AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?

Kichcha Sudeep | Garuda Gamana Vrishabha Vahana: ರಿಷಬ್​ ಶೆಟ್ಟಿ ಮತ್ತು ರಾಜ್​ ಬಿ. ಶೆಟ್ಟಿ ಅವರ ನಟನೆಯನ್ನು ಸುದೀಪ್​ ಕೊಂಡಾಡಿದ್ದಾರೆ. ಕಿಚ್ಚನ ಈ ಪ್ರೋತ್ಸಾಹದ ಮಾತುಗಳಿಂದ ಇಡೀ ‘ಗರುಡ ಗಮನ ವೃಷಭ ವಾಹನ’ ತಂಡಕ್ಕೆ ಹೊಸ ಹುರುಪು ಮೂಡಿದಂತಾಗಿದೆ.

‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?
ರಾಜ್​ ಬಿ. ಶೆಟ್ಟಿ, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​
TV9 Web
| Edited By: |

Updated on:May 06, 2022 | 2:08 PM

Share

ನಟ-ನಿರ್ದೇಶಕ ರಾಜ್​ ಬಿ. ಶೆಟ್ಟಿ (Raj B Shetty) ಅವರು ಒಂದು ಸಿನಿಮಾ ಮಾಡುತ್ತಾರೆ ಎಂದರೆ ಅದರಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡುತ್ತದೆ. ಅಷ್ಟರಮಟ್ಟಿಗೆ ಅವರು ತಮ್ಮ ಸಿನಿಮಾಗಳಿಂದ ಛಾಪು ಮೂಡಿಸಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾದಿಂದ ಶುರುವಾದ ಅವರ ಬಣ್ಣದ ಲೋಕದ ಪಯಣ ಈಗ ಬೇರೊಂದು ಹಂತಕ್ಕೆ ಏರಿದೆ. ಕಳೆದ ವರ್ಷ ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಸಿನಿಮಾ ಸೂಪರ್​ ಹಿಟ್​ ಆಯಿತು. ವಿಮರ್ಶೆಯ ದೃಷ್ಟಿಯಿಂದ ಮಾತ್ರವಲ್ಲದೇ ಬಾಕ್ಸ್​ ಆಫೀಸ್​ನಲ್ಲೂ ಈ ಚಿತ್ರ ಗೆದ್ದು ಬೀಗಿತು. ರಿಷಬ್​ ಶೆಟ್ಟಿ ಮತ್ತು ರಾಜ್​ ಬಿ. ಶೆಟ್ಟಿ ಅವರ ಕಾಂಬಿನೇಷನ್​ ಕಂಡು ಫ್ಯಾನ್ಸ್​ ಫಿದಾ ಆದರು. ಬಳಿಕ ಒಟಿಟಿಯಲ್ಲೂ ಈ ಚಿತ್ರ ಪ್ರದರ್ಶನವಾಗಿ ಜನಮೆಚ್ಚುಗೆ ಪಡೆದುಕೊಂಡಿತು. ಶಿವರಾಜ್​ಕುಮಾರ್​, ಅನುರಾಗ್​ ಕಶ್ಯಪ್​ ಮುಂತಾದವರು ಕೂಡ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಭೇಷ್​ ಎಂದಿದ್ದರು. ಈಗ ಕಿಚ್ಚ ಸುದೀಪ್​ (Kichcha Sudeep) ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಒಳ್ಳೆಯ ಸಿನಿಮಾಗಳಿಗೆ ಕಿಚ್ಚ ಸುದೀಪ್​ ಅವರು ಮೊದಲಿನಿಂದಲೂ ಬೆನ್ನು ತಟ್ಟುತ್ತ ಬಂದಿದ್ದಾರೆ. ಹೊಸ ಪ್ರಯತ್ನಗಳಿಗೆ ಅವರ ಪ್ರೋತ್ಸಾಹ ಇದ್ದೇ ಇರುತ್ತದೆ. ಈಗ ಅವರು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಗ್ಗೆ ಒಂದು ದೀರ್ಘ ಪತ್ರ ಬರೆದಿದ್ದಾರೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಕಂಡು ರಾಜ್​ ಬಿ. ಶೆಟ್ಟಿ ಸಖತ್​ ಖುಷಿ ಆಗಿದ್ದಾರೆ. ಅಷ್ಟಕ್ಕೂ ಕಿಚ್ಚನ ಈ ಪತ್ರದಲ್ಲಿ ಏನಿದೆ? ಇಲ್ಲಿದೆ ಪೂರ್ತಿ ವಿವರ..

ಇದನ್ನೂ ಓದಿ
Image
‘ಗರುಡ ಗಮನ..’ ಚಿತ್ರಕ್ಕೆ ರಾಣಾ ದಗ್ಗುಬಾಟಿ ಫಿದಾ; ಕನ್ನಡ ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಅವರು ಹೇಳಿದ್ದೇನು?
Image
GGVV: ರಾಜ್​ ಶೆಟ್ಟಿಗೆ ಶಿವಣ್ಣ ಸರ್ಪ್ರೈಸ್ ಫೋನ್ ಕಾಲ್; ಶಿವ- ಶಿವ ಮಾತುಕತೆಯಲ್ಲಿ ಹೊರಬಿತ್ತು ಸಂತಸದ ವಿಚಾರ!
Image
GGVV: ‘ಗರುಡ ಗಮನ..’ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಕೋರ್ಟ್​ಗೆ ಅರ್ಜಿ; ಮಾದೇವ ಹಾಡಿನ ಬಗ್ಗೆ ಆಕ್ಷೇಪ
Image
GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

‘ಮೇಕಿಂಗ್​ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಎಲ್ಲರನ್ನೂ ಮತ್ತು ಪ್ರೇಕ್ಷಕರನ್ನು ಎಕ್ಸೈಟ್​ ಆಗಿಸುವಂತಹ ಸ್ಕ್ರಿಪ್ಟ್​ಗಾಗಿ ಹುಡುಕಾಟ ನಡೆಸುವುದು ಪ್ರತಿ ಕ್ರಿಯೇಟರ್​ನ ಭಾಗ ಆಗಿರುತ್ತದೆ’ ಎಂದು ಕಿಚ್ಚ ಸುದೀಪ್​ ಬರಹ ಆರಂಭಿದ್ದಾರೆ. ‘ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಲ್ಲ. ಈ ರೀತಿಯ ಸಿನಿಮಾ ಮಾಡಿದ ಇಡೀ ತಂಡಕ್ಕೆ ನನ್ನ ಮೆಚ್ಚುಗೆ ಕೂಡ ಹೌದು. ನನಗೆ ಸಿನಿಮಾ ನೋಡಲು ಅವಕಾಶ ಸಿಗುವುದು ಕಡಿಮೆ. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ಬಳಿಕ ಪ್ರಾಮಾಣಿಕವಾಗಿ ನನ್ನ ಮನಸ್ಸಿನಿಂದ ಬಂದ ಪದ; ವಾವ್​. ಬರವಣಿಗೆ ಬ್ರಿಲಿಯಂಟ್​, ತಾಂತ್ರಿಕವಾಗಿ ಇದೊಂದು ಪಾಠ, ಮ್ಯೂಸಿಕ್​ ಅತ್ಯುತ್ತಮ, ಎಲ್ಲ ಕಲಾವಿದರ ನಟನೆ ಸೂಪರ್​’ ಎಂದು ಸುದೀಪ್​ ಹೊಗಳಿದ್ದಾರೆ.

ಈ ಸಿನಿಮಾದ ಸರಳತೆಯೇ ದೊಡ್ಡ ಪ್ಲಸ್​. ಇದರಲ್ಲಿ ಯಾವುದೇ ನಟ ಅಥವಾ ದೃಶ್ಯ ತುರುಕಿದಂತಿಲ್ಲ. ಇದು ಪರ್ಫೆಕ್ಟ್​ ಆಗಿದೆ. ಸಿನಿಮಾದ ತೀವ್ರತೆಯನ್ನು ಸಂಗೀತ ಹೆಚ್ಚಿಸುತ್ತದೆ’ ಎಂದು ಸುದೀಪ್​ ಶ್ಲಾಘಿಸಿದ್ದಾರೆ. ರಿಷಬ್​ ಶೆಟ್ಟಿ ಮತ್ತು ರಾಜ್​ ಬಿ. ಶೆಟ್ಟಿ ಅವರ ನಟನೆಯನ್ನು ಸುದೀಪ್​ ಕೊಂಡಾಡಿದ್ದಾರೆ. ‘ಕೊನೆಗೂ ಈ ಸಿನಿಮಾ ನೋಡಲು ಸಾಧ್ಯವಾಯ್ತು ಎಂಬುದಕ್ಕೆ ಖುಷಿ ಇದೆ. ಈ ತಂಡದ ಬಗ್ಗೆ ಬರೆಯುತ್ತಿರುವುದಕ್ಕೆ ಇನ್ನೂ ಹೆಚ್ಚಿನ ಸಂತಸ ಆಗುತ್ತಿದೆ’ ಎಂದು ಪತ್ರವನ್ನು ಮುಗಿಸಿದ್ದಾರೆ ಕಿಚ್ಚ ಸುದೀಪ್​.

ಈ ಪ್ರೋತ್ಸಾಹದ ಮಾತುಗಳಿಂದ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಇಡೀ ತಂಡಕ್ಕೆ ಹೊಸ ಹುರುಪು ಮೂಡಿದಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:08 pm, Fri, 6 May 22

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!