AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​

Kangana Ranaut | Salman Khan: ಸಲ್ಮಾನ್​ ಖಾನ್​ ಮತ್ತು ಕಂಗನಾ ರಣಾವತ್​ ನಡುವಿನ ಈ ಆತ್ಮೀಯತೆ ಬಗ್ಗೆ ಬಿ-ಟೌನ್​ನಲ್ಲಿ ಚರ್ಚೆ ಆಗುತ್ತಿದೆ. ಅಭಿಮಾನಿಗಳಂತೂ ಖುಷಿ ಆಗಿದ್ದಾರೆ.

‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​
ಕಂಗನಾ ರಣಾವತ್, ಸಲ್ಮಾನ್ ಖಾನ್
TV9 Web
| Edited By: |

Updated on: May 14, 2022 | 11:29 AM

Share

ಬಾಲಿವುಡ್​ನಲ್ಲಿ ಕಾಂಟ್ರವರ್ಸಿಗಳ ಕಾರಣದಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ ನಟಿ ಕಂಗನಾ ರಣಾವತ್​. ಹಿಂದಿ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ನೆಪೋಟಿಸಂ ಮಾಡುವ ಗ್ಯಾಂಗ್​ ಕಂಡರೆ ಅವರಿಗೆ ಎಲ್ಲಿಲ್ಲದ ಅಸಮಾಧಾನ. ಸಲ್ಮಾನ್​ ಖಾನ್​, ಕರಣ್​ ಜೋಹರ್​ ಮುಂತಾದವರು ಕೇವಲ ಫಿಲ್ಮಿ ಕುಟುಂಬದ ಪ್ರತಿಭೆಗಳಿಗೆ ಮಾತ್ರ ಬೆಂಬಲ ನೀಡುತ್ತಾರೆ ಎಂಬುದು ಕಂಗನಾ ರಣಾವತ್​ (Kangana Ranaut) ಆರೋಪ. ಹಾಗಾಗಿ ಅವರು ಎಂದಿಗೂ ಸಲ್ಲು ಅಥವಾ ಕರಣ್​ ಜೋಹರ್​ ಗ್ಯಾಂಗ್​ ಜೊತೆ ಗುರುತಿಸಿಕೊಂಡಿಲ್ಲ. ಆದರೆ ಈಗ ಏಕಾಏಕಿ ಕಂಗನಾ ರಣಾವತ್​ ಅವರಿಗೆ ಸಲ್ಮಾನ್​ ಖಾನ್​ ಮೇಲೆ ಪ್ರೀತಿ ಉಕ್ಕಿದೆ. ಅದನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಸಿನಿಮಾ (Dhaakad Movie) ಬಿಡುಗಡೆಗೆ ಸಜ್ಜಾಗಿದೆ. ಮೇ 20ರಂದು ತೆರೆಕಾಣಲಿರುವ ಈ ಸಿನಿಮಾದ ಟ್ರೇಲರ್​ ಈಗಾಗಲೇ ಸದ್ದು ಮಾಡಿದೆ. ಸಲ್ಮಾನ್​ ಖಾನ್​ (Salman Khan) ಅವರ ಗಮನವನ್ನೂ ಈ ಚಿತ್ರದ ಟ್ರೇಲರ್ ಸೆಳೆದುಕೊಂಡಿದೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಲ್ಲು ಪೋಸ್ಟ್​ ಮಾಡಿದ್ದು, ಅದಕ್ಕಾಗಿ ಕಂಗನಾ ರಣಾವತ್​ ಅವರು ಧನ್ಯವಾದ ಅರ್ಪಿಸಿದ್ದಾರೆ.

ಕಂಗನಾ ರಣಾವತ್​ ಅವರ ಕಿರಿಕ್​ ವ್ಯಕ್ತಿತ್ವದಿಂದಾಗಿ ಬಾಲಿವುಡ್​ನ ಬಹುತೇಕರು ಅವರ ತಂಟೆಗೆ ಹೋಗುವುದಿಲ್ಲ. ಅವರ ಸಿನಿಮಾಗಳ ಬಗ್ಗೆಯೂ ಮಾತನಾಡುವುದಿಲ್ಲ. ತಮ್ಮ ಚಿತ್ರಕ್ಕೆ ಸ್ಟಾರ್​ ನಟರಿಂದ ಬೆಂಬಲ ಸಿಗುವುದಿಲ್ಲ ಎಂಬುದು ಕಂಗನಾ ಅವರ ಆರೋಪ ಆಗಿತ್ತು. ಆದರೆ ಅದನ್ನು ಈಗ ಸಲ್ಮಾನ್​ ಖಾನ್​ ಸುಳ್ಳು ಮಾಡಿದ್ದಾರೆ. ‘ಧಾಕಡ್​’ ಚಿತ್ರದ ಟ್ರೇಲರ್​ ಅನ್ನು ಟ್ವಿಟರ್​ನಲ್ಲಿ ಅವರು ಹಂಚಿಕೊಂಡಿದ್ದಾರೆ. ಜತೆಗೆ ಇಡೀ ಟೀಮ್​ಗೆ ಅವರು ಶುಭ ಹಾರೈಸಿದ್ದಾರೆ.

ಸಲ್ಮಾನ್ ಖಾನ್​ ಅವರಿಂದ ಸಿಕ್ಕ ಈ ಬೆಂಬಲಕ್ಕೆ ಕಂಗನಾ ಫುಲ್​ ಖುಷ್​ ಆಗಿದ್ದಾರೆ. ಇದಕ್ಕೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ನನ್ನ ದಬಂಗ್​ ಹೀರೋಗೆ ಧನ್ಯವಾದಗಳು. ಚಿನ್ನದಂತಹ ಹೃದಯ ನಿಮ್ಮದು. ಇನ್ಮುಂದೆ ಚಿತ್ರರಂಗದಲ್ಲಿ ನಾನು ಒಂಟಿ ಎಂದು ಹೇಳುವುದಿಲ್ಲ. ಇಡೀ ಧಾಕಡ್​ ಚಿತ್ರತಂಡ ಪರವಾಗಿ ಧನ್ಯವಾದಗಳು’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಸಲ್ಮಾನ್​ ಖಾನ್​ ಅವರಂತಹ ಸ್ಟಾರ್​ ಹೀರೋ ಕಡೆಯಿಂದ ಶುಭ ಹಾರೈಕೆ ಸಿಕ್ಕಿದ್ದಕ್ಕೆ ಕಂಗನಾ ಫ್ಯಾನ್ಸ್​ ಸಖತ್​ ಖುಷಿ ಆಗಿದ್ದಾರೆ. Source

ಇದನ್ನೂ ಓದಿ
Image
ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು
Image
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?
Image
Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?
Image
‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

ನಟಿಯಾಗಿ ಮಾತ್ರವಲ್ಲದೇ ನಿರೂಪಕಿ ಆಗಿಯೂ ಕಂಗನಾ ಯಶಸ್ವಿ ಆಗಿದ್ದಾರೆ. ಅವರು ನಡೆಸಿಕೊಡುತ್ತಿದ್ದ ‘ಲಾಕಪ್​’ ಶೋ ಯಶಸ್ವಿಯಾಗಿ ಮುಕ್ತಾಯ ಆಗಿದೆ. ಈ ಮೂಲಕ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಧಾಕಡ್’ ಸಿನಿಮಾ ಮೇಲೆ ಅವರ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಎದುರು ಅನೇಕ ಬಾಲಿವುಡ್​ ಸಿನಿಮಾಗಳು ನೆಲಕಚ್ಚಿವೆ. ಈಗ ‘ಧಾಕಡ್​’ ಯಾವ ರೀತಿ ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಮೂಡಿದೆ. ಈ ಸಿನಿಮಾದಲ್ಲಿ ಏಜೆಂಟ್​ ಅಗ್ನಿ ಎಂಬ ಸ್ಪೈ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲೂ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?