‘ಗಡಂಗ್ ರಕ್ಕಮ್ಮ’ ಎಂಟ್ರಿಗೆ ದಿನಾಂಕ ಫಿಕ್ಸ್; ಹೊಸ ಮಾಹಿತಿ ಹಂಚಿಕೊಂಡ ಸುದೀಪ್
Ra Ra Rakkamma Lyric Video: ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಜಾಕ್ವೆಲಿನ್ ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ..’ ಲಿರಿಕಲ್ ಸಾಂಗ್ ಬಗ್ಗೆ ಸುದೀಪ್ ಮಾಹಿತಿ ನೀಡಿದ್ದಾರೆ.
ಹತ್ತು ಹಲವು ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona) ಸೌಂಡು ಮಾಡುತ್ತಿದೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ಈ ಚಿತ್ರ ಜುಲೈ 28ರಂದು ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ ಎರಡು ತಿಂಗಳು ಸಮಯಾವಕಾಶ ಇದೆ. ಸದ್ಯ, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಸಿನಿಮಾ ಬಗ್ಗೆ ಹೊಸಹೊಸ ಅಪ್ಡೇಟ್ ನೀಡಲಾಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಅವರ ಪಾತ್ರದ ಹೆಸರು ‘ಗಡಂಗ್ ರಕ್ಕಮ್ಮ’. ಅವರ ಹೆಸರಲ್ಲಿ ‘ರಾ ರಾ ರಕ್ಕಮ್ಮ..’ ಎಂಬ ವಿಶೇಷ ಸಾಂಗ್ ಕೂಡ ಮಾಡಲಾಗಿದೆ. ಈ ಹಾಡಿನ ಲಿರಿಕಲ್ ವಿಡಿಯೋದ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ.
ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಗ್ಲಾಮರಸ್ ಆದಂತಹ ಕಾಸ್ಟ್ಯೂಮ್ ಧರಿಸಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದ ಪೋಸ್ಟರ್ ಈ ಮೊದಲು ರಿಲೀಸ್ ಆಗಿತ್ತು. ಈಗ ರಿಲೀಸ್ ಆಗಲಿರುವ ಸಾಂಗ್ ಹೇಗೆ ಇರಲಿದೆ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ: ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?
ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಸಾಂಗ್ ಏಕ ಕಾಲದಲ್ಲಿ ರಿಲೀಸ್ ಮಾಡಲಾಗುತ್ತದೆ. ಆದರೆ, ‘ವಿಕ್ರಾಂತ್ ರೋಣ’ ಬೇರೆ ತಂತ್ರ ಬಳಸಿದೆ. ‘ರಾ ರಾ ರಕ್ಕಮ್ಮ..’ ಲಿರಿಕಲ್ ಸಾಂಗ್ ಬಗ್ಗೆ ಸುದೀಪ್ ಮಾಹಿತಿ ನೀಡಿದ್ದಾರೆ. ಈ ಹಾಡು ಕನ್ನಡದಲ್ಲಿ ಮೇ 23ರಂದು ರಿಲೀಸ್ ಆಗಲಿದೆ. ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಅನುಕ್ರಮವಾಗಿ ಮೇ 24, ಮೇ 25, ಮೇ 26 ಹಾಗೂ ಮೇ 27ರಂದು ಮಧ್ಯಾಹ್ನ 1.05 ಗಂಟೆಗೆ ಬಿಡುಗಡೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಡನ್ನು ಕೇಳೋಕೆ ಫ್ಯಾನ್ಸ್ ಕಾದು ಕೂತಿದ್ದಾರೆ.
Welcome Gadang Rakkamma – The Queen Of Good Times #RaRaRakkamma lyric video on
Kannada – 23 May – 3:05 PM Hindi – 24 May – 1:05 PM Telugu – 25 May – 1:05 PM Tamil – 26 May – 1:05 PM Malayalam – 27 May – 1:05 PM #VRonJuly28 @Asli_Jacqueline @VikrantRona pic.twitter.com/4yYAvNJjoy
— Kichcha Sudeepa (@KicchaSudeep) May 21, 2022
‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ರಿಲೀಸ್ ಆಗುತ್ತಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿರುವುದು ಇನ್ನಷ್ಟು ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ಶಾಲಿನಿ ಆರ್ಟ್ಸ್’ ಬ್ಯಾನರ್ ಮೂಲಕ ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.