ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಬೆಂಗಳೂರಿನ ಕೆಂಗೇರಿ ಫ್ಲೈಓವರ್​ ಬಳಿ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಗೇಶ್​ನನ್ನು ಹಿಡಿಯಲು ಯತ್ನಿಸಿದ ಪಿಸಿ ಮಹದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.​ ಈ ವೇಳೆ ಆತನ ಮೇಲೆ ಗುಂಡು ಹಾರಿಸಲಾಗಿದೆ.

ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ
Follow us
ಗಂಗಾಧರ​ ಬ. ಸಾಬೋಜಿ
|

Updated on:May 14, 2022 | 8:31 AM

ಬೆಂಗಳೂರು: ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಆ್ಯಸಿಡ್ ನಾಗನನ್ನು ಪೊಲೀಸರು ಬಂಧಿಸಿ ಕರೆತರುತ್ತಿದ್ದ ವೇಳೆ ವಾಹನ ನಿಲ್ಲಿಸುವಂತೆ ಕೇಳಿದ್ದಾನೆ. ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಕೇಳಿದ್ದ ನಾಗೇಶ್​, ನೈಸ್ ​ರಸ್ತೆ ಬಳಿ ವಾಹನ ನಿಲ್ಲಿಸದೆ ಬೆಂಗಳೂರಿನ ಕೆಂಗೇರಿ ಫ್ಲೈಓವರ್​ ಬಳಿ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಗೇಶ್​ನನ್ನು ಹಿಡಿಯಲು ಯತ್ನಿಸಿದ ಪಿಸಿ ಮಹದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.​ ಗಾಳಿಯಲ್ಲಿ ಗುಂಡುಹಾರಿಸಿ ತಪ್ಪಿಸಿಕೊಳ್ಳದಂತೆ ಪಿಐ ಎಚ್ಚರಿಕೆ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಇನ್ಸ್​ಪೆಕ್ಟರ್ ಪ್ರಶಾಂತ್ ಎಚ್ಚರಿಕೆ ನೀಡಿದ್ರು ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಆವಾಗ ನಾಗೇಶ್ ಬಲಗಾಲಿಗೆ ಇನ್ಸ್​ಪೆಕ್ಟರ್​ ಪ್ರಶಾಂತ್ ಗುಂಡು ಹಾರಿಸಿದ್ದಾರೆ.​ ಗಾಯಾಳು ನಾಗನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಾಗೇಶ್​ಗೆ ಹೆಚ್ಚಿನ ಚಿಕಿತ್ಸೆಗಾಗಿ ಕೆಂಗೇರಿಯ BGS​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ.

ಯುವತಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್​ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ. 16 ದಿನಗಳ ಬಳಿಕ ಪೊಲೀಸರಿಗೆ ಪತ್ತೆಯಾಗಿದ್ದೇಗೆ. ನಿರಂತರ ತಲಾಶ್​ನಲ್ಲಿದ್ದ ಪೊಲೀಸರಿಗೆ ಸಿಕ್ಕ ಬ್ರೇಕ್ ಥ್ರೂ ಏನು ಎನ್ನುವ ಮಾಹಿತಿ ಟಿವಿ 9 ತೆರದಿಡಲಿದೆ ಆಸಿಡ್ ನಾಗನ ಇನ್ಸೈಡ್ ಸ್ಟೋರಿ. ನಾಗ ಆಶ್ರಮದಲ್ಲಿರೋ ಮಾಹಿತಿ ಮೊದಲು ಸಿಕ್ಕಿದ್ದು ಯಾರಿಗೆ..? ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್​ಗೆ ಸಂದೇಶ ತಲುಪಿದೆ. ಆ ಸಂದೇಶದ ಜೊತೆಗೆ ಖಾವಿ ತೊಟ್ಟು ಧ್ಯಾನಕ್ಕೆ ಕುಳಿತಿದ್ದ ನಾಗೇಶ್​ನ ಅದೊಂದು ಫೋಟೊ ಕೂಡ ಇತ್ತು. ಮೊದಲಿಗೆ ಬಂದ ಫೋಟೊ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಆ ಬಳಿಕ ನಾಗನ ಬಂಧನಕ್ಕೆ ಪ್ಲ್ಯಾನ್ ಮಾಡಲಾಗಿದೆ. ಕೃತ್ಯ ಎಸಗಿ ಊರು ಬಿಟ್ಟ ನಾಗ ಆಶ್ರಮ ಸೇರಿದ್ದ. ಏಪ್ರಿಲ್ 28 ರಂದು ಯುವತಿ ಮೇಲೆ ಆಸಿಡ್ ದಾಳಿ ಮಾಡಿದ್ದ ನಾಗೇಶ, ನಂತರ ಸೈಲೆಂಟ್​ ಆಗಿ ಆಶ್ರಮಕ್ಕೆ ಸೇರಿದ್ದ. ಪ್ರೀ ಪ್ಲ್ಯಾನ್ ಕೃತ್ಯ ಬಳಿಕ ಆಶ್ರಮದಲ್ಲಿ ಆಶ್ರಯ ಪಡೆದಿದ್ದ. ಆಶ್ರಮದಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ನೀಡದೇ ನಾಗೇಶ ಉಳಿದುಕೊಂಡಿದ್ದ.

ನಾಗೇಶನ ಹುಡುಕಾಟದಲ್ಲಿ ಪೊಲೀಸರ ಹಲವು ಆಯಾಮದ ತನಿಖೆ ಮಾಡಿದ್ದು, ಟೆಕ್ನಿಕಲ್ ಆಗಿ ನಿಪುಣನಾಗಿದ್ದ ನಾಗೇಶನಿಂದ ಯಾವ ಕ್ಲ್ಯೂ ಸಿಕ್ಕಿರಲಿಲ್ಲ. ಕುಟುಂಬಸ್ಥರು, ಸಂಬಂಧಿಕರು, ಸ್ನೇಹತರಿಗೆ ಗ್ರಿಲ್ ನಡೆಸಿದ್ದ ಪೊಲೀಸರು, ಜೊತೆಗೆ ವಿಶೇಷ ತಂಡಗಳಿಂದ ಹೊರ ರಾಜ್ಯಗಳಾದ ಆಂಧ್ರ, ತೆಲಂಗಾಣ, ಕೇರಳು, ತಮಿಳುನಾಡು ಜೊತೆಗೆ ದೆಹಲಿಯಲ್ಲೂ ಪೊಲೀಸರು ತಡಕಾಡಿದ್ದಾರೆ. ನಾಗೇಶ ಬಗೆಗಿನ ಯಾವುದೇ ದಾಖಲಾತಿ ಹಾಗೂ ಮಾಹಿತಿಗಾಗಿ ಹುಡುಕಾಟ ಮಾಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲೂ ಹುಡುಕಾಟ ನಡೆದಿದ್ದು, ಆತ ಉಳಿದುಕೊಂಡಿದ್ದ ಆಶ್ರಮಕ್ಕೂ ಪೊಲೀಸರು ತೆರಳಿದ್ದು, ಆಶ್ರಮದ ದಾಖಲೆ ಪರಿಶೀಲನೆ ವೇಳೆ ನಾಗೇಶ್ ಹೆಸರು ಪತ್ತೆಯಾಗಿದೆ.

ತಮಿಳುನಾಡಿನ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ ಆ್ಯಸಿಡ್​​ ನಾಗ ಆಶ್ರಮದಲ್ಲಿ ತುಂಬಾ ಒಳ್ಳೆಯವನಂತೆ ನಟಿಸುತ್ತಿದ್ದ. ನಾನೊಬ್ಬ ಅನಾಥನೆಂದು ಹೇಳಿಕೊಂಡ ಆಶ್ರಯ ಪಡೆದಿದ್ದ. ಕಾವಿ ತೊಟ್ಟು ಸನ್ಯಾಸಿಯಂತೆ ನಾಟಕವಾಡಿ ವಿಶ್ವಾಸಗಳಿಸಿದ್ದ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣಶ್ರೀ ಆಶ್ರಮದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಗಳಿಸಿದ್ದ ನಾಗೇಶ್,​  ಆಶ್ರಮದಲ್ಲಿ ಪ್ರತಿದಿನ ಧ್ಯಾಮ, ಜಪ ತಪ ಮಾಡಿಕೊಂಡಿದ್ದ. ಆ್ಯಸಿಡ್ ನಾಗನನ್ನು ಬಂಧಿಸಲು ಬೆಂಗಳೂರು ಪೊಲೀಸರು ತೆರಳಿದ್ದರು. ಈ ವೇಳೆ ಆ್ಯಸಿಡ್ ನಾಗನ ಪರ ಆಶ್ರಮದವರಿಂದ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಇವರು ಆ್ಯಸಿಡ್ ಪ್ರಕರಣ ಆರೋಪಿ ನಾಗೇಶ್ ಅಲ್ಲ ಎಂದಿದ್ದರು. ಈತನ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಎಂದು ಆಶ್ರಮದಲ್ಲಿದ್ದವರು ಹೇಳಿದ್ದರು. ಪೊಲೀಸರು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಿಂದ ಆ್ಯಸಿಡ್ ನಾಗ ಬಲೆಗೆ ಬಿದಿದ್ದಾನೆ. ಆಶ್ರಮದಲ್ಲಿ ಪತ್ರಿಕಾ ಪ್ರಕಟಣೆ ಫೋಟೊ ನೋಡಿ ಪೊಲೀಸರಿಗೆ ವ್ಯಕ್ತಿ ಮಾಹಿತಿ ನೀಡಿದ್ದ. ಕೈ ಮೇಲೆ ಆ್ಯಸಿಡ್ ಬಿದ್ದ ಗಾಯ ಕೂಡ ಆಗಿತ್ತು. ಅಲ್ಲಿಗೆ ಈತನೇ ಆ್ಯಸಿಡ್ ನಾಗ ಅನ್ನೋದು ಕನ್ಫರ್ಮ್ ಆಗಿತ್ತು. ಅಂತಿಮವಾಗಿ ವಶಕ್ಕೆ ಪಡೆದು ಕರೆತಂದ ಬೆಂಗಳೂರು ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ನಮ್ಮ ಪೊಲೀಸರು ದಕ್ಷತೆ, ಶ್ರಮ ವಹಿಸಿ ಆರೋಪಿ ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಅಡಗಿದ್ದ ಆರೋಪಿ ನಾಗೇಶ್​ನನ್ನು ಬಂಧಿಸಿದ್ದಾರೆ. ಅತ್ಯಂತ ದಕ್ಷತೆ, ವೃತ್ತಿಪರರೆಂಬುದನ್ನು ಸಾಬೀತು ಪಡಿಸಿದ್ದಾರೆ. ಪೊಲೀಸರ ಕಾರ್ಯವೈಖರಿಯನ್ನು ಗೃಹಸಚಿವ ಆರಗ ಶ್ಲಾಘಿಸಿದರು. ನಮ್ಮ ಪೊಲೀಸರಿಗೆ ತಮಿಳುನಾಡು ಪೊಲೀಸರು ಸಹಕರಿಸಿದ್ದಾರೆ. ತಮಿಳುನಾಡು ಪೊಲೀಸರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಫಾಸ್ಟ್​ ಟ್ರ್ಯಾಕ್​ ಕೋರ್ಟ್​ನಲ್ಲಿ ಪ್ರಕರಣ ವಿಚಾರಣೆ ನಡೆಯಲಿದೆ. ಆ್ಯಸಿಡ್​ ನಾಗನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ನಾಗೇಶ್​ಗೆ ಶಿಕ್ಷೆಯಾದರೆ ಸಂತ್ರಸ್ತೆ, ಕುಟುಂಬಕ್ಕೆ ನೆಮ್ಮದಿ ಸಿಗಲಿದೆ. ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ. ಯುವತಿ ಆದಷ್ಟು ಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಆಸ್ಫತ್ರೆಗೆ ದಾಖಲಾದ ಮೊದಲ ದಿನವೇ ನನ್ನ ಕಣ್ಣು ಮುಂದೆನೇ ಅವನಿಗೆ ಶಿಕ್ಷೆ ಆಗಬೇಕು ಅಂತಾ ಕುಟುಂಬಸ್ಥರ ಬಳಿ ಯುವತಿ ಹೇಳಿದ್ದಳು. ಮೊದಲ ದಿನವೇ ಅವನನ್ನ ಅರೆಸ್ಟ್ ಮಾಡಿದ್ದಾರೆ ಶಿಕ್ಷೆ ಕೊಡ್ತಾರೆ ಅಂತಾ ಯುವತಿಗೆ ಕುಟುಂಬಸ್ಥರು ತಿಳಿಸಿದ್ದಾರೆ. ನೀನು ಹುಷಾರಾಗಮ್ಮ ಅವನನ್ನ ಅರೆಸ್ಟ್ ಮಾಡಿದ್ದಾರೆ ಶಿಕ್ಷೆ ಕೊಡ್ತಾರೆ ಅಂತಾ ಮೊದಲನೇ ದಿನನೇ ಅವರ ದೊಡ್ಡಮ್ಮ ಸುಶೀಲಮ್ಮ ಹೇಳಿದ್ದಾರೆ. ಈಗ ಅರೆಸ್ಟ್ ಆಗಿದ್ದಾನೆ ಅಂತಾ ನಾವು ಹೇಳಲ್ಲ. ನನ್ನ ಮಗಳಿಗೆ ಮೊದಲ ದಿನವೇ ಅರೆಸ್ಟ್ ಆಗಿದ್ದಾನೆ ಅಂತಾ ಅಂತಾ ಹೇಳಿದ್ದೇವೆ. ಈಗ ಅರೆಸ್ಟ್ ಆದ ಅಂತಾ ಹೇಳಿದ್ರೆ ಅವಳು ನೊಂದು ಕೊಳ್ತಾಳೆ ಅಂತಾ ಅಳಲು ತೊಡಿಕೊಂಡಿದ್ದಾರೆ. ಆಸ್ಫತ್ರೆಯಲ್ಲೆ ಇದ್ದು ಯುವತಿಯನ್ನ ನೋಡಿಕೊಳ್ತಿರೋ ಅವರ ದೊಡ್ದಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:10 am, Sat, 14 May 22