AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಸ್ಟಾರ್​ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಕಮಲ್​ ಹಾಸನ್​

 ಕಮಲ್​ ಹಾಸನ್​ ಮಲ್ಟಿಸ್ಟಾರರ್​ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮಿಳು ನಟ ವಿಕ್ರಮ್​ ಹಾಗೂ ವಿಜಯ್​ ಸೇತುಪತಿ ಅವರನ್ನು ಈ ಚಿತ್ರಕ್ಕೆ ಹಾಕಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಕಮಲ್​ ಹಾಸನ್​ ಇದ್ದಾರೆ. ಈ

ಇಬ್ಬರು ಸ್ಟಾರ್​ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಕಮಲ್​ ಹಾಸನ್​
ಕಮಲ್ ಹಾಸನ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Nov 14, 2021 | 9:49 PM

Share

ಕಮಲ್​ ಹಾಸನ್​ ನಟನೆ ಮೂಲಕ ಭೇಷ್​ ಎನಿಸಿಕೊಂಡಿದ್ದಾರೆ. ಇದರ ಜತೆಗೆ ನಿರ್ದೇಶನ ಹಾಗೂ ನಿರ್ಮಾಣದಲ್ಲೂ ಯಶಸ್ಸು ಕಂಡಿದ್ದಾರೆ ಅವರು. ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’  ಬ್ಯಾನರ್​ ಮೂಲಕ ಸಿನಿಮಾ ನಿರ್ಮಾಣ ಕೆಲಸದಲ್ಲೂ ಕಮಲ್​ ಬ್ಯುಸಿ ಆಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಸಿಗದಿದ್ದಕ್ಕೆ ಕಮಲ್​ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಈಗ ಅವರು ಸಾಲುಸಾಲು ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಅಷ್ಟೇ ಅಲ್ಲ, ದೊಡ್ಡ ಪ್ರಾಜೆಕ್ಟ್​ ಬಗ್ಗೆ ಅವರಿಗೆ ಆಲೋಚನೆ ಇದೆ. ಶೀಘ್ರದಲ್ಲೇ ಈ ಬಗ್ಗೆ ಅವರು ಘೋಷಣೆ ಮಾಡಲಿದ್ದಾರೆ ಎಂಬುದು ಕಾಲಿವುಡ್​ ಮಂದಿಯ ಮಾತು.

ಕಮಲ್​ ಹಾಸನ್​ ಮಲ್ಟಿಸ್ಟಾರರ್​ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮಿಳು ನಟ ವಿಕ್ರಮ್​ ಹಾಗೂ ವಿಜಯ್​ ಸೇತುಪತಿ ಅವರನ್ನು ಈ ಚಿತ್ರಕ್ಕೆ ಹಾಕಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಕಮಲ್​ ಹಾಸನ್​ ಇದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಒಂದೊಮ್ಮೆ ಮಾತುಕತೆ ಯಶಸ್ಸಾದರೆ ಎರಡು ಸ್ಟಾರ್​ ನಟರು ಒಂದೇ ಸಿನಿಮಾದಲ್ಲಿ ನಟಿಸಿದಂತಾಗುತ್ತದೆ. ಕಮಲ್​ ಹಾಸನ್​ ಅವರು ಕಥೆ ಸಿದ್ಧಪಡಿಸಿದ್ದಾರೆ. ಈ ಕಥೆಗೆ ವಿಜಯ್​ ಸೇತುಪತಿ ಮತ್ತು ವಿಕ್ರಮ್​ ಹೊಂದಾಣಿಕೆ ಆಗುತ್ತಾರೆ. ಈ ಕಾರಣಕ್ಕೆ ಅವರನ್ನೇ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ  ಕಮಲ್​ ಅವರದ್ದು.

ವಿಜಯ್​ ಹಾಗೂ ವಿಕ್ರಮ್​ ಕಾಲಿವುಡ್​ನಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ. ಇಬ್ಬರೂ ಸ್ಟಾರ್​ ನಟರು. ನಟನೆಯಲ್ಲಿ ಎಂಥವರನ್ನಾದರೂ ಮೀರಿಸುತ್ತಾರೆ. ಈಗ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಸಿನಿ ಪ್ರಿಯರಿಗೆ ಹಬ್ಬದೂಟ ಗ್ಯಾರಂಟಿ. ಈ ಬಗ್ಗೆ ಶೀಘ್ರವೇ ಅಪ್​ಡೇಟ್​ ಸಿಗುವ ಸಾಧ್ಯತೆ ಇದೆ.

ಕಮಲ್​ ಹಾಸನ್​ ಅವರು ‘ವಿಕ್ರಮ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್​ ಒಂದು ಇತ್ತೀಚೆಗೆ ರಿಲೀಸ್​ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಮಲ್​ ಹಾಸನ್​ ಲುಕ್​ ನೋಡಿ ಎಲ್ಲರೂ ಇಷ್ಟಪಟ್ಟಿದ್ದರು. ಸಿನಿಮಾದ ಬ್ಯಾಕ್​​ಗ್ರೌಂಡ್​ ಮ್ಯೂಸಿಕ್​ ಕೂಡ ಎಲ್ಲರಿಗೂ ಇಷ್ಟವಾಗಿತ್ತು.

ಇದನ್ನೂ ಓದಿ: ‘ಬಿಗ್ ಬಾಸ್​ ಸೀಸನ್​ 5’ ಕಮಲ್​ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?

Kamal Haasan Birthday: ಕಮಲ್​ ಹಾಸನ್​ ಜನ್ಮದಿನಕ್ಕೆ ‘ವಿಕ್ರಮ್​’ ತಂಡದಿಂದ ಭರ್ಜರಿ ಗಿಫ್ಟ್​​; ಅಭಿಮಾನಿಗಳು ಫಿದಾ

Follow Us
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ