ಸೋಶಿಯಲ್​ ಮೀಡಿಯಾಗೆ ​ ರಾಜ್​ ಕುಂದ್ರಾ ಕಂಬ್ಯಾಕ್; ಶಿಲ್ಪಾ ಶೆಟ್ಟಿಯನ್ನೇ ಅನ್​ಫಾಲೋ ಮಾಡಿದ ಉದ್ಯಮಿ

ಕಳೆದ ಜುಲೈ ತಿಂಗಳಲ್ಲಿ ರಾಜ್​ಕುಂದ್ರಾ ಬಂಧನಕ್ಕೆ ಒಳಗಾಗಿದ್ದರು. ಒಂದು ತಿಂಗಳ ನಂತರ ಅವರು ಜೈಲಿನಿಂದ ಹೊರ ಬಂದಿದ್ದರು. ಈ ಮಧ್ಯೆ ಅವರು ಸೋಶಿಯಲ್​ ಮೀಡಿಯಾಗೆ ಗುಡ್​ಬೈ ಹೇಳಿದ್ದರು

ಸೋಶಿಯಲ್​ ಮೀಡಿಯಾಗೆ ​ ರಾಜ್​ ಕುಂದ್ರಾ ಕಂಬ್ಯಾಕ್; ಶಿಲ್ಪಾ ಶೆಟ್ಟಿಯನ್ನೇ ಅನ್​ಫಾಲೋ ಮಾಡಿದ ಉದ್ಯಮಿ
ರಾಜ್​ ಕುಂದ್ರಾ-ಶಿಲ್ಪಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 16, 2022 | 1:49 PM

ರಾಜ್​ ಕುಂದ್ರಾ (Raj Kundra) ಹಾಗೂ ಅವರ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಪಾಲಿಗೆ 2021 ತುಂಬಾನೇ ಕಹಿಯಾಗಿತ್ತು. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಜೈಲಿಗೆ ಹೋಗಿ ಬಂದರು. ಪತಿ ಇಂಥ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದು ಶಿಲ್ಪಾ ಶೆಟ್ಟಿಗೆ ತುಂಬಾನೇ ಮುಜುಗರ ತಂದಿತ್ತು. ಸಮಾಜದಲ್ಲಿ ತಲೆಎತ್ತಿಕೊಂಡು ಓಡಾಡೋಕೆ ಅವರಿಗೆ ಆಗುತ್ತಿರಲಿಲ್ಲ. ಜೈಲಿನಿಂದ ಹೊರ ಬಂದ ನಂತರದಲ್ಲಿ ರಾಜ್​ ಕುಂದ್ರಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬದಲಿಗೆ, ಸೈಲೆಂಟ್​ ಆದರು. ಸೋಶಿಯಲ್​ ಮೀಡಿಯಾದಿಂದ ದೂರ ಉಳಿದುಕೊಂಡರು. ಈಗ ಅವರು ಮತ್ತೆ ಇನ್​​ಸ್ಟಾಗ್ರಾಮ್​ಗೆ (Instagram) ಕಂಬ್ಯಾಕ್​ ಮಾಡಿದ್ದಾರೆ. ಅಚ್ಚರಿ ಎಂದರೆ ಅವರು ಪತ್ನಿ ಶಿಲ್ಪಾ ಶೆಟ್ಟಿಯನ್ನು ಹಿಂಬಾಲಿಸುತ್ತಿಲ್ಲ.

ಕಳೆದ ಜುಲೈ ತಿಂಗಳಲ್ಲಿ ರಾಜ್​ಕುಂದ್ರಾ ಬಂಧನಕ್ಕೆ ಒಳಗಾಗಿದ್ದರು. ಒಂದು ತಿಂಗಳ ನಂತರ ಅವರು ಜೈಲಿನಿಂದ ಹೊರ ಬಂದಿದ್ದರು. ಆದರೆ, ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ನವೆಂಬರ್​ನಲ್ಲಿ. ಈ ಮಧ್ಯೆ ಅವರು ಸೋಶಿಯಲ್​ ಮೀಡಿಯಾಗೆ ಗುಡ್​ಬೈ ಹೇಳಿದ್ದರು. ಈಗ ಅವರು ಮತ್ತೆ ಇನ್​ಸ್ಟಾಗ್ರಾಮ್​ಗೆ ಮರಳಿದ್ದಾರೆ. ಅವರು 9.77 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಅವರು ಹಿಂಬಾಲಿಸುತ್ತಿರುವುದು ಒಬ್ಬರನ್ನು ಮಾತ್ರ. ಆದರೆ ಅದು ಶಿಲ್ಪಾ ಶೆಟ್ಟಿ ಅಲ್ಲ.

ರಾಜ್​ ಕುಂದ್ರಾ ಹಿಂಬಾಲಿಸುತ್ತಿರುವ ಒಂದು ಖಾತೆ ಎಂದರೆ ಅದು ಬಾಂದ್ರಾದಲ್ಲಿರುವ ಸೀಫುಡ್​ ರೆಸ್ಟೋರೆಂಟ್​. ಹಾಗಾದರೆ ರಾಜ್​ಕುಂದ್ರಾ ಈ ಖಾತೆಯನ್ನೇಕೆ ಹಿಂಬಾಲಿಸುತ್ತಿದ್ದಾರೆ? ಅದಕ್ಕೂ ಕಾರಣವಿದೆ. ಈ ರೆಸ್ಟೋರೆಂಟ್​ಗೆ ಅವರ ಪತ್ನಿ ಶಿಲ್ಪಾ ಶೆಟ್ಟಿ ಸಹ ಮಾಲಕಿ. ಈ ಕಾರಣಕ್ಕೆ ರಾಜ್​ಕುಂದ್ರಾ ಇದನ್ನು ಹಿಂಬಾಲಿಸುತ್ತಿದ್ದಾರೆ ಎನ್ನಲಾಗಿದೆ. ಶಿಲ್ಪಾ ಅವರನ್ನು ರಾಜ್​ ಕುಂದ್ರಾ ಅನ್​​ಫಾಲೋ ಮಾಡಿದ್ದಾರೋ ಅಥವಾ ಅವರನ್ನು ಹಿಂಬಾಲಿಸುತ್ತಲೇ ಇರಲಿಲ್ಲವೋ ಎನ್ನುವ ವಿಚಾರ ತಿಳಿದಿಲ್ಲ. ಇನ್ನು, ಎಲ್ಲಾ ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಿಂದ ರಾಜ್​ ಕುಂದ್ರಾ ಡಿಲೀಟ್​ ಮಾಡಿದ್ದಾರೆ.

ಡಿಸೆಂಬರ್​ ತಿಂಗಳಲ್ಲಿ ರಾಜ್​ ಕುಂದ್ರಾ ಈ ಬಗ್ಗೆ ಮೌನ ಮುರಿದಿದ್ದರು. ‘ನನ್ನ ಕುರಿತು ಆಧಾರವಿಲ್ಲದ ಅನೇಕ ಮಾಹಿತಿ, ಲೇಖನಗಳು ಹರಿದಾಡುತ್ತಿವೆ. ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ನನ್ನ ಜೀವನದಲ್ಲಿ ನಾನು ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ವಿತರಣೆಯನ್ನು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ನಾನು ಸ್ಪಷ್ಟನೆಗಳನ್ನು ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದರಲ್ಲಿ ಸತ್ಯ ಗೆಲ್ಲುತ್ತದೆ. ನಾನು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದ್ದರು ಅವರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ

‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್​ ಕುಂದ್ರಾ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ