AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್​ ಹಾಸನ್​ ಎದುರುಹಾಕಿಕೊಂಡ ಮಲಯಾಳಂ ನಟ ಫಹಾದ್​ ಫಾಸಿಲ್​

ಕಮಲ್​ ಹಾಸನ್​ ನಟನೆಯ ವಿಕ್ರಮ್ ಸಿನಿಮಾದ ಟೈಟಲ್​ ಟೀಸರ್​ ಒಂದನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ಈ ಟೀಸರ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದರು.

ಕಮಲ್​ ಹಾಸನ್​ ಎದುರುಹಾಕಿಕೊಂಡ ಮಲಯಾಳಂ ನಟ ಫಹಾದ್​ ಫಾಸಿಲ್​
ಫಹಾದ್ ಫಾಸಿಲ್​-ಕಮಲ್​ ಹಾಸನ್
ರಾಜೇಶ್ ದುಗ್ಗುಮನೆ
|

Updated on:May 21, 2021 | 8:50 PM

Share

ಮಲಯಾಳಂ ಹೀರೋ ಫಹಾದ್​ ಫಾಸಿಲ್​ ನಟನೆ ಮೂಲಕ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದಾರೆ. ಕೇವಲ ಮಲಯಾಳಂ ಮಾತ್ರವಲ್ಲದೆ ಬೇರೇ ಇಂಡಸ್ಟ್ರಿಯವರಿಗೂ ಫಹಾದ್​ ಪರಿಚಯವಿದೆ. ಅವರು ಕೈಗೆತ್ತಿಕೊಳ್ಳುವ ಪ್ರತೀ ಸಿನಿಮಾದಲ್ಲಿ ಅವರ ಪಾತ್ರ ಭಿನ್ನವಾಗಿರುತ್ತದೆ. ಈಗ ಅವರು ಕಮಲ್​ ಹಾಸನ್​ ಅಭಿನಯಿಸುತ್ತಿರುವ ತಮಿಳಿನ ವಿಕ್ರಮ್ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಕಮಲ್​ ಹಾಸನ್​ ನಟನೆಯ ವಿಕ್ರಮ್ ಸಿನಿಮಾದ ಟೈಟಲ್​ ಟೀಸರ್​ ಒಂದನ್ನು ಚಿತ್ರತಂಡ ರಿಲೀಸ್​ ಮಾಡಿತ್ತು. ಈ ಟೀಸರ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದರು. ದಳಪತಿ ವಿಜಯ್​ ನಟನೆಯ ಮಾಸ್ಟರ್​ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್​ ಕನಗರಾಜ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ವಿಜಯ್​ ಸೇತುಪತಿ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಿತ್ತು. ಈಗ ಸಿನಿಮಾಗೆ ಫಹಾದ್​ ಕೂಡ ಸೇರಿಕೊಳ್ಳುತ್ತಿರುವುದು ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿದೆ.

ವಿಕ್ರಮ್​ ಸಿನಿಮಾದಲ್ಲಿ ವಿಜಯ್​ ಸೇತುಪತಿ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫಹಾದ್​ ಭ್ರಷ್ಟ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಸಾಕ್ಷಿ ಹೇಳಲು ಹೊರಟಿರುವ ವ್ಯಕ್ತಿಯನ್ನು ಸಾಯಿಸಲು ರೌಡಿಗೆ (ವಿಜಯ್​ ಸೇತುಪತಿ) ಈ ಪೊಲೀಸ್​ ಅಧಿಕಾರಿ ಸಹಕಾರ ನೀಡುತ್ತಾನೆ ಎನ್ನಲಾಗಿದೆ. ಈ ಸಾಕ್ಷ್ಯವನ್ನು ಹೀರೋ (ಕಮಲ್​ ಹಾಸನ್​) ಕಾಪಾಡುತ್ತಿರುತ್ತಾನೆ ಎನ್ನಲಾಗಿದೆ.

ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಜಲ್ಲಿಕಟ್ಟು ಸಿನಿಮಾದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ಗಿರೀಶ್​ ಗಂಗಾಧರನ್​ ಈ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿನಿಮಾದ ಫ್ರೇಮ್​ ಮತ್ತಷ್ಟು ಅದ್ಭುತವಾಗಿ ಮೂಡಿಬರುವ ನಿರೀಕ್ಷೆ ಇದೆ. ಅನಿರುದ್ಧ್​ ರವಿಚಂದರ್​​​ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪುಷ್ಪ ಸಿನಿಮಾದ ವಿಲನ್ ನಟ ಫಹಾದ್ ಫಾಸಿಲ್ ಗೆ 5 ಕೋಟಿ ಸಂಭಾವನೆ

Published On - 8:50 pm, Fri, 21 May 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More