‘ಭಜರಂಗಿ 2’ ಸಿನಿಮಾ ನೋಡಿದ ನಂತರ ಮಹತ್ವದ ಘೋಷಣೆ ಮಾಡಿದ ಶಿವರಾಜ್​ಕುಮಾರ್​

‘ಭಜರಂಗಿ 2’ ಸಿನಿಮಾ ನೋಡಿದ ನಂತರ ಮಹತ್ವದ ಘೋಷಣೆ ಮಾಡಿದ ಶಿವರಾಜ್​ಕುಮಾರ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 14, 2021 | 7:09 PM

ಹರ್ಷ ಹಾಗೂ ಶಿವರಾಜ್​​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ ‘ಭಜರಂಗಿ 2’. ಈಗ ಇವರ ಕಾಂಬಿನೇಷನ್​​ನಲ್ಲಿ ನಾಲ್ಕನೇ ಸಿನಿಮಾ ಬರುತ್ತಿದೆ

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ಶಿವರಾಜ್​ಕುಮಾರ್​ ಸೈಲೆಂಟ್​ ಆಗಿದ್ದಾರೆ. ಈ ಸಾವು ಅವರಿಗೆ ತೀವ್ರ ನೋವನ್ನು ತಂದಿದೆ. ಇದನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರು ‘ಭಜರಂಗಿ 2’ ಸಿನಿಮಾ ನೋಡೋಕೆ ಸಾಧ್ಯವಾಗಿರಲಿಲ್ಲ. ಈಗ ಶಿವರಾಜ್​ಕುಮಾರ್ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇಂದು (ನವೆಂಬರ್​ 14) ಅಭಿಮಾನಿಗಳ ಜತೆ ಕುಳಿತು ಶಿವರಾಜ್​ಕುಮಾರ್​ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದಾದ ನಂತರ ಅವರು ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಹರ್ಷ ಹಾಗೂ ಶಿವರಾಜ್​​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ ‘ಭಜರಂಗಿ 2’. ಈಗ ಇವರ ಕಾಂಬಿನೇಷನ್​​ನಲ್ಲಿ ನಾಲ್ಕನೇ ಸಿನಿಮಾ ಬರುತ್ತಿದೆ. ಇದು ವಿಳಂಬವಾಗಲಿದೆ ಎನ್ನಲಾಗಿತ್ತು. ಇದನ್ನು, ಶಿವಣ್ಣ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ‘ನನ್ನ 125 ಸಿನಿಮಾಗೆ ಹರ್ಷ ಅವರೇ ನಿರ್ದೇಶನ ಮಾಡಲಿದ್ದಾರೆ’ ಎಂದಿದ್ದಾರೆ ಶಿವರಾಜ್​ಕುಮಾರ್​.

ಇದನ್ನೂ ಓದಿ: ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದ ಶಿವರಾಜ್​ಕುಮಾರ್​