Crime News: ಐದು ಸಾವಿರ ರೂಪಾಯಿಗಾಗಿ ಮಟ್ಕಾ ಬುಕ್ಕಿಗಳಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿತ, ಆರೋಪಿಗಳು ಅರೆಸ್ಟ್
ಮಟ್ಕಾ ಬುಕ್ಕಿ ಮಲ್ಲಪ್ಪ ತಂಗಡಗಿ ಹಾಗೂ ಮಕ್ಕಳು ಸೇರಿದಂತೆ ಆರೇಳು ಮಂದಿ ಐದು ಸಾವಿರ ಕೊಡದಿದ್ರೆ ಕೊಲೆ ಮಾಡೋದಾಗಿ ಹೇಳಿ ಭೀಮಾಶಂಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ಭೀಮಾಶಂಕರ್ ಹಾಗೂ ಈತನ ಸಹೋದರರ ಮಧ್ಯೆ ಜಗಳಕ್ಕೆ ಸಂಬಂಧಿಸಿದಂತೆ ನ್ಯಾಯ ಪಂಚಾಯ್ತಿ ಮಾಡಿದ್ದಕ್ಕಾಗಿ ಮಲ್ಲಪ್ಪ ತಂಗಡಗಿ ಹಣ ಕೇಳಿದ್ದ.
ಯಾದಗಿರಿ: ಐದು ಸಾವಿರ ರೂ. ಹಣಕ್ಕಾಗಿ ಮಟ್ಕಾ ಬುಕ್ಕಿಗಳು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಯಾದಗಿರಿ ನಗರದ ರೂರಲ್ ಪೊಲೀಸ್ ಠಾಣೆಯ ರಸ್ತೆಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಭೀಮಾಶಂಕರ್ ಹಲ್ಲೆಗೊಳಗಾದ ವ್ಯಕ್ತಿ. ಭೀಮಾಶಂಕರ್ಗೆ ಆರೇಳು ಜನ ಸೇರಿಕೊಂಡು ಮನ ಬಂದಂತೆ ಥಳಿಸಿದ್ದಾರೆ. ಸದ್ಯ ಭೀಮಾಶಂಕರ್ರನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಟ್ಕಾ ಬುಕ್ಕಿ ಮಲ್ಲಪ್ಪ ತಂಗಡಗಿ ಹಾಗೂ ಮಕ್ಕಳು ಸೇರಿದಂತೆ ಆರೇಳು ಮಂದಿ ಐದು ಸಾವಿರ ಕೊಡದಿದ್ರೆ ಕೊಲೆ ಮಾಡೋದಾಗಿ ಹೇಳಿ ಭೀಮಾಶಂಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ಭೀಮಾಶಂಕರ್ ಹಾಗೂ ಈತನ ಸಹೋದರರ ಮಧ್ಯೆ ಜಗಳಕ್ಕೆ ಸಂಬಂಧಿಸಿದಂತೆ ನ್ಯಾಯ ಪಂಚಾಯ್ತಿ ಮಾಡಿದ್ದಕ್ಕಾಗಿ ಮಲ್ಲಪ್ಪ ತಂಗಡಗಿ ಹಣ ಕೇಳಿದ್ದ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲ್ಲೆ ಬಳಿಕ ನಾಲ್ಕು ಜನರನ್ನ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಎಸ್ಪಿ ಡಾ. ಸಿಬಿ ವೇದಾಮೂರ್ತಿ ಬಂಧಿತ ನಾಲ್ವರ ವಿರುದ್ಧ ರೌಡಿ ಶೀಟರ್ ಓಪನ್ ಮಾಡಿದ್ದಾರೆ.
ಖತರ್ನಾಕ್ ಬೈಕ್ ಕಳ್ಳ ಅರೆಸ್ಟ್ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳನನ್ನು ಹುಣಸಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡುರು ಗ್ರಾಮದ ತಿರುಪತಿ ರಾಠೋಡ್ ಬಂಧಿತ ಆರೋಪಿ. 15 ರಿಂದ 20 ಸಾವಿರ ರೂಪಾಯಿವರೆಗೆ ಬೈಕ್ ಅಡವಿಟ್ಟು ಸಾಲ ಪಡೆದು ಎಸ್ಕೇಪ್ ಆಗುತ್ತಿದ್ದ. ಒಂದೇ ತಿಂಗಳಲ್ಲೇ ಪೊಲೀಸರು ಬೈಕ್ ಕಳ್ಳನನ್ನು ಪತ್ತೆ ಮಾಡಿದ್ದಾರೆ. ಆರೋಪಿಯಿಂದ 14 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಅಂದಾಜು 6 ಲಕ್ಷ 50 ಸಾವಿರ ರೂಪಾಯಿ ಬೆಲೆ ಬಾಳುವ ಬೈಕ್ಗಳು ಜಪ್ತಿಯಾಗಿವೆ. ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನ, ಸಿಪಿಐ ದೌಲತ್ ಕುರಿ ನೇತೃತ್ವದಲ್ಲಿ ಕಳ್ಳನ ಬಂಧನವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿ ಖದೀಮ ಪರಾರಿಯಾಗಿದ್ದ. ಬೈಕ್ ಕಳ್ಳತನ ಮಾಡಿ ಪರಾರಿಯಾಗುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ವಿಡಿಯೋದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.
ಟ್ರಕ್ ಬೈಕ್ ನಡುವೆ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು ಬೆಳಗಾವಿ: ಕುಡಚಿ-ಜಮಖಂಡಿ ರಸ್ತೆಯ ಯಲ್ಪಾರಟ್ಟಿ ಬಳಿ ಟ್ರಕ್ ಡಿಕ್ಕಿಯಾಗಿ ಬೈಕ್ ಸವಾರ ಅನೀಲ ಗುಂಡು ಘೋರ್ಪಡೆ(20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Tue, 10 May 22