Kamal Haasan Birthday: ಕಮಲ್​ ಹಾಸನ್​ ಜನ್ಮದಿನಕ್ಕೆ ‘ವಿಕ್ರಮ್​’ ತಂಡದಿಂದ ಭರ್ಜರಿ ಗಿಫ್ಟ್​​; ಅಭಿಮಾನಿಗಳು ಫಿದಾ

Vikram Teaser: ಅಭಿಮಾನಿಗಳು ಮಾತ್ರವಲ್ಲದೇ ಕಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕೂಡ ‘ವಿಕ್ರಮ್​’ ಸಿನಿಮಾದ ಟೀಸರ್​ ನೋಡಿ ವಾವ್​ ಎನ್ನುತ್ತಿದ್ದಾರೆ. ಇದರಿಂದ ಕಮಲ್​ ಹಾಸನ್​ ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ.

Kamal Haasan Birthday: ಕಮಲ್​ ಹಾಸನ್​ ಜನ್ಮದಿನಕ್ಕೆ ‘ವಿಕ್ರಮ್​’ ತಂಡದಿಂದ ಭರ್ಜರಿ ಗಿಫ್ಟ್​​; ಅಭಿಮಾನಿಗಳು ಫಿದಾ
ಕಮಲ್​ ಹಾಸನ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 07, 2021 | 7:42 AM

ರಾಜಕೀಯದಲ್ಲಿ ಸದ್ಯಕ್ಕೆ ಯಶಸ್ಸು ಕಾಣದ ನಟ ಕಮಲ್​ ಹಾಸನ್​ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ನ.7) ಅವರ ಜನ್ಮದಿನ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರು ಕಮಲ್​ ಹಾಸನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಬಹುನಿರೀಕ್ಷಿತ ‘ವಿಕ್ರಮ್​’ ಸಿನಿಮಾ ತಂಡದಿಂದ ಟೀಸರ್​ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು, ಟೀಸರ್​ ಮೂಲಕವೇ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಕಮಲ್​ ಹಾಸನ್​ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ವಯಸ್ಸು 66 ದಾಟಿದ್ದರೂ ಕಮಲ್​ ಹಾಸನ್​ ಇಂದಿಗೂ ಎಂಗ್​ ಆ್ಯಂಡ್​ ಎನರ್ಜಿಟಿಕ್​ ಆಗಿಯೇ ಕಾಣಿಸಿಕೊಳ್ಳುತ್ತಾರೆ. ‘ವಿಕ್ರಮ್​’ ಸಿನಿಮಾದಲ್ಲಿ ಅವರಿಗೆ ಸಾಹಸಮಯ ಪಾತ್ರವಿದೆ. ಅದರ ಝಲಕ್​ ತೋರಿಸಲು ಟೀಸರ್​ ಹೊರಬಂದಿದೆ. ಜೈಲಿನಲ್ಲಿ ನಡೆಯುವ ಒಂದು ಶೂಟೌಟ್​ ದೃಶ್ಯದ ಮೂಲಕ ಕಮಲ್​ ಹಾಸನ್​ ಎಂಟ್ರಿ ನೀಡುತ್ತಾರೆ. ಈ ಆ್ಯಕ್ಷನ್​ ಸೀನ್​ ನೋಡಿದರೆ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗುವಂತಿದೆ.

ಅಭಿಮಾನಿಗಳು ಮಾತ್ರವಲ್ಲದೇ ಕಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕೂಡ ‘ವಿಕ್ರಮ್​’ ಸಿನಿಮಾದ ಟೀಸರ್​ ನೋಡಿ ವಾವ್​ ಎನ್ನುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್​ 4 ಮಿಲಿಯನ್​ (40 ಲಕ್ಷ) ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಎಷ್ಟರಮಟ್ಟಿಗೆ ಕಾತರರಾಗಿದ್ದಾರೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ ಒದಗಿಸುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ‘ವಿಕ್ರಮ್​’ ಟೀಸರ್​ ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೆಲ್ಲರೂ ಕಮಲ್​ ಹಾಸನ್​ ಅವರಿಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಅಲ್ಲದೇ, ನಿರ್ದೇಶಕ ಲೋಕೇಶ್​ ಕನಗರಾಜ್​ ಅವರ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2019ರಲ್ಲಿ ಕಾರ್ತಿ ನಟನೆಯ ‘ಖೈದಿ’ ಹಾಗೂ ಈ ವರ್ಷ ಬಿಡುಗಡೆಯಾದ ದಳಪತಿ ವಿಜಯ್​ ಅಭಿನಯದ ‘ಮಾಸ್ಟರ್​’ ಚಿತ್ರಕ್ಕೆ ನಿರ್ದೇಶನ ಮಾಡಿ ಗಮನ ಸೆಳೆದಿರುವ ಅವರು ಈಗ ‘ವಿಕ್ರಮ್​’ ಸಿನಿಮಾ ಮೂಲಕ ಮತ್ತೊಮ್ಮೆ ಮಿಂಚು ಹರಿಸುವ ಸೂಚನೆ ನೀಡಿದ್ದಾರೆ.

ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್​ನಲ್ಲಿ ಅನಿರುದ್ಧ್​ ರವಿಚಂದರ್​ ಅವರ ಹಿನ್ನೆಲೆ ಸಂಗೀತ ಕೂಡ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ.

ಇದನ್ನೂ ಓದಿ:

ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

ಕಮಲ್​ ಹಾಸನ್​ ವಿಚ್ಛೇದನ ಪಡೆದಾಗ ಖುಷಿಪಟ್ಟಿದ್ದ ಮಗಳು ಶ್ರುತಿ ಹಾಸನ್​; ಕಾರಣ ಏನು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ