ಆ್ಯಸಿಡ್​ ದಾಳಿಕೋರ ಸಿಕ್ಕಿಬಿದ್ದ! ಸ್ವಾಮೀಜಿ ವೇಷ ಧರಿಸಿಕೊಂಡಿದ್ದ ಆರೋಪಿ ನಾಗೇಶ ತಿರುವಣ್ಣಾಮಲೈನಲ್ಲಿ ಅರೆಸ್ಟ್​ ಆಗಿದ್ದು ಹೇಗೆ?

ಆ್ಯಸಿಡ್​ ದಾಳಿಕೋರ ಸಿಕ್ಕಿಬಿದ್ದ! ಸ್ವಾಮೀಜಿ ವೇಷ ಧರಿಸಿಕೊಂಡಿದ್ದ ಆರೋಪಿ ನಾಗೇಶ ತಿರುವಣ್ಣಾಮಲೈನಲ್ಲಿ ಅರೆಸ್ಟ್​ ಆಗಿದ್ದು ಹೇಗೆ?
ಆರೋಪಿ ನಾಗೇಶ್

ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. 16 ದಿನಗಳ ಬಳಿಕ ಕೊನೆಗೂ ನಾಗೇಶ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್​ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

TV9kannada Web Team

| Edited By: Ayesha Banu

May 13, 2022 | 7:12 PM

ಬೆಂಗಳೂರು: ಏ.28ರಂದು ಯುವತಿ ಮೇಲೆ ಌಸಿಡ್ ಎರಚಿ(Acid Attack) ಎಸ್ಕೇಪ್ ಆಗಿದ್ದ ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. 16 ದಿನಗಳ ಬಳಿಕ ಕೊನೆಗೂ ನಾಗೇಶ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್​ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಗೇಶ್, ಸುಂಕದಕಟ್ಟೆ ಯುವತಿಯ ಮೇಲೆ ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದ. ಸದ್ಯ 16 ದಿನಗಳ ಬಳಿಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆರೋಪಿ ತಿರುವಣ್ಣಾಮಲೈನ ರಮಣಾ ಆಶ್ರಮದಲ್ಲಿ ಕಾವಿ ಬಟ್ಟೆ ಧರಿಸಿ ತಲೆಮರೆಸಿಕೊಂಡಿದ್ದ. ನಾನು ಸ್ವಾಮೀಜಿ ಎಂದು ಆಶ್ರಮದಲ್ಲಿ ಹೇಳಿಕೊಂಡಿದ್ದ. ಆಶ್ರಮದಲ್ಲಿ ಸಾವಿರಾರು ಜನರು ಇದ್ದಿದ್ದಕ್ಕೆ ನಾನು ಬಂದಿದ್ದೆ. ಆಶ್ರಮಕ್ಕೆ ಬಂದು ತಲೆಮರೆಸಿಕೊಂಡಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ನಾಗೇಶ್‌ ಮಾಹಿತಿ ನೀಡಿದ್ದಾನೆ.

ಭಕ್ತರ ಸೋಗಿನಲ್ಲಿ ಹೋಗಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿ ಬಂಧನ
ಕಾವಿ ಬಟ್ಟೆ ಧರಿಸಿ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್​ನನ್ನು ಹಿಡಿಯಲು ಭಕ್ತರ ವೇಷದಲ್ಲಿ ಮಫ್ತಿಯಲ್ಲಿ ಪೊಲೀಸರು ಆಶ್ರಮಕ್ಕೆ ತೆರಳಿದ್ದರು. ಭಕ್ತರ ವೇಷದಲ್ಲಿ ತೆರಳಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಆ್ಯಸಿಡ್ ದಾಳಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆರೋಪಿ ಆ್ಯಸಿಡ್ ನಾಗನ ಬಂಧನ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ. ತಂಡಗಳನ್ನ ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿತ್ತು. ಆರೋಪಿ ಇದ್ದ ಜಾಗದ ಕುರಿತು ಖಚಿತ ಮಾಹಿತಿ ಸಿಕ್ಕಿದ್ದು ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ ಎಂದರು.

ಘಟನೆ ಹಿನ್ನೆಲೆ
ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆರೋಪಿ ನಾಗೇಶ್ ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದ. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟೆಯ ಮುತ್ತೂಟು ಫಿನ್‌ಕಾರ್ಪ್‌ ಬಳಿ ಹುಚ್ಚು ಪ್ರೇಮಿ ನಾಗೇಶ್‌ ಆಸಿಡ್‌ ದಾಳಿ ನಡೆಸಿದ್ದ. ಮಾಹಿತಿಯ ಪ್ರಕಾರ ನಾಗೇಶ್‌ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದ್ರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ತನಗೆ ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೇಳಲು ನಾಗೇಶ್‌ ಸಿದ್ಧನಿರಲಿಲ್ಲ. ಯುವತಿ ಪ್ರೀತಿ ನಿರಾಕರಿಸಿದಾಗ ಆ್ಯಸಿಡ್‌ ಎರಚಿದ್ದ. ಸದ್ಯ ಆ್ಯಸಿಡ ದಾಳಿಗೊಳಗಾಗಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು ಐಸಿಯುನಿಂದ ಬರ್ನಿಂಗ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸಿ ಚೇತರಿಕೆ ಕಾಣುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada