ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ಸಿನಿಮಾ ಬಿಟ್ಟು ರಂಗಭೂಮಿ ಕಡೆಗೆ ತೆರಳಿದ್ದ ಸಾರಿಕಾ ಅವರಿಗೆ ಜೀವನ ಸಾಗಿಸುವುದು ಕಷ್ಟ ಆಗಿತ್ತು. ಈಗ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.

ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ
ಸಾರಿಕಾ, ಶ್ರುತಿ ಹಾಸನ್, ಅಕ್ಷರಾ ಹಾಸನ್, ಕಮಲ್ ಹಾಸನ್
Follow us
TV9 Web
| Updated By: ಮದನ್​ ಕುಮಾರ್​

Updated on: May 18, 2022 | 2:35 PM

ನಟ ಕಮಲ್​ ಹಾಸನ್​ (Kamal Haasan) ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಬ್ಯುಸಿ ಆಗಿದೆ. ಕಮಲ್​ ಹಾಸನ್​ ಅವರ ಎರಡನೇ ಹಾಗೂ ಮಾಜಿ ಪತ್ನಿ ಸಾರಿಕಾ (Sarika) ಅವರು ಕೂಡ ಫೇಮಸ್​ ನಟಿ. ಅದೇ ರೀತಿ, ಸಾರಿಕಾ ಮಕ್ಕಳಾದ ಅಕ್ಷರಾ ಹಾಸನ್​ ಹಾಗೂ ಶ್ರುತಿ ಹಾಸನ್​ ಅವರು ಸಹ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅಚ್ಚರಿ ಎಂದರೆ ಸಾರಿಕಾ ಅವರು ತೀವ್ರ ಆರ್ಧಿಕ ಸಂಕಷ್ಟ ಎದುರಿಸಿದ್ದಾರೆ. ಲಾಕ್​ ಡೌನ್ (Lockdown)​ ಸಂದರ್ಭದಲ್ಲಿ ಅನೇಕ ಕಲಾವಿದರ ಜೀವನ ಕಷ್ಟ ಆಗಿತ್ತು. ಸಾರಿಕಾ ಕೂಡ ಜೀವನ ಸಾಗಿಸಲು ಪ್ರತಿ ದಿನ ಕಷ್ಟಪಟ್ಟಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಕೇವಲ 3 ಸಾವಿರ ರೂಪಾಯಿ ದುಡಿಯುವ ಮೂಲಕ ಲಾಕ್​ಡೌನ್​ನಲ್ಲಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸಿದ್ದರು ಎಂಬುದನ್ನು ಅವರು ವಿವರಿಸಿದ್ದಾರೆ.

ಬಾಲ ನಟಿಯಾಗಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟವರು ಸಾರಿಕಾ. ನಂತರ ಅವರು ಅನೇಕ ಸಿನಿಮಾಗಳಲ್ಲಿ ಹೀರೋಯಿನ್​ ಆಗಿ ಮಿಂಚಿದರು. ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಪ್ರತಿಭಾವಂತೆ ಅವರು. ಆದರೆ ಲಾಕ್​ಡೌನ್​ ಆಗುವುದಕ್ಕಿಂತಲೂ ಮುನ್ನ ಒಂದು ವರ್ಷ ಬ್ರೇಕ್​ ತೆಗೆದುಕೊಳ್ಳೋಣ ಎಂದು ಅವರು ನಿರ್ಧರಿಸಿದ್ದರು. ಹಾಗಾಗಿ ಅವರು ರಂಗಭೂಮಿಯಲ್ಲಿ ತೊಡಗಿಕೊಂಡರು. ಆದರೆ ಅದು 5 ವರ್ಷಗಳಿಗೆ ಮುಂದುವರಿಯಿತು. ಅದೇ ಸಮಯಕ್ಕೆ ಲಾಕ್​ಡೌನ್ ಆರಂಭ ಆಗಿದ್ದರಿಂದ ಪರಿಸ್ಥಿತಿ ಕಷ್ಟ ಆಯಿತು. ಆಗ ಅವರು ಹಣವಿಲ್ಲದೇ ಒದ್ದಾಡಬೇಕಾಯಿತು.

ಇದನ್ನೂ ಓದಿ: ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು

ಇದನ್ನೂ ಓದಿ
Image
Vikram Trailer: ಯಶ್​ ಸ್ಟೈಲ್​ ಕಾಪಿ ಮಾಡಿದ್ರಾ ಕಮಲ್​ ಹಾಸನ್? ‘ವಿಕ್ರಮ್​’ ಚಿತ್ರದಲ್ಲೂ ಇದೆ ದೊಡ್ಡಮ್ಮ ಗನ್​
Image
ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ
Image
ಲಸಿಕೆ ಪಡೆದ ನಂತರವೂ ಕಮಲ್​ ಹಾಸನ್​ಗೆ ಕೊವಿಡ್​ ಅಂಟಿದ್ದು ಹೇಗೆ? ವೈದ್ಯರು ಹೇಳಿದ್ದಿಷ್ಟು
Image
ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?

ಸಾರಿಕಾ ಅವರು ಕೊನೆಯದಾಗಿ ನಟಿಸಿದ್ದು ‘ಬಾರ್ ಬಾರ್​ ದೇಖೋ’ ಸಿನಿಮಾದಲ್ಲಿ. ಆ ಚಿತ್ರದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ, ಕತ್ರಿನಾ ಕೈಫ್​ ಕೂಡ ನಟಿಸಿದ್ದರು. ಆ ಸಿನಿಮಾ ಬಳಿಕ ಸಾರಿಕಾ ಯಾವುದೇ ಹೊಸ ಚಿತ್ರದಲ್ಲಿ ನಟಿಸಲಿಲ್ಲ. ಒಳ್ಳೆಯ ಪಾತ್ರಗಳು ಸಿಗದ ಕಾರಣ ಅವರು ರಂಗಭೂಮಿ ಕಡೆಗೆ ಹೊರಳಿದರು. ಆದರೆ ರಂಗಭೂಮಿಯಲ್ಲಿ ಅವರಿಗೆ ಸಿಗುತ್ತಿದ್ದ ಸಂಭಾವನೆ ತುಂಬ ಕಡಿಮೆ. ಕೇವಲ 3 ಸಾವಿರ ರೂಪಾಯಿ ಪಡೆಯುವುದರಿಂದ ಜೀವನ ನಡೆಸುವುದು ಕಷ್ಟ ಎಂಬುದು ಅವರಿಗೆ ಅರಿವಾಯಿತು. ನಂತರ ಅವರು ಸಿನಿಮಾಗೆ ಮರಳುವ ನಿರ್ಧಾರ ಮಾಡಿದರು.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್​

ಈಗ ಸಾರಿಕಾ ಅವರು ಅನೇಕ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸಿರುವ ‘ಮಾಡರ್ನ್​ ಲವ್​: ಮುಂಬೈ’ ವೆಬ್​ ಸಿರೀಸ್​ ಮೇ 13ರಂದು ಬಿಡುಗಡೆ ಆಗಿದೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಇದು ಪ್ರಸಾರ ಆಗುತ್ತಿದೆ. ಸಾರಿಕಾ ಜೊತೆಗೆ ಅರ್ಷದ್​ ವಾರ್ಸಿ, ಚಿತ್ರಾಂಗದಾ ಸಿಂಗ್​, ಫಾತಿಮಾ ಸನಾ ಶೇಖ್​ ಕೂಡ ನಟಿಸಿದ್ದಾರೆ.

2004ರಲ್ಲಿ ಕಮಲ್​ ಹಾಸನ್​-ಸಾರಿಕಾ ವಿಚ್ಛೇದನ:

1988ರಲ್ಲಿ ಕಮಲ್​ ಹಾಸನ್​ ಮತ್ತು ಸಾರಿಕಾ ಅವರು ಮದುವೆ ಆದರು. ಅವರಿಗೆ ಅಕ್ಷರಾ ಹಾಸನ್​ ಮತ್ತು ಶ್ರುತಿ ಹಾಸನ್​ ಜನಿಸಿದರು. 2004ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡರು. ಅಕ್ಷರಾ ಹಾಸನ್​ ಮತ್ತು ಶ್ರುತಿ ಹಾಸನ್ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಶ್ರುತಿ ಹಾಸನ್​ ಗುರುತಿಸಿಕೊಂಡಿದ್ದಾರೆ. ಆದರೂ ಕೂಡ ಅವರ ತಾಯಿ ಸಾರಿಕಾ ಲಾಕ್​ಡೌನ್​ನಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬೇಕಾಯಿತು ಎಂಬುದು ಅಚ್ಚರಿಯ ಸಂಗತಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ