‘ನಿಮ್ಮ ತುಟಿಗಳ ಸೈಜ್​ ಏನು’? ಶ್ರುತಿ ಹಾಸನ್​ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ

‘ನಿಮ್ಮ ತುಟಿಗಳ ಸೈಜ್​ ಏನು’? ಶ್ರುತಿ ಹಾಸನ್​ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ
ಶ್ರುತಿ ಹಾಸನ್

Shruti Haasan: ಶ್ರುತಿ ಹಾಸನ್​ ಅವರು ಖಾಸಗಿ ಜೀವನದ ವಿಷಯದ ಕಾರಣದಿಂದ ಆಗೊಮ್ಮೆ ಈಗೊಮ್ಮೆ ಟ್ರೋಲ್​ ಆಗುವುದುಂಟು. ಈ ಬಾರಿ ನೆಟ್ಟಿಗನೊಬ್ಬ ಈ ರೀತಿಯ ವಿಚಿತ್ರ ಪ್ರಶ್ನೆ ಕೇಳಿದ್ದಾನೆ.

TV9kannada Web Team

| Edited By: Madan Kumar

Apr 15, 2022 | 11:48 PM

ನಟಿಯರಿಗೆ ಆಗಾಗ ಮುಜುಗರದ ಪ್ರಶ್ನೆ ಎದುರಾಗುತ್ತವೆ. ಈ ಸೋಶಿಯಲ್​ ಮೀಡಿಯಾ ದುನಿಯಾದಲ್ಲಿ ಪ್ರತಿಯೊಬ್ಬರೂ ಮೊಬೈಲ್​ ಬಳಕೆ ಮಾಡುತ್ತಾರೆ. ಸೆಲೆಬ್ರಿಟಿಗಳು ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಸಮಯ ಸಿಕ್ಕರೆ ಫ್ಯಾನ್ಸ್ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಈ ವೇಳೆ ಕೆಲವು ಅಚ್ಚರಿಯ ಪ್ರಶ್ನೆಗಳು ಎದುರಾಗುವುದುಂಟು. ‘ಸಲಾರ್​’ (Salaar Movie) ನಟಿ ಶ್ರುತಿ ಹಾಸನ್​ ಅವರು ಕೂಡ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಒಂದು ಅವಕಾಶ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Shruti Haasan Instagram) ಅವರು ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ನೆಚ್ಚಿನ ನಟಿಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಜನರು ಹಲವು ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಒಬ್ಬ ಭೂಪ ಮಾತ್ರ ಸ್ವಲ್ಪ ಅಸಂಬದ್ಧವಾದ ವಿಚಾರ ಎತ್ತಿದ್ದಾನೆ. ‘ನಿಮ್ಮ ತುಟಿಗಳ ಸೈಜ್​ ಎಷ್ಟು’ ಎಂದು ಆತ ಕೇಳಿದ್ದಾನೆ. ಆ ಪ್ರಶ್ನೆಯನ್ನು ಶ್ರುತಿ ಹಾಸನ್(Shruti Haasan) ಕಡೆಗಣಿಸಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಪ್ರಶ್ನೆ ಕೇಳಿದ ವ್ಯಕ್ತಿಗೆ ಕೂಲ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಮಲ್​ ಹಾಸನ್​ ಪುತ್ರಿ ಎಂಬ ಕಾರಣಕ್ಕೆ ಶ್ರುತಿ ಹಾಸನ್​ ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶಗಳು ಸಿಕ್ಕವು. ಬಳಿಕ ಅವರು ತಮ್ಮ ಶ್ರಮದ ಮೇಲೆ ಬೆಳೆದು ನಿಂತಿದ್ದಾರೆ. ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಅವರು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡರು ಎಂಬ ಮಾತು ಕೂಡ ಇದೆ. ಅದನ್ನೇ ಟಾರ್ಗೆಟ್​ ಆಗಿಟ್ಟುಕೊಂಡು ನೆಟ್ಟಿಗನೊಬ್ಬ ಈ ರೀತಿಯ ಪ್ರಶ್ನೆ ಕೇಳಿರಬಹುದು. ಅದಕ್ಕೆ ಶ್ರುತಿ ಹಾಸನ್​ ಸೀರಿಯಸ್​ ಆಗಿಲ್ಲ. ‘ತುಟಿಗಳ ಸೈಜ್​ ಕೂಡ ಇರುತ್ತದೆಯೇ?’ ಎಂದು ಮರುಪ್ರಶ್ನೆ ಹಾಕುವ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ ಅಷ್ಟೇ.

ಸೋಶಿಯಲ್​ ಮೀಡಿಯಾದಲ್ಲಿ ಶ್ರುತಿ ಹಾಸನ್​ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 1.9 ಕೋಟಿಗೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಬಾಯ್​ಫ್ರೆಂಡ್​ ಶಾಂತನೂ ಹಜಾರಿಕಾ ಜೊತೆ ಇರುವ ಹಲವು ಫೋಟೋ ಮತ್ತು ವಿಡಿಯೋಗಳನ್ನು ಅವರು ಪೋಸ್ಟ್​ ಮಾಡುತ್ತಾರೆ. ಶ್ರುತಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ, ಗಾಸಿಪ್​ ಕಾಲಂಗಳಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಶ್ರುತಿ ಫ್ಯಾಟ್​ ಆಗಿದ್ದಾರೆ, ಸದ್ಯದಲ್ಲೇ ಮದುವೆ ಆಗುತ್ತಾರೆ ಎಂಬಿತ್ಯಾದಿ ವಿಷಯದ ಬಗ್ಗೆ ಟ್ರೋಲ್​ ಆಗಿದ್ದು ಬೇಸರ ಮೂಡಿಸುತ್ತದೆ ಎಂದು ಸಂದರ್ಶನದಲ್ಲಿ ಶ್ರುತಿ ಹೇಳಿಕೊಂಡಿದ್ದರು.

ಇತ್ತೀಚೆಗೆ ತೆರೆಕಂಡ ‘ವಕೀಲ್​ ಸಾಬ್​’ ಚಿತ್ರದಲ್ಲಿ ಶ್ರುತಿ ಹಾಸನ್​ ನಾಯಕಿ ಆಗಿದ್ದರು. ಈಗ ಅವರು ಬಹುನಿರೀಕ್ಷಿತ ‘ಸಲಾರ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಪ್ರಭಾಸ್​ ಹೀರೋ. ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಗೆಲುವಿನಿಂದ ಸೆನ್ಸೇಷನ್​ ಸೃಷ್ಟಿ ಮಾಡಿರುವ ಪ್ರಶಾಂತ್​ ನೀಲ್​ ಅವರ ಬತ್ತಳಿಕೆಯಿಂದಲೇ ‘ಸಲಾರ್​’ ಮೂಡಿಬರುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ. ‘ಸಲಾರ್​’ ಮಾತ್ರವಲ್ಲದೇ, ‘ಎನ್​ಬಿಕೆ 107’ ಚಿತ್ರದಲ್ಲೂ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ನಟನೆಯ 157ನೇ ಚಿತ್ರಕ್ಕೂ ಅವರೇ ನಾಯಕಿ. ಈ ಎಲ್ಲ ಸಿನಿಮಾಗಳಲ್ಲಿ ಅವರ ಪಾತ್ರ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಇದೆ.

ಇದನ್ನೂ ಓದಿ:

ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ

‘ನಾನೇ ಮೊದಲು ಐ ಲವ್​ ಯೂ ಹೇಳಿದ್ದು’; ಬಾಯ್​ಫ್ರೆಂಡ್​ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಶ್ರುತಿ ಹಾಸನ್

Follow us on

Related Stories

Most Read Stories

Click on your DTH Provider to Add TV9 Kannada