‘ನಾನೇ ಮೊದಲು ಐ ಲವ್​ ಯೂ ಹೇಳಿದ್ದು’; ಬಾಯ್​ಫ್ರೆಂಡ್​ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಶ್ರುತಿ ಹಾಸನ್

‘ನಾನೇ ಮೊದಲು ಐ ಲವ್​ ಯೂ ಹೇಳಿದ್ದು’; ಬಾಯ್​ಫ್ರೆಂಡ್​ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಶ್ರುತಿ ಹಾಸನ್
ಶ್ರುತಿ-ಸಂತನು

ಸಾಮಾನ್ಯವಾಗಿ, ಹುಡುಗರು ಮೊದಲು ಪ್ರಪೋಸ್​ ಮಾಡುತ್ತಾರೆ. ಬಹುತೇಕ ಪ್ರೇಮ ಕಥೆಗಳಲ್ಲಿ ಇದೇ ಆಗಿರುತ್ತದೆ. ಆದರೆ, ಶ್ರುತಿ ಹಾಸನ್​ ಆ ರೀತಿ ಅಲ್ಲ. ಅವರೇ ಮೊದಲು ಐ ಲವ್​ ಯೂ ಹೇಳಿದ್ದಾರೆ.

TV9kannada Web Team

| Edited By: Rajesh Duggumane

Jan 09, 2022 | 5:02 PM

ನಟ, ರಾಜಕಾರಣಿ ಕಮಲ್​ ಹಾಸನ್​ ಮಗಳು ನಟಿ ಶ್ರುತಿ ಹಾಸನ್​ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ ಹೆಸರಲ್ಲಿ ಅವಕಾಶ ಪಡೆದುಕೊಳ್ಳೋಕೆ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಜೀವನದ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಂತವಾಗಿ ತೆಗೆದುಕೊಳ್ಳುತ್ತಾರೆ. ಬಾಯ್​ಫ್ರೆಂಡ್​ ವಿಚಾರದಲ್ಲೂ ಶ್ರುತಿ ಹಾಸನ್​ ಮುಚ್ಚು ಮರೆ ಮಾಡಿಲ್ಲ. ಸಾರ್ವಜನಿಕವಾಗಿ ಇಬ್ಬರೂ ಕಿಸ್ ಮಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ಶ್ರುತಿ ಹಾಸನ್ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಇಬ್ಬರಲ್ಲಿ  ಮೊದಲು ಐ ಲವ್​ ಯೂ ಹೇಳಿದ್ದು ​ಶ್ರುತಿ ಅನ್ನೋದು ವಿಶೇಷ.

ಶ್ರುತಿ ಹಾಸನ್​ ಸಮಯ ಸಿಕ್ಕಾಗೆಲ್ಲ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಾರೆ. ಶ್ರುತಿ ಹಾಸನ್​ ಅವರು ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂತನು ​ ಜತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಅವರು ಅಪ್​ಲೋಡ್​ ಮಾಡುತ್ತಾರೆ. ಈಗ ಅವರು ಹಂಚಿಕೊಂಡ ರೀಲ್ಸ್​ನಲ್ಲಿ ಅಚ್ಚರಿಯ ವಿಚಾರ ಹೊರ ಬಿದ್ದಿದೆ.

ಸಾಮಾನ್ಯವಾಗಿ, ಹುಡುಗರು ಮೊದಲು ಪ್ರಪೋಸ್​ ಮಾಡುತ್ತಾರೆ. ಬಹುತೇಕ ಪ್ರೇಮ ಕಥೆಗಳಲ್ಲಿ ಇದೇ ಆಗಿರುತ್ತದೆ. ಆದರೆ, ಶ್ರುತಿ ಹಾಸನ್​ ಆ ರೀತಿ ಅಲ್ಲ. ಬಾಯ್​ಫ್ರೆಂಡ್​ ಸಂತನುಗೆ ಶ್ರುತಿ ಹಾಸನ್​ ಅವರೇ ಮೊದಲು ಐ ಲವ್​ ಯೂ ಹೇಳಿದ್ದರಂತೆ. ಹೊಸ ರೀಲ್ಸ್​ನಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ.

ಶ್ರುತಿ ಹಾಸನ್​ಗೆ ಸದ್ಯ ಕೈ ತುಂಬ ಆಫರ್​ಗಳಿವೆ. ಸ್ಟಾರ್​ ನಟ ಕಮಲ್​ ಹಾಸನ್​ ಪುತ್ರಿ ಆಗಿದ್ದರೂ ಕೂಡ ಅವರು ತಂದೆ-ತಾಯಿ ಬಳಿ ಹಣ ಕೇಳುವುದಿಲ್ಲವಂತೆ. ‘ನಾನು ಇಂಡಿಪೆಂಡೆಂಟ್​ ಮಹಿಳೆ. ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್​ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ. ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್​ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್​​ ಮಾಡುವಾಗ ಮಾಸ್ಕ್​ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್​ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ’ ಎಂದು ಶ್ರುತಿ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: Shruti Hassan: ಫೋಟೋಶೂಟ್​ಗಾಗಿ ಟಾಪ್​ಲೆಸ್​ ಆದ ಶ್ರುತಿ ಹಾಸನ್

ಶ್ರುತಿ ಹರಿಹರನ್​ ಮೀಟೂ ಕಾನೂನು ಸಮರ: ಅರ್ಜುನ್​ ಸರ್ಜಾಗೆ ಗೆಲುವು? ಸಾಕ್ಷಿ ಕೊರತೆಯಿಂದ ಬಿ ರಿಪೋರ್ಟ್​

Follow us on

Related Stories

Most Read Stories

Click on your DTH Provider to Add TV9 Kannada