ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಸರ್ಕಾರ; ಲೌಡ್​ಸ್ಪೀಕರ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

Loudspeaker: ಇನ್ಮುಂದೆ ಲೌಡ್​ಸ್ಪೀಕರ್ ಬಳಸುವವರು ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೃತೃತ್ವದ ರಾಜ್ಯ ಸರ್ಕಾರ ಮಣಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಸರ್ಕಾರ; ಲೌಡ್​ಸ್ಪೀಕರ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ
ವಿಧಾನಸೌಧ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 10, 2022 | 9:49 PM

ಬೆಂಗಳೂರು: ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್​ಸ್ಪೀಕರ್ ಬಳಕೆ ವಿಚಾರದಲ್ಲಿ (Azaan, Hanuman Chalisa) ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಲೌಡ್​ಸ್ಪೀಕರ್ (Loudspeaker) ಬಳಸುವವರು ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೃತೃತ್ವದ ರಾಜ್ಯ ಸರ್ಕಾರ ಮಣಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 15 ದಿನಗಳೊಳಗಾಗಿ ಅನುಮತಿ ಪಡೆಯಬೇಕೆಂದು ಸುಪ್ರೀಂಕೋರ್ಟ್​ ಇತ್ತೀಚೆಗೆ ತೀರ್ಪು ನೀಡಿದ್ದು, ಅದರ ಪಾಲನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ (Karnataka government) ಈ ಹೊಸ ಆದೇಶ ಹೊರಬಿದ್ದಿದೆ.

ಅನಧಿಕೃತ ಮೈಕ್​ಗಳ ತೆರವಿಗೆ ರಾಜ್ಯ ಸರ್ಕಾರ ಗಡುವು ವಿಚಾರ: ಮೈಕ್ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿದೆ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಮೈಕ್‌ ಶಬ್ದ ಈ ಕೆಳಗೆ ನಿಗದಿಪಡಿಸಿದ ಡೆಸಿಬಲ್‌ಗಳಿಗಿಂತ ಹೆಚ್ಚಿರಬಾರದು: ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 75ರಿಂದ 70 ಡೆಸಿಬಲ್‌ ವಾಣಿಜ್ಯ ಪ್ರದೇಶಗಳಲ್ಲಿ ಬೆಳಗ್ಗೆ 55 ರಾತ್ರಿ 65 ಡೆಸಿಬಲ್‌ ಜನವಸತಿ ಪ್ರದೇಶದಲ್ಲಿ ಬೆಳಗ್ಗೆ 55 ರಾತ್ರಿ 45 ಡೆಸಿಬಲ್‌ ಸೈಲೆಂಟ್ ಜೋನ್‌ನಲ್ಲಿ ಬೆಳಗ್ಗೆ 50 ರಾತ್ರಿ 40 ಡೆಸಿಬಲ್‌

ಇನ್ನು ಅನಧಿಕೃತ ಮೈಕ್​ಗಳ ತೆರವಿಗೆ ರಾಜ್ಯ ಸರ್ಕಾರ ಗಡುವು ಹಿನ್ನೆಲೆ ಸುಪ್ರಭಾತ ಅಭಿಯಾನವನ್ನು ಶ್ರೀರಾಮಸೇನೆ ಸಂಘಟನೆ ಹಿಂಪಡೆದಿದೆ. ಈ ಬಗ್ಗೆ ಧಾರವಾಡದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್​ ತಿಳಿಸಿದ್ದಾರೆ. ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ. ಮೈಕ್ ಹಾಕುವವರಿಗೆಲ್ಲ ಗಡುವು ಕೊಡಲಾಗಿದೆ. ಇದಕ್ಕೆ ಹಿಂದೂ ಪರ ಸಂಘಟನೆಗಳ ಸ್ವಾಗತವಿದೆ. ಮೈಕ್ ಅನುಮತಿ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ತಡವಾದರೂ ಯೋಗ್ಯ ನಿರ್ಣಯ ಇದಾಗಿದೆ. ಸದ್ಯಕ್ಕೆ 15 ದಿನ ಗಡುವು ಕೊಟ್ಟಿದ್ದಾರೆ. ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ, ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ ಮಾಡಲಾಗಿದೆ. ಡಿವೈಎಸ್​ಪಿ, ಎಸಿಪಿ ಹಾಗೂ ಪೊಲೀಸ್ ಕಮಿಷನರ್ ಲೆವಲ್ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದಕ್ಕೆ ಸಿಎಂಗೆ ನಾವು ಅಭಿನಂದನೆ ಹೇಳುತ್ತೇವೆ. ನಾವು ನಮ್ಮ ಹೋರಾಟ ವಾಪಸ್ ಪಡೆಯುತ್ತೇವೆ. ನಾಳೆಯಿಂದ ಬೆಳಿಗ್ಗೆ ಹಾಕುವ ಸುಪ್ರಭಾತ ನಿಲ್ಲಿಸುತ್ತೇವೆ. 15 ದಿನದ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ.

ಧ್ವನಿ ವರ್ಧಕದ ಸರ್ಕಾರಿ ನಿರ್ದೇಶನದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಪ್ರಶ್ನೆ: 1-ಸರ್ಕಾರವು ಧ್ವನಿ‌ವರ್ಧಕದ ಅನುಮತಿ ನೀಡಲು ಒಂದು ಸಮಿತಿಯನ್ನು ಮಾಡಿದೆ. 15 ದಿನದಲ್ಲಿ ಅನುಮತಿ ಪಡೆಯಲು ಹೇಳಿದೆ. ಆದರೆ ಮಾನ್ಯ ಸರ್ವೋಚ್ಚ‌ ನ್ಯಾಯಾಲಯದ ಆದೇಶ ಮತ್ತು ಶಬ್ದ ಮಾಲಿನ್ಯ ತಡೆ ಕಾಯಿದೆಯ ಪ್ರಕಾರ ಧಾರ್ಮಿಕ ಸ್ಥಳಗಳಿಗೆ ವರ್ಷವಿಡಿ ಧ್ವನಿವರ್ಧಕ ಬಳಸಲು ಅನುಮತಿ ನೀಡಲು ಅವಕಾಶ ಮತ್ತು ಅಧಿಕಾರ ಇದೆಯಾ? 2-ಒಮ್ಮೆ ಅವಕಾಶ ನೀಡಿದರೆ ಅದರ‌ ಶಬ್ದದ ಡೆಸಿಬಲ್ ಹೇಗೆ ನಿಯಂತ್ರಣ ಮಾಡುವೀರಿ? 3-ಅಜಾನ್ ನಂತರ ಮಾಡುವ ಪ್ರವಚನಗಳಿಗೂ ಇದು ಅನ್ವಯ ಆಗುತ್ತದೆಯಾ?

 Permission from government authorities is a must to use Loudspeakers says Karnataka government

ಲೌಡ್​ಸ್ಪೀಕರ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

Permission from government authorities is a must to use Loudspeakers says Karnataka government 2

ಲೌಡ್​ಸ್ಪೀಕರ್ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:17 pm, Tue, 10 May 22