ಮಂಗಳವಾರ ಸುರಿದ ಭಾರಿ ಮಳೆಗೆ ತುಮಕೂರು ಜಿಲ್ಲೆಯಲ್ಲಿ ಕುಸಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತ

ಡಿವಿ ಹಳ್ಳಿಯಿಂದ ಆಚೇನಹಳ್ಳಿ ಮತ್ತು ಮರಿತಿಮ್ಮನಹಳ್ಳಿ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕುಸಿದಿರುವುದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕುಸಿದು ಬಿದ್ದಿದೆಯೆಂದು ಎರಡೂ ಗ್ರಾಮಗಳ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

TV9kannada Web Team

| Edited By: Arun Belly

May 18, 2022 | 5:28 PM

Tumakuru: ಕಳದೆರಡು ದಿನಗಳಿಂದ ರಾಜ್ಯದಾಂದ್ಯತ ಧಾರಾಕಾರವಾಗಿ ಸುರಿಯುತ್ತಿರು ಮಳೆ (downpour) ತಲ್ಲಣ ಸೃಷ್ಟಿಸಿದೆ ಮಾರಾಯ್ರೇ. ಕೆಲವು ಕಡೆ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಬೇರೆ ಕಡೆಗಳಲ್ಲಿ ಕೆರೆಗಳ ಕೋಡಿ (Lake banks) ಒಡೆದು ಹೊಲ-ಗದ್ದೆ ಮತ್ತು ಊರುಗಳ ಜಲಾವೃತಗೊಂಡಿವೆ. ಸೇತುವೆಗಳು ಕುಸಿದು ಊರುಗಳ ನಡುವಿನ ಸಂಪರ್ಕ ಕಡಿದುಹೋಗಿದೆ. ತುಮಕೂರು ಜಿಲ್ಲೆಯಲ್ಲೂ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ನಮಗೆ ಲಭ್ಯವಾಗಿರುವ ಈ ವಿಡಿಯೋ ತುಮಕೂರು ಜಿಲ್ಲೆಯದು. ಅವ್ಯಾಹತವಾಗಿ ಸುರಿದ ಮಳೆಗೆ ಸೇತುವೆಯೊಂದು ಕುಸಿದು ಬಿದ್ದಿರುವುದನ್ನು ನೀವು ನೋಡಬಹುದು. ಅಂದಹಾಗೆ ಇದು ಮಧುಗಿರಿ ತಾಲ್ಲೂಕಿನ ಆಚೇನಹಳ್ಳಿ (Achenahalli) ಗ್ರಾಮ.

ಡಿವಿ ಹಳ್ಳಿಯಿಂದ ಆಚೇನಹಳ್ಳಿ ಮತ್ತು ಮರಿತಿಮ್ಮನಹಳ್ಳಿ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕುಸಿದಿರುವುದರಿಂದ ಜನರಿಗೆ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕುಸಿದು ಬಿದ್ದಿದೆಯೆಂದು ಎರಡೂ ಗ್ರಾಮಗಳ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ನಿರ್ಮಿಸಿದ ಗುತ್ತೇದಾರ ಯಾರು ಅಂತ ಅವರಿಗೆ ಗೊತ್ತಿದೆಯೋ ಇಲ್ಲವೋ?

ಹಿಂದೆ, ಬಿಬಿಎಮ್​ಪಿ ವ್ತಾಪ್ತಿಯಲ್ಲಿ ರಸ್ತೆ, ಸೇತುವೆ, ಕಟ್ಟಡಗಳು ಕಳಪೆ ಕಾಮಗಾರಿ ಕಾರಣ ಕುಸಿದು ಬಿದ್ದರೆ ಮತ್ತು ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾದರೆ ಅವುಗಳನ್ನು ನಿರ್ಮಿಸಿದ ಗುತ್ತಿಗೆದಾರರೇ ಸರಿಪಡಿಸಬೇಕು, ದುರಸ್ತಿ ಮಾಡಬೇಕೆಂದು ಒಂದು ನಿಯಮ ಜಾರಿಗೊಳ್ಳುತ್ತಿದ್ದಂತೆ ಮಾಯಾವೂ ಆಯಿತು. ಆದು ಯಾಕೆ ಅಂತ ಅರ್ಥ ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ ಮಾರಾಯ್ರೇ.

ಹಾಗೆಯೇ ಇಲ್ಲಿ ಆಚೇನಹಳ್ಳಿ ಮತ್ತು ಮರಿ ತಿಮ್ಮನಹಳ್ಳಿ ನಿವಾಸಿಗಳು ಕಂಟ್ರ್ಯಾಕ್ಟರ್ ಮೇಲೆ ಕೋಪ ವ್ಯಕ್ತಪಡಿಸಿದರೆ ಅದರಿಂದ ಪ್ರಯೋಜನವೇನೂ ಆಗಲಾರದು. ಅವನು ಕಮೀಷನ್ ನೀಡಿ ಬಿಲ್ ಗಳನ್ನು ಪಾಸು ಮಾಡಿಸಿಕೊಂಡಿರುವುದರಿಂದ ಸಂಬಂಧಪಟ್ಟ ಮಿನಿಸ್ಟರ್ ಗಳು ತನ್ನ ತಂಟೆಗೆ ಬರಲಾರರು ಅಂತ ಅವನಿಗೆ ಚೆನ್ನಾಗಿ ಗೊತ್ತಿದೆ.

ಇದನ್ನೂ ಓದಿ:   ಮೈಸೂರು ಭಾಗದಲ್ಲಿ ಸುರಿಯುತ್ತಿರುವ ಮಳೆ ರೈತರ ಕೈಗೆ ಬಂದ ಫಸಲನ್ನು ಹಾಳು ಮಾಡುತ್ತಿದೆ

Follow us on

Click on your DTH Provider to Add TV9 Kannada