Deepika Singh: ತೌಕ್ತೆ ಚಂಡಮಾರುತದಿಂದ ನೆಲಕ್ಕುರುಳಿದ ಮರದ ಮೇಲೆ ಫೋಟೋಶೂಟ್, ಡ್ಯಾನ್ಸ್; ಟ್ರೋಲ್ ಆದ ಕಿರುತೆರೆ ನಟಿ
Deepika Singh Photoshoot: ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಥ್ರಿಲ್ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗುತ್ತಾರೆ ಎಂಬುದು ದೀಪಿಕಾ ಅವರ ಆಲೋಚನೆ ಆಗಿತ್ತೇನೋ. ಆದರೆ, ಅಲ್ಲಿ ಆಗಿದ್ದೇ ಬೇರೆ.
ತೌಕ್ತೆ ಚಂಡಮಾರುತದ ಅಬ್ಬರ ಭಾರತದಲ್ಲಿ ಜೋರಾಗಿತ್ತು. ಈ ಚಂಡಮಾರುತದಿಂದ ಆದ ಅವಘಡಗಳು ಒಂದೆರಡಲ್ಲ. ಚಂಡಮಾರುತದ ಅಬ್ಬರಕ್ಕೆ ದೇಶದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಅನೇಕರು ಮೃತಪಟ್ಟಿದ್ದಾರೆ ಕೂಡ. ಮಹಾರಾಷ್ಟ್ರದಲ್ಲೂ ಈ ಚಂಡಮಾರುತದ ಅಬ್ಬರ ಜೋರಾಗಿಯೇ ಇತ್ತು. ಈ ವೇಳೆ, ಹಿಂದಿ ಕಿರುತೆರೆ ನಟಿ ದೀಪಿಕಾ ಸಿಂಗ್ ಡ್ಯಾನ್ಸ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮರಗಳು ಮುರಿದು ಬಿದ್ದಿವೆ. ದೀಪಿಕಾ ಸಿಂಗ್ ಮನೆಯ ಸಮೀಪವೂ ಮರವೊಂದು ಮುರಿದು ಬಿದ್ದಿತ್ತು. ಈ ವೇಳೆ ಅವರು ಅಲ್ಲಿಗೆ ತೆರಳಿ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿದ್ದ ಮರದ ಎದುರು ನಿಂತು ಫೋಟೋಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.
View this post on Instagram
ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಥ್ರಿಲ್ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗುತ್ತಾರೆ ಎಂಬುದು ದೀಪಿಕಾ ಅವರ ಆಲೋಚನೆ ಆಗಿತ್ತೇನೋ. ಆದರೆ, ಅಲ್ಲಿ ಆಗಿದ್ದೇ ಬೇರೆ. ನಟಿಗೆ ಎಲ್ಲರೂ ಬಾಯಿಗೆ ಬಂದಂತೆ ಬೈದಿದ್ದಾರೆ.
ಕೊವಿಡ್ ಎರಡನೇ ಅಲೆ ಜೋರಾಗಿದೆ. ಇದರ ಜತೆಗೆ ತೌಕ್ತೆ ಚಂಡಮಾರುತದ ಎಫೆಕ್ಟ್ ಜೋರಾಗಿದೆ. ಹೀಗಿರುವಾಗ ಬಿದ್ದ ಮರವನ್ನು ಹಿಡಿದುಕೊಂಡು ಪೋಸ್ ನೀಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Today we have a girlboss posing with (in?) a tree that fell because of the cyclone currently ravaging India’s west coast. pic.twitter.com/gmBVlkWZH3
— Iva Dixit (@ivadixit) May 18, 2021
I wish I had her motivation to dress up, put on ear rings, make up, and let my hair down to move a fallen tree. I went in a loose tee and torn pyjamas with my hair tied up, to move a part of a tree that had fallen on our car. Best, I didn’t take my phone cuz it’d get wet.
— Sway (@v_swetha) May 19, 2021
ಇದನ್ನೂ ಓದಿ: ನನ್ನ ಜೊತೆ ಮಲಗಿದ್ರೆ ಏನು ಬೇಕಾದರೂ ಕೊಡುತ್ತೇನೆ; ಪ್ರಾಧ್ಯಾಪಕನಿಂದ ಬಂದ ಆಹ್ವಾನ ಕೇಳಿ ನಟಿ ಶಾಕ್
Radhika Apte: ನಗ್ನ ವಿಡಿಯೋ ಲೀಕ್; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ
Published On - 7:23 am, Sat, 22 May 21