Video: ಕೆಸರಿನಲ್ಲಿ ಸಿಲುಕಿದ ಮರ್ಸಿಡಿಸ್, ನೀರು ತುಂಬಿದ ರಸ್ತೆ, ಬೆಂಗಳೂರಿನ ಯಾವ ಎರಿಯಾದಲ್ಲಿ ಎಷ್ಟು ಮಳೆ?
ಮರ್ಸಿಡಿಸ್ ಬೆಂಜ್ ಕಾರ್ ಒಂದರ ಒಂದು ಬದಿಯ ಎರಡೂ ಚಕ್ರಗಳು ಕೆಸರಿನಲ್ಲಿ ಸಿಲುಕಿ, ಮತ್ತೆರೆಡು ಚಕ್ರಗಳು ನೆಲದಿಂದ ಮೇಲೆ ಬಂದಿರುವ ವಿಡಿಯೊ ಜನರ ಗಮನ ಸೆಳೆದಿದೆ.
ಬೆಂಗಳೂರು: ನಗರದಲ್ಲಿ ಮಂಗಳವಾರ ಗುಡುಗು, ಸಿಡಿಲು ಸಹಿತ ಸುರಿದ ಬಿರುಮಳೆಯಿಂದಾಗಿ ರಸ್ತೆಗಳ ಮೇಲೆ ಸೊಂಟಮಟ್ಟದ ನೀರು ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂಥ ಸಾಕಷ್ಟು ವಿಡಿಯೊ ತುಣುಕುಗಳು ಹರಿದಾಡುತ್ತಿವೆ. ಈ ಪೈಕಿ ಮರ್ಸಿಡಿಸ್ ಬೆಂಜ್ ಕಾರ್ ಒಂದರ ಒಂದು ಬದಿಯ ಎರಡೂ ಚಕ್ರಗಳು ಕೆಸರಿನಲ್ಲಿ ಸಿಲುಕಿ, ಮತ್ತೆರೆಡು ಚಕ್ರಗಳು ನೆಲದಿಂದ ಮೇಲೆ ಬಂದಿರುವ ವಿಡಿಯೊ ಜನರ ಗಮನ ಸೆಳೆದಿದೆ.. ಎಷ್ಟು ಲಕ್ಷ ರೂಪಾಯಿ ಕೊಟ್ಟು ಕಾರ್ ತಂದರೆ ತಾನೆ ಏನಂತೆ? ಬೆಂಗಳೂರು ಮಳೆಗೆ ಅದರ ಓನರ್ ಪಾಡು ಎಲ್ಲರ ಪಾಡೇ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಸಿಡಿಲಿನಿಂದಾಗಿ ಮೆಟ್ರೋ ಲೈನ್ಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಸ್ಟೇಷನ್ನಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಬೇಕಾಯಿತು. ಕೆಲ ಹೊತ್ತಿನ ನಂತರ ಮತ್ತೆ ಸಂಚಾರ ಯಥಾಸ್ಥಿತಿಗೆ ಮರಳಿತು. ‘ಸಿಡಿಲಿನಿಂದಾಗಿ ಪೀಣ್ಯ ಮತ್ತು ಪುಟ್ಟೇನಹಳ್ಳಿಗಳಲ್ಲಿ ಟ್ರಾನ್ಸ್ಫಾರ್ಮರ್ಗಳು ಟ್ರಿಪ್ ಆಗಿದ್ದವು. ಕೆಪಿಟಿಸಿಎಲ್ ನಿರ್ವಹಿಸುವ ಈ ಎರಡೂ ಟ್ರಾನ್ಸ್ಫಾರ್ಮರ್ಗಳು ಕಾರ್ಯಾರಂಭ ಮಾಡಿದ ನಂತರ ಮೆಟ್ರೋ ಸಂಚಾರ ಯಥಾಸ್ಥಿತಿಗೆ ಮರಳಿತು ಎಂದು ಬೆಂಗಳೂರು ಮೆಟ್ರೋ ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮನ್ ಪರ್ವೇಜ್ ಹೇಳಿದರು.
ಮಳೆಯಿಂದಾಗಿ ಜೆಪಿ ನಗರ, ಜಯನಗರ, ಲಾಲ್ಬಾಗ್, ಚಿಕ್ಕಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಬೆಂಗಳೂರಿನ ಹಲವೆಡೆ ಪ್ರವಾಹದಂಥ ಪರಿಸ್ಥಿತಿ ಎದುರಾಗಿದ್ದು, ಹಲವೆಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಮೇ 18) ಸಹ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.
ಮರ್ಸಿಡಿಸ್ ಬೆಂಜ್ ಕಾರ್ ಒಂದರ ಒಂದು ಬದಿಯ ಎರಡೂ ಚಕ್ರಗಳು ಕೆಸರಿನಲ್ಲಿ ಸಿಲುಕಿ, ಮತ್ತೆರೆಡು ಚಕ್ರಗಳು ನೆಲದಿಂದ ಮೇಲೆ ಬಂದಿರುವ ವಿಡಿಯೊ ಜನರ ಗಮನ ಸೆಳೆದಿದೆ.
ಸುದ್ದಿಯ ಲಿಂಕ್: https://t.co/zqLDvqUHWg#BengaluruRains #BengaluruWeather #Karnatakarains pic.twitter.com/CWkSEaq1Af
— TV9 Kannada (@tv9kannada) May 18, 2022
ಮಳೆ ವಿವರ (ಮಿಮೀಗಳಲ್ಲಿ)
ಹೊರಮಾವು 155, ಯಲಹಂಕ 129, ವಿದ್ಯಾಪೀಠ 127, ರಾಜಮಹಲ್ 122, ನಾಗಪುರ 120, ಸಂಪಂಗಿನಗರ 119, ದಾಸರಹಳ್ಳಿ 110, ವಿದ್ಯಾರಣ್ಯಪುರ 109, ದೊಡ್ಡನೆಕ್ಕುಂದಿ 108, ಬಾಣಸವಾಡಿ 106, ಜಕ್ಕೂರು 102, ಸಿಂಗಸಂದ್ರ 98, ವನ್ನಾರಪೇಟೆ 85, ವಿಶ್ವೇಶ್ವರಪುರ 82, ಕೋರಮಂಗಲ 80, ಚಾಮರಾಜಪೇಟೆ 79, ದೊಮ್ಮಲೂರು 79, ಎಚ್ಎಎಲ್ 77, ಬಿಟಿಎಂ ಲೇಔಟ್ 77, ನಾಯಂಡಹಳ್ಳಿ 73, ಬೆಳ್ಳಂದೂರು 66, ಬಿಳೇಕಲ್ಲಳ್ಳಿ 65, ಮಾರತ್ತಹಳ್ಳಿ 61, ಸಾರಕ್ಕಿ 61, ವರ್ತೂರು 59, ಯೂನಿವರ್ಸಿಟಿ ಕ್ಯಾಂಪಸ್ 53, ಕೋಣನಕುಂಟೆ 44, ಕೆಂಗೇರಿ 37.
ಮುಂಗಾರಿಗೆ ಮುನ್ನುಡಿ
ಹವಾಮಾನ ಇಲಾಖೆಯ ಪ್ರಕಾರ ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿಯಲಿದೆ. ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳತ್ತ ಧಾವಿಸುತ್ತಿದ್ದು, ಈ ವರ್ಷ ಮುಂಗಾರು ಸಹ ಬೇಗನೇ ಆರಂಭವಾಗಹುದು ಎಂದು ಹೇಳಲಾಗಿದೆ.
ಮತ್ತಷ್ಟು ಮಳೆ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Wed, 18 May 22