Kushi Movie: ಸಖತ್ ‘ಖುಷಿ’ಯಲ್ಲಿದ್ದಾರೆ ವಿಜಯ್ ದೇವರಕೊಂಡ- ಸಮಂತಾ; ಏನಿದು ಸಮಾಚಾರ?
ವಿಜಯ್ ದೇವರಕೊಂಡ ವಿಚಿತ್ರ ಡ್ರೆಸ್ ಹಾಕಿ ಕುಳಿತಿದ್ದಾರೆ. ಬಾಯಲ್ಲಿ ಸಿಗರೇಟ್ ಇದೆ. ಸಮಂತಾ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದಾರೆ. ಇಬ್ಬರೂ ಹಿಮ ಬೀಳುವ ಪ್ರದೇಶದಲ್ಲಿ ಕುಳಿತಿದ್ದಾರೆ.
ವಿಜಯ್ ದೇವರಕೊಂಡ (Vijay Devarakonda) ಹಾಗೂ ನಟಿ ಸಮಂತಾ (Samantha) ಇಬ್ಬರೂ ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಆರಂಭಗೊಂಡಿದೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇಂದು (ಮೇ 16) ಈ ಸಿನಿಮಾ ಫಸ್ಟ್ ಲುಕ್ ಹಾಗೂ ಟೈಟಲ್ ಅನಾವರಣಗೊಂಡಿದೆ. ಫಸ್ಟ್ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕೆ ‘ಖುಷಿ’ (Kushi Movie) ಎಂದು ಟೈಟಲ್ ಇಡಲಾಗಿದೆ. ಕ್ರಿಸ್ಮಸ್ ಪ್ರಯುಕ್ತ ಈ ವರ್ಷದ ಡಿಸೆಂಬರ್ 23ರಂದು ‘ಖುಷಿ’ ಬಿಡುಗಡೆಯಾಗಲಿದೆ.
ಸಮಂತಾ ಚಿತ್ರರಂಗದಲ್ಲಿದ್ದು ಹಲವು ವರ್ಷಗಳು ಕಳೆದಿವೆ. ವಿಜಯ್ ದೇವರಕೊಂಡ ಇತ್ತೀಚೆಗೆ ಖ್ಯಾತಿ ಹೆಚ್ಚಿಸಿಕೊಂಡವರು. ಸೂಪರ್ ಹಿಟ್ ಸಿನಿಮಾ ‘ಮಹಾನಟಿ’ಯಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಕಾರಣಕ್ಕೆ ಇಬ್ಬರನ್ನು ಒಟ್ಟಾಗಿ ತರುವ ಪ್ರಯತ್ನ ನಡೆದಿದೆ. ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ಕಾಣಿಸಿಕೊಂಡಿದ್ದು, ಈ ಇಬ್ಬರ ಕಾಂಬಿನೇಷನ್ ಫ್ಯಾನ್ಸ್ಗೆ ಇಷ್ಟವಾಗಿದೆ.
ವಿಜಯ್ ದೇವರಕೊಂಡ ವಿಚಿತ್ರ ಡ್ರೆಸ್ ಹಾಕಿ ಕುಳಿತಿದ್ದಾರೆ. ಬಾಯಲ್ಲಿ ಸಿಗರೇಟ್ ಇದೆ. ಸಮಂತಾ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದಾರೆ. ಇಬ್ಬರೂ ಹಿಮ ಬೀಳುವ ಪ್ರದೇಶದಲ್ಲಿ ಕುಳಿತಿದ್ದಾರೆ. ಇಬ್ಬರ ಬಟ್ಟೆಗೆ ಗಂಟು ಬಿಗಿಯಲಾಗಿದೆ. ಹಿಂಭಾಗದಲ್ಲಿ ಖುಷಿ ಎಂದು ಶೀರ್ಷಿಕೆ ಬರೆಯಲಾಗಿದೆ. ‘ಖುಷಿ’ ವರ್ಣರಂಜಿತ ರೊಮ್ಯಾಂಟಿಕ್ ಸಿನಿಮಾ ಆಗಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ.
ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದೆ. ಈ ಸಿನಿಮಾ ಕೂಡ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ರಿಲೀಸ್ ಆಗಲಿದೆ. ಹಿಂದಿಯಲ್ಲಿ ಈ ಸಿನಿಮಾವನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ ಅನ್ನೋದನ್ನು ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.
This Christmas- NewYears ❤️
An Explosion of Joy, laughter, happiness & Love. A Grand Family experience!?#KUSHI Telugu Tamil Kannada Malayalam Dec 23 Worldwide Release!@TheDeverakonda @ShivaNirvana @MythriOfficial pic.twitter.com/35IXI9jsI4
— Samantha (@Samanthaprabhu2) May 16, 2022
ವಿಜಯ್ ದೇವರಕೊಂಡ ಹಾಗೂ ಸಮಂತಾ ಮಾತ್ರವಲ್ಲದೆ, ಜಯರಾಮ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ. ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ನಿರ್ವಾಣ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಇತ್ತೀಚೆಗೆ ಸಮಂತಾ ಬರ್ತ್ಡೇ ಆಚರಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ‘ಖುಷಿ’ ಸಿನಿಮಾದ ಶೂಟಿಂಗ್ಗಾಗಿ ಕಾಶ್ಮೀರದಲ್ಲಿ ಇದ್ದರು. ಆಗ ಸಮಂತಾಗೆ ಬರ್ತ್ಡೇ ಸರ್ಪ್ರೈಸ್ ನೀಡಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.