ದರೋಡೆಗೆ ಸಂಚು ರೂಪಿಸಿದ್ದ ಇಬ್ಬರು ರೌಡಿ ಶೀಟರ್‌ಗಳು, 8 ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು ನಗರ ಪೊಲೀಸ್ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಬ್ಬರು ರೌಡಿ ಶೀಟರ್‌ಗಳು ಮತ್ತು ಅವರ ಎಂಟು ಸಹಚರರನ್ನು ಬಂಧಿಸಿದೆ ಎಂದು ಅಪರಾಧ ವಿಭಾಗದ ನಗರದ ಜಂಟಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರು: ಹನುಮಂತನಗರ ಪಿಎಸ್ ವ್ಯಾಪ್ತಿಯಲ್ಲಿ ಇಬ್ಬರು ರೌಡಿ ಶೀಟರ್‌ಗಳು ಹಾಗೂ ಅವರ ಎಂಟು ಜನ ಸಹಚರರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ದರೋಡೆಗೆ ಸಂಚು ರೂಪಿಸಿದ್ದಕ್ಕಾಗಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಇವರಿಂದ ಮಾರಕಾಸ್ತ್ರಗಳು ಮತ್ತು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಇಬ್ಬರು ರೌಡಿ ಶೀಟರ್‌ಗಳು ಮತ್ತು ಅವರ ಎಂಟು ಸಹಚರರನ್ನು ಬಂಧಿಸಿದೆ ಎಂದು ಅಪರಾಧ ವಿಭಾಗದ ನಗರದ ಜಂಟಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಗರದಲ್ಲಿ ದರೋಡೆಗೆ ಸಂಚು ರೂಪಿಸಿದ್ದಕ್ಕಾಗಿ ಎಲ್ಲಾ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಗುಪ್ತಾ ಹೇಳಿದರು. ಆರೋಪಿಯಿಂದ ಮಾರಕಾಸ್ತ್ರಗಳು ಹಾಗೂ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
In Hanumanta nagar PS limits 02 rowdy sheeters and their 08 accomplices were arrested by CCB Police for plotting a robbery. Seized lethal weapons and 02 cars from them. pic.twitter.com/PKPFYWUjGz
— Raman Gupta IPS (@JointCP_crime) May 13, 2022
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮನೆಯ ಗೋಡೆ ಕುಸಿದು 10 ಕುರಿಗಳು ಸಾವು ಚಾಮರಾಜನಗರ: ರಾತ್ರಿ ಇಡೀ ಜಿಟಿಜಿಟಿ ಮಳೆ ಹಿನ್ನಲೆ ಮನೆಯ ಗೋಡೆ ಕುಸಿದು 10 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ತಾಲೂಕು ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಮನೆಯೊಳಗಿದ್ದ ಜಯಮ್ಮ ಎಂಬಾಕೆ ಅಪಾಯದಿಂದ ಪಾರಾಗಿದ್ದಾರೆ. ಕುಸಿದ ಗೋಡೆಯ ಅಡಿಯಲ್ಲಿ ಕುರಿಗಳು ಸಿಲುಕಿದ್ದು, ಒಂದು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಕುಸಿದ ಮನೆಯೊಳಗೆ ಸಿಲುಕಿದ್ದ ಜಯಮ್ಮಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿ ಬಳ್ಳಾರಿ: ಸಂಡೂರು ಪಟ್ಟಣದ ಜ್ಯುವೇಲರಿ ಶಾಪನಲ್ಲಿ 825 ಗ್ರಾಂ ಬಂಗಾರವಿದ್ದ ಬ್ಯಾಗ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಸಂಡೂರಿನ SSV ಜ್ಯುವೇಲರಿ ಶಾಪನಲ್ಲಿ ನಡೆದಿದೆ. ಮಾಲೀಕ ಒಂದು ಬಾಗಿಲಿನ ಬೀಗ ತೆಗೆದು ಶಾಪ ಒಳಗೆ ಚಿನ್ನವಿದ್ದ ಚೀಲವನ್ನಿಟ್ಟು ಇನ್ನೊಂದು ಬಾಗಿಲು ತಗೆಯುವ ವೇಳೆ ಕಳ್ಳರು ಬ್ಯಾಗ ಎಗರಿಸಿದ್ದಾರೆ. 32,54,000 ಮೌಲ್ಯದ 825 ಗ್ರಾಂ ಬಂಗಾರ ಕಳ್ಳತನವಾಗಿದ್ದು, ಚಿನ್ನದಂಗಡಿ ಮಾಲೀಕ ಮೆಹಬೂಬಬಾಷಾರಿಂದ ದೂರು ದಾಖಲು ಮಾಡಲಾಗಿದೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಿನ್ನದ ಬ್ಯಾಗ ಕದ್ದು ಬೈಕ್ನಲ್ಲಿ ಮೂವರು ಕಳ್ಳರು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿನ್ನ ಕದ್ದು ಪೊಲೀಸ ಠಾಣೆಯ ಮುಂದಿನ ರಸ್ತೆಯಲ್ಲೇ ಪರಾರಿಯಾಗಿದ್ದಾರೆ. ಪ್ರಕರಣ ಕುರಿತು ಸಂಡೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published On - 8:59 pm, Fri, 13 May 22