಕ ಸಾವು
ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ-ಕಾಡಾನೆ ನಡುವಿನ ಸಂಘರ್ಷ ಮುಂದುವರೆದಿದ್ದು, ಕಾಡಾನೆ ತುಳಿತಕ್ಕೆ ಕಾರ್ಮಿಕ ಬಲಿಯಾಗಿರುವಂತಹ ಘಟನೆ ಜಿಲ್ಲೆ, ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್‌ನಲ್ಲಿ ನಡೆದಿದೆ. ಕೆಂಪೆಹಾನಲ್ ಗ್ರಾಮದ ರವಿ (40) ಮೃತ ವ್ಯಕ್ತಿ. ಇಂದು ಬೆಳಿಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 20 ಕಾರ್ಮಿಕರು, ಈ ವೇಳೆ ಏಕಾಏಕಿ ಸಲಗ ದಾಳಿ ಮಾಡಿದೆ. ಕಾರ್ಮಿಕನನ್ನು ತುಳಿದು ಸಾಯಿಸಿರುವ ಕಾಡಾನೆ, ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸ್ಥಳದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.