ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದರೆ, ಚಾಮರಾಜನಗರದಲ್ಲಿ ಮೋಡಗಳ (Could) ಆಟ ನಡೆಯುತ್ತಿದೆ. ಜಿಲ್ಲೆಯ ಕೊಳ್ಳೆಗಾಲದ ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮೋಡಗಳು ಸೃಷ್ಟಿಸರುವ ಮಾಯೆ ನೋಡುವುದಕ್ಕೆ ಕಣ್ಣೆರಡು ಸಾಲದು. ಸದ್ಯ ರಾಜ್ಯದಲ್ಲಿ ಜನ ಭಾರೀ ಮಳೆಗೆ ಹೈರಾಣಾಗಿದ್ದಾರೆ. ಆದರೆ ಚಾಮರಾಜನಗರದಲ್ಲಿ ಕಂಡು ಬಂದ ಮೋಡಗಳ ದೃಶ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರಕೃತಿಯೇ ಹಾಗೇ. ಯಾರಿಂದಲೂ ಸಾಧ್ಯವಾಗದ ಅದ್ಭುತ ಚಿತ್ರಣವನ್ನು ರಚಿಸುತ್ತದೆ. ಮಳೆಯ ನಡುವೆ ಸೃಷ್ಟಿಯಾದ ಈ ಮನಮೋಹಕ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ