Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​

Priyanka Chopra Nick Jonas Baby Photo: ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಂಪತಿಯ ಮಗುವನ್ನು 100ಕ್ಕೂ ಹೆಚ್ಚು ದಿನಗಳ ಕಾಲ ಐಸಿಯುನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಪ್ರಿಯಾಂಕಾ ಅವರು ಮಗುವಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಮಗು
Follow us
TV9 Web
| Updated By: ಮದನ್​ ಕುಮಾರ್​

Updated on:May 09, 2022 | 8:05 AM

2022ನೇ ವರ್ಷದ ಆರಂಭದಲ್ಲೇ ನಟಿ ಪ್ರಿಯಾಂಕಾ ಜೋಪ್ರಾ (Priyanka Chopra) ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ಮೊದಲ ಮಗುವಿಗೆ ತಾಯಿ ಆದ ಖುಷಿಯನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡರು. ಆದರೆ ಅದರ ಜೊತೆ ಇದ್ದ ಒಂದು ನೋವಿನ ಸಂಗತಿಯನ್ನು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಅಭಿಮಾನಿಗಳ ಬಳಿ ಹೇಳಿಕೊಳ್ಳಲಿಲ್ಲ. ಆ ಬಗ್ಗೆ ಈಗ ಅವರು ಬಾಯಿ ಬಿಟ್ಟಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಮಗುವಿನ ಫೋಟೋ ಕೂಡ ಶೇರ್​ ಮಾಡಿಕೊಂಡಿದ್ದಾರೆ. ನಿಕ್​ ಜೋನಸ್​ (Nick Jonas) ಮತ್ತು ಪ್ರಿಯಾಂಕಾ ಚೋಪ್ರಾ ದಂಪತಿ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಮೇ 8ರಂದು ವಿಶ್ವ ಅಮ್ಮಂದಿರ ದಿನ. ಆ ಪ್ರಯುಕ್ತವೇ ಮಗುವಿನ ಫೋಟೋ (Priyanka Chopra Baby Photo) ರಿವೀಲ್​ ಮಾಡಲಾಗಿದೆ. ಅದರ ಜೊತೆಗೆ ಒಂದಷ್ಟು ಶಾಕಿಂಗ್​ ಸತ್ಯಗಳನ್ನೂ ಕೂಡ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ. ಬಾಡಿಗೆ ತಾಯಿ ಮೂಲಕ ಈ ಹೆಣ್ಣು ಮಗು ಜನಿಸಿದಾಗ ಎದುರಾದ ಕಷ್ಟದ ಪರಿಸ್ಥಿತಿಯನ್ನು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು ಸರೋಗೆಸಿ ಮೂಲಕ ಮೊದಲ ಮಗು ಪಡೆದವರು. ಆ ಮಗು ಅವಧಿಗೂ ಮುನ್ನ (ಆರೂವರೆ ತಿಂಗಳಿಗೆ) ಜನಿಸಿತ್ತು ಎಂಬುದು ನಂತರ ತಿಳಿದುಬಂತು. ಆ ಬಗ್ಗೆ ಇಷ್ಟು ದಿನಗಳ ಕಾಲ ಪ್ರಿಯಾಂಕಾ ಚೋಪ್ರಾ ಮೌನ ವಹಿಸಿದ್ದರು. ಆದರೆ ‘ವಿಶ್ವ ಅಮ್ಮಂದಿರ ದಿನ’ದ ಪ್ರಯುಕ್ತ ಅವರು ಎಲ್ಲವನ್ನೂ ವಿವರಿಸಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಅವರ ಮಗು ಐಸಿಯುನಲ್ಲಿ ಇತ್ತು ಎಂಬದನ್ನು ಅವರು ತಿಳಿಸಿದ್ದಾರೆ. ಸಮಾಧಾನದ ಸಂಗತಿ ಎಂದರೆ ಈಗ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿದೆ.

ಇದನ್ನೂ ಓದಿ
Image
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
Image
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ
Image
ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ
Image
Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್

ಕಳೆದ ಕೆಲವು ತಿಂಗಳುಗಳ ಈ ಪಯಣ ಸವಾಲಿನಿಂದ ಕೂಡಿತ್ತು ಎಂದು ಹೇಳಿರುವ ಪ್ರಿಯಾಂಕಾ ಚೋಪ್ರಾ ಅವರು, ತಮ್ಮ ಮಗುವಿಗಾಗಿ ಶ್ರಮಿಸಿದ ಎಲ್ಲ ವೈದ್ಯರು ಮತ್ತು ನರ್ಸ್​ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಜೊತೆಗಿದ್ದು ಬೆಂಬಲ ನೀಡಿದ ಪತಿ ನಿಕ್​ ಜೋನಸ್​ ಅವರಿಗೂ ಪ್ರಿಯಾಂಕಾ ಥ್ಯಾಂಕ್ಸ್​ ಹೇಳಿದ್ದಾರೆ. ‘ಓಂ ನಮಃ ಶಿವಾಯ’ ಎಂದು ಬರೆಯುವ ಮೂಲಕ ಅವರು ಬರಹ ಮುಗಿಸಿದ್ದಾರೆ.

View this post on Instagram

A post shared by Priyanka (@priyankachopra)

ಮಗು ಹೆಸರು ತಿಳಿಸದ ಪ್ರಿಯಾಂಕಾ ಚೋಪ್ರಾ:

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್ ದಂಪತಿಯ ಹೆಣ್ಣು ಮಗುವಿನ ಹೆಸರಿನ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿ ಹಬ್ಬಿತ್ತು. ಮಾಲ್ತಿ ಮೇರಿ ಚೋಪ್ರಾ ಜೋನಸ್​ ಅಂತ ಹೆಸರು ಇಡಲಾಗಿದೆ ಎಂದು ಕೆಲವೆಡೆ ವರದಿ ಆಗಿತ್ತು. ಈಗ ಮಗುವಿನ ಫೋಟೋ ಬಹಿರಂಗ ಮಾಡಿರುವ ಈ ದಂಪತಿ ಎಲ್ಲಿಯೂ ಕೂಡ ಹೆಸರು ಏನೆಂದು ಪ್ರಸ್ತಾಪಿಸಿಲ್ಲ.

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್​ ದಂಪತಿಯ ಮಗಳ ಹೆಸರು ‘ಮಾಲ್ತಿ ಮೇರಿ ಚೋಪ್ರಾ ಜೋನಸ್​’ ಅಂತ ಜನನ ಪ್ರಮಾಣಪತ್ರದಲ್ಲಿ ಬರೆಯಲಾಗಿದೆ ಎಂದು TMZ ವೆಬ್​ಸೈಟ್​ನಲ್ಲಿ ವರದಿ ಪ್ರಕಟ ಆಗಿತ್ತು. ‘ಈ ಹೆಸರನ್ನು ಅವರು ಯಾಕೆ ಆಯ್ಕೆ ಮಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಮಾಲ್ತಿ ಎಂದರೆ ಸಂಸ್ಕೃತದಲ್ಲಿ ಪರಿಮಳ ಬೀರುವ ಹೂವು ಅಥವಾ ಬೆಳದಿಂಗಳು ಎಂಬ ಅರ್ಥ ಇದೆ. ಇದು ಭಾರತ ಹಾಗೂ ಸಂಸ್ಕೃತ ಮೂಲದ ಪದ’ ಎಂದು TMZ ವೆಬ್​ಸೈಟ್ ವರದಿ ಮಾಡಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:05 am, Mon, 9 May 22

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!