ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನದಂದು ಪಂಚರತ್ನ ಕಾರ್ಯಕ್ರಮಕ್ಕೆ LED ಟಿವಿ ಅಳವಡಿಸಿದ 123 ವಾಹನ ಖರೀದಿಸಿದ ಜೆಡಿಎಸ್
ಜೆಡಿಎಸ್ ಪಕ್ಷವು ಜನತಾ ಜಲಧಾರೆ ಯಶಸ್ಸು ಬಳಿಕ, ಪಂಚರತ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯಾದ್ಯಂತ 123 LED ವಾಹನಗಳು ಸಂಚಾರಕ್ಕೆ ಸಿದ್ಧಗೊಂಡಿವೆ. 180 ಕ್ಷೇತ್ರಗಳಲ್ಲಿ 123 LED ವಾಹನಗಳು ಸಂಚರಿಸಲಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ಅಧಿನಾಯಕ ಹೆಚ್ ಡಿ ದೇವೇಗೌಡರ 90ನೇ ಜನ್ಮದಿನ. ಈ ದಿನ ವಿಶೇಷಕ್ಕೆ ಜೆಡಿಎಸ್ ಪಕ್ಷವು ಮುಂಬರುವ ಅಸೆಂಬ್ಲಿ ಚುನಾವಣೆ ಸಲುವಾಗಿ ಪಂಚರತ್ನ ಕಾರ್ಯಕ್ರಮಕ್ಕೆ 123 ವಾಹನ ಖರೀದಿಸಿದೆ. ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಯಶವಂತಪುರದ ಬಳಿ ವಾಹನಗಳನ್ನು ಹಸ್ತಾಂತರ ಮಾಡಲಾಗಿದೆ. ಜೆಡಿಎಸ್ ಪಕ್ಷವು ಜನತಾ ಜಲಧಾರೆ ಯಶಸ್ಸು ಬಳಿಕ, ಪಂಚರತ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯಾದ್ಯಂತ 123 LED ವಾಹನಗಳು ಸಂಚಾರಕ್ಕೆ ಸಿದ್ಧಗೊಂಡಿವೆ. 180 ಕ್ಷೇತ್ರಗಳಲ್ಲಿ 123 LED ವಾಹನಗಳು ಸಂಚರಿಸಲಿವೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಕೆಲ ಬಿಜೆಪಿ, ಕಾಂಗ್ರೆಸ್‌ನ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ. ಗ್ರಾಫಿಕ್ಸ್‌ನಲ್ಲಿ ಜನರನ್ನು ಸೃಷ್ಟಿಸಿದ್ರಾ ಅಂತಾ ಕೇಳಿದ್ದಾರಂತೆ. ಅವರಿಂದ ನಮಗೆ ಪ್ರಮಾಣ ಪತ್ರ ಬೇಕಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಇದೇ ವೇಳೆ ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಖರೀದಿಸಿರುವ 123 ಟಾಟಾ ಏಸ್ ವಾಹನಗಳಿಗೆ ಯಶವಂತಪುರದ ಬಳಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಸೇಲ್ಸ್ ಮ್ಯಾನೇಜರ್ ವಿಜಯ್ ಕುಮಾರ್, ಸೀನಿಯರ್ ಮ್ಯಾನೇಜರ್ ಮಂಜುನಾಥ್, ಟಾಟಾ ಮೋಟರ್ಸ್ ನ ಶ್ರೀಧರ್ ಕಟ್ಟಿ, ಶಾಸಕ ಮಂಜುನಾಥ್, ವಿಧಾನಪರಿಷತ್ ಸದಸ್ಯ ಬೋಜೇಗೌಡ ಮತ್ತಿತರರು ಇದ್ದರು. ವಾಹನಗಳಿಗೆ ಎಲ್‌ಇಡಿ ಅಳವಡಿಕೆ ನಂತರ ಸಂಚಾರ ಆರಂಭವಾಗಲಿದ್ದು, 180 ಕ್ಷೇತ್ರಗಳಲ್ಲಿ ಸಂಚರಿಸಲಿರುವ 123 ಎಲ್‌ಇಡಿ ವಾಹನಗಳು ಪಂಚರತ್ನ ಯೋಜನೆಗಳ ಕಿರುಚಿತ್ರಗಳ ಪ್ರದರ್ಶನ ಮಾಡಲಿವೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, 2023 ರ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕ್ರಮಗಳು ಹಾಗೂ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ 123 ವಾಹನಗಳನ್ನು ಖರೀದಿ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ: ಈ ವಾಹನಗಳಿಗೆ ಮುಂದಿನ 40 ದಿನಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸುತ್ತೇವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರದ ವಾಹನಗಳು ಸಂಚರಿಸಲಿವೆ ಎಂದರು. ರಾಜ್ಯಾದ್ಯಂತ 180 ಕ್ಷೇತ್ರಗಳಲ್ಲಿ ಜನತಾ ಜಲಧಾರೆ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಕೆಲ ಬಿಜೆಪಿ, ಕಾಂಗ್ರೆಸ್ ನ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ನಲ್ಲಿ ಜನರನ್ನು ಸೃಷ್ಟಿಸಿದ್ರಾ ಅಂತಾ ಕೇಳಿದ್ದಾರಂತೆ. ಅವರಿಂದ ಪ್ರಮಾಣಪತ್ರ ನಮಗೆ ಬೇಕಿಲ್ಲ ಎಂದು ತಿರುಗೇಟು ನೀಡಿದರು.
ಏನಿದು ಪಂಚರತ್ನ: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ಮಹಿಳಾ – ಯುವ ಸಬಲೀಕರಣ; ಇವೇ ಪಂಚರತ್ನ ಕಾರ್ಯಕ್ರಮಗಳು. ಎಲ್ ಇಡಿ ವಾಹನಗಳ ಮೂಲಕ ಈ ಐದು ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ಕೊಡಲಾಗುವುದು ಎಂದು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
Published On - 4:03 pm, Wed, 18 May 22