Vikram Trailer: ಯಶ್​ ಸ್ಟೈಲ್​ ಕಾಪಿ ಮಾಡಿದ್ರಾ ಕಮಲ್​ ಹಾಸನ್? ‘ವಿಕ್ರಮ್​’ ಚಿತ್ರದಲ್ಲೂ ಇದೆ ದೊಡ್ಡಮ್ಮ ಗನ್​

Kamal Haasan: ‘ವಿಕ್ರಮ್​’ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಚಿತ್ರದ ಮೇಲೆ ಕಮಲ್​ ಹಾಸನ್​ ಅಭಿಮಾನಿಗಳಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ.

Vikram Trailer: ಯಶ್​ ಸ್ಟೈಲ್​ ಕಾಪಿ ಮಾಡಿದ್ರಾ ಕಮಲ್​ ಹಾಸನ್? ‘ವಿಕ್ರಮ್​’ ಚಿತ್ರದಲ್ಲೂ ಇದೆ ದೊಡ್ಡಮ್ಮ ಗನ್​
‘ವಿಕ್ರಮ್’ ಚಿತ್ರದಲ್ಲೂ ಕಾಣಿಸಿದ ದೊಡ್ಡಮ್ಮ ಗನ್
Follow us
TV9 Web
| Updated By: ಮದನ್​ ಕುಮಾರ್​

Updated on: May 16, 2022 | 11:54 AM

ಒಂದಷ್ಟು ದಿನಗಳ ಕಾಲ ರಾಜಕೀಯದ ಕಡೆಗೆ ಗಮನ ಹರಿಸಿದ್ದ ಕಮಲ್​ ಹಾಸನ್ (Kamal Haasan)​ ಅವರು ಈಗ ಚಿತ್ರರಂಗದಲ್ಲೇ ಫುಲ್​ ಟೈಮ್​ ಆ್ಯಕ್ಟೀವ್​ ಆಗಿದ್ದಾರೆ. ಅವರ ಹೊಸ ಸಿನಿಮಾಗಳಿಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. ಅದರಲ್ಲೂ ಕಮಲ್​ ಹಾಸನ್​  ನಟನೆಯ ‘ವಿಕ್ರಮ್​’ ಸಿನಿಮಾ (Vikram Movie) ಮೊದಲಿನಿಂದಲೂ ಕುತೂಹಲ ಮೂಡಿಸಿದೆ. ಆ ಚಿತ್ರ ಸೆಟ್ಟೇರಿದ ದಿನದಿಂದಲೂ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಈಗ ‘ವಿಕ್ರಮ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಅದನ್ನು ಕಂಡು ಫ್ಯಾನ್ಸ್​ ವಾವ್​ ಎನ್ನುತ್ತಿದ್ದಾರೆ. ಲೋಕೇಶ್​ ಕನಗರಾಜ್​ ಅವರು​ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇರಲಿವೆ ಎಂದು ಈ ಮೊದಲು ಚಿಕ್ಕ ಟೀಸರ್​ ಮೂಲಕವೇ ಚಿತ್ರತಂಡ ಸುಳಿವು ನೀಡಿತ್ತು. ಈಗ ಅದಕ್ಕೆ ಇನ್ನಷ್ಟು ಪುಷ್ಠಿ ನೀಡುವ ರೀತಿಯಲ್ಲಿ ಟ್ರೇಲರ್ (Vikram Movie Trailer) ಮೂಡಿಬಂದಿದೆ. ಮೈನವಿರೇಳಿಸುವಂತಹ ಆ್ಯಕ್ಷನ್​ ಸನ್ನಿವೇಶಗಳ ಝಲಕ್​ ಈ ಟ್ರೇಲರ್​ನಲ್ಲಿ ಕಾಣಿಸಿಕೊಂಡಿದೆ. ಕಮಲ್​ ಹಾಸನ್​ ಜೊತೆಗೆ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಅವರಂತಹ ಘಟಾನುಘಟಿ ಕಲಾವಿದರು ಕೂಡ ‘ವಿಕ್ರಮ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ‘ವಿಕ್ರಮ್​’ ಟ್ರೇಲರ್​ ನೋಡಿದವರಿಗೆ ‘ಕೆಜಿಎಫ್​ 2’ ಚಿತ್ರದ ಒಂದು ಸೀನ್​ ನೆನಪಾಗಿದೆ.

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ದೊಡ್ಡಮ್ಮ ಗನ್​ ದೃಶ್ಯ ಸಖತ್​ ಫೇಮಸ್​ ಆಗಿದೆ. ಯಶ್​ ಬರ್ತ್​ಡೇ ಸಲುವಾಗಿ ಬಿಡುಗಡೆ ಮಾಡಿದ್ದ ಟೀಸರ್​ನಲ್ಲೂ ಆ ದೃಶ್ಯ ಗಮನ ಸೆಳೆದಿತ್ತು. ‘ಕೆಜಿಎಫ್​ 2’ ಸಿನಿಮಾದಲ್ಲಿ ಕಥಾನಾಯಕ ರಾಕಿ ಭಾಯ್​ ‘ದೊಡ್ಡಮ್ಮ ಗನ್’ ಹಿಡಿದು ಬ್ಯಾಕ್​ ಟು ಬ್ಯಾಕ್​ ಸಾವಿರಾರು ಬುಲೆಟ್​ ಹಾರಿಸಿದ ಬಳಿಕ ಬ್ಯಾರಲ್​ ಕೆಂಪಾಗುವ ದೃಶ್ಯವನ್ನು ಕಂಡು ಫ್ಯಾನ್ಸ್​ ಸಖತ್​ ಎಂಜಾಯ್​ ಮಾಡಿದ್ದಾಗಿದೆ. ಈಗ ಅದೇ ರೀತಿಯ ‘ದೊಡ್ಡಮ್ಮ ಗನ್​’ ಹಿಡಿದು ಕಮಲ್​ ಹಾಸನ್​ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ
Image
ಕೊವಿಡ್​ನಿಂದ ಕಮಲ್​ ಹಾಸನ್​ ಸಂಪೂರ್ಣ ಗುಣಮುಖ; ಮನೆಗೆ ಮರಳಿದ ಹಿರಿಯ ನಟ
Image
ಲಸಿಕೆ ಪಡೆದ ನಂತರವೂ ಕಮಲ್​ ಹಾಸನ್​ಗೆ ಕೊವಿಡ್​ ಅಂಟಿದ್ದು ಹೇಗೆ? ವೈದ್ಯರು ಹೇಳಿದ್ದಿಷ್ಟು
Image
ಇಬ್ಬರು ಸ್ಟಾರ್​ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಕಮಲ್​ ಹಾಸನ್​
Image
ಕಮಲ್​ ಹಾಸನ್​ ಎದುರುಹಾಕಿಕೊಂಡ ಮಲಯಾಳಂ ನಟ ಫಹಾದ್​ ಫಾಸಿಲ್​

ಎರಡೂ ಸಿನಿಮಾದಲ್ಲಿ ಈ ರೀತಿಯ ದೃಶ್ಯ ಇರುವುದು ಕಾಕತಾಳೀಯವೋ ಅಥವಾ ಪ್ರಶಾಂತ್​ ನೀಲ್​ ಅವರಿಂದ ಸ್ಫೂರ್ತಿಗೊಂಡು ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ‘ವಿಕ್ರಮ್​’ ಸಿನಿಮಾದಲ್ಲಿ ಈ ದೃಶ್ಯ ಅಳವಡಿಸಿದ್ದಾರೋ ಗೊತ್ತಿಲ್ಲ. ನಂತರದ ದಿನಗಳಲ್ಲಿ ನಿರ್ದೇಶಕರೇ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದೆ. ‘ವಿಕ್ರಮ್’ ಚಿತ್ರ ಖಂಡಿತವಾಗಿಯೂ ಬ್ಲಾಕ್​ಬಸ್ಟರ್​ ಹಿಟ್​ ಆಗಲಿದೆ ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಕಮಲ್​ ಹಾಸನ್​ ಅವರಂಥ ದಿಗ್ಗಜ ನಟನ ಜೊತೆಗೆ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಅವರು ಸೇರಿಕೊಂಡಿರುವುದರಿಂದ ಈ ಸಿನಿಮಾಗೆ ಹೈ-ವೋಲ್ಟೇಜ್​ ಬಂದಂತಾಗಿದೆ.

ಕಮಲ್​ ಹಾಸನ್, ಆರ್​. ಮಹೇಂದ್ರನ್​ ಅವರು ‘ವಿಕ್ರಮ್​’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್​​ ರವಿಚಂದರ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಗಿರೀಶ್​ ಗಂಗಾಧರನ್​ ಅವರ ಛಾಯಾಗ್ರಹಣ ಕೂಡ ಟ್ರೇಲರ್​ನಲ್ಲಿ ಗಮನ ಸೆಳೆಯುತ್ತಿದೆ. ಡೈಲಾಗ್​ಗಳು ಕೂಡ ಭರ್ಜರಿಯಾಗಿವೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್​ಗಿಂತಲೂ ಅಧಿಕ ಬಾರಿ ಈ ಟ್ರೇಲರ್​ ವೀಕ್ಷಣೆಗೆ ಒಳಪಟ್ಟಿದೆ. ‘ವಿಕ್ರಮ್​’ ಚಿತ್ರದ ಮೇಲೆ ಅಭಿಮಾನಿಗಳಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ.

ಜೂನ್​ 3ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ