ಯಲಹಂಕ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ಹಾಕದಂತೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ

ಯಲಹಂಕ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ಹಾಕದಂತೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ
ಬಿಬಿಎಂಪಿ ಕಛೇರಿ

ಯಲಹಂಕ ವಲಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

TV9kannada Web Team

| Edited By: Vivek Biradar

May 13, 2022 | 7:49 PM

ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಯಲಹಂಕ (Yalahanka) ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಖಾಲಿ ನಿವೇಶನಗಳಲ್ಲಿ ಸ್ವಚ್ಚವಾಗಿಟ್ಟುಕೊಳ್ಳದೆ ಘನತ್ಯಾಜ್ಯ/ಕಟ್ಟಡ ಭಗ್ನಾವಶೇಷಗಳನ್ನು ಹಾಕಿದ್ದಲ್ಲಿ 50,000 ರೂ. ಗಳಿಂದ 1,00,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.

ಆದೇಶವು ವಾರ್ಡ್ ಸಂಖ್ಯೆ. 01(ಕೆಂಪೇಗೌಡ), 02(ಚೌಡೇಶ್ವರಿ), 03(ಅಟ್ಟೂರು), 04(ಯಲಹಂಕ ನ್ಯೂ ಟೌನ್), 08(ಜಕ್ಕೂರು), 06(ಥಣಿಸಂದ್ರ), 07(ಬ್ಯಾಟರಾಯನಪುರ), 08(ಕೊಡಿಗೆಹಳ್ಳಿ), 09(ವಿದ್ಯಾರಣ್ಯಪುರ), 10(ದೊಡ್ಡಬೊಮ್ಮಸಂದ್ರ), ಮತ್ತು 11(ಕುವೆಂಪುನಗರ) ನಿವಾಸಿಗಳಿಗೆ ಆದೇಶ ಅನ್ವಯವಾಗುತ್ತದೆ.

Toll Free 155245: ಹಲೋ ಕಂದಾಯ ಸಚಿವರೇ ಸಹಾಯವಾಣಿ ಲೋಕಾರ್ಪಣೆ, ಅಲೆದಾಟವಿಲ್ಲದೆ ಮನೆ ಬಾಗಿಲಿಗೆ ಪಿಂಚಣಿ ಸೇವೆ! ಏನಿದು ಸಹಾಯವಾಣಿ?

ದೇಶದಲ್ಲೇ ಪ್ರಥಮ ಬಾರಿಗೆ ಕಂದಾಯ ಇಲಾಖೆಯ(Revenue Department) ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ ಹಲೋ ಕಂದಾಯ ಸಚಿವರೇ ಸಹಾಯವಾಣಿ (Toll Free) ಸಂಖ್ಯೆ 155245 ಇಂದು ಲೋಕಾರ್ಪಣೆಗೊಂಡಿತು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಸಹಾಯವಾಣಿ(HelpLine)ಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraja Bommai) ಮತ್ತು ಕಂದಾಯ ಸಚಿವ ಆರ್.ಅಶೋಕ (R.Ashoka) ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ, ಈ ಸಹಾಯವಾಣಿಯಿಂದ ಪಿಂಚಣಿ ಪಡೆಯುವವರಿಗೆ ಅನುಕೂಲವಾಗಲಿದೆ. ವೃದ್ಧರು, ವಿಧವೆಯರು, ಌಸಿಡ್ ಸಂತ್ರಸ್ತರ ಖಾತೆಗೆ ಪಿಂಚಣಿ ಜಮೆಯಾಗಲಿದೆ. ಇದಕ್ಕಾಗಿ 10,000ಕೋಟಿ ಹಣ ಮೀಸಲು ಇಡಲಾಗಿದೆ. 4ಲಕ್ಷ ಬೋಗಸ್ ಪಿಂಚಣಿ ಪ್ರಮಾಣ ಪತ್ರ ರದ್ದು ಮಾಡಿದ್ದೇವೆ. ಹಲೋ ಅಂದರೆ ಹೇಗೆ ಪಿಂಚಣಿ ಸಿಗುತ್ತೆ ಅನ್ನೋ ಕುತೂಹಲ ಇತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅರ್ಜಿದಾರರ ಆಧಾರ್, ಬ್ಯಾಂಕ ಖಾತೆ ನಂಬರ್ ಎಂಟ್ರಿ ಮಾಡಿದರೆ ಹಣ ಅವರ ಖಾತೆಗೆ ನೇರವಾಗಿ ಹೋಗುತ್ತೆ ಎಂದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada