ಒಟಿಟಿಗೆ ಕಾಲಿಟ್ಟ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್ ನಟನೆಯ ‘ಭಾವಚಿತ್ರ’ ಸಿನಿಮಾ 

ಒಟಿಟಿಗೆ ಕಾಲಿಟ್ಟ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್ ನಟನೆಯ ‘ಭಾವಚಿತ್ರ’ ಸಿನಿಮಾ 
ಗಾನವಿ

ಗಿರೀಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ‘ಭಾವಚಿತ್ರ’ ಮೂಡಿ ಬಂದಿದೆ. ರಿಷಬ್ ಶೆಟ್ಟಿ ಅವರ ‘ಹೀರೋ’ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್‌ ಮಿಂಚಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ‘ಭಾವಚಿತ್ರ’ ಸಿನಿಮಾದಲ್ಲೂ ಅವರ ನಟನೆಯನ್ನು  ಶ್ಲಾಘಿಸಿದ್ದರು.

TV9kannada Web Team

| Edited By: Rajesh Duggumane

May 06, 2022 | 9:59 PM

ಟಿ.ಎನ್. ಸೀತಾರಾಮ್ (TN Seetharam) ಸಾರಥ್ಯದಲ್ಲಿ ಮೂಡಿಬಂದ ‘ಮಗಳು ಜಾನಕಿ’  ಧಾರಾವಾಹಿ (Magalu Janaki) ಸಾಕಷ್ಟು ಹೆಸರು ಮಾಡಿತ್ತು. ಈ ಧಾರಾವಾಹಿಯಿಂದ ನಟಿ ಗಾನವಿ ಲಕ್ಷ್ಮಣ್ ಖ್ಯಾತಿ ಹೆಚ್ಚಿತು. ನಂತರ ಅವರಿಗೆ ಸಿನಿಮಾಗಳಿಂದಲೂ ಆಫರ್ ಬರೋಕೆ ಆರಂಭವಾದವು. ಅವರು ‘ಭಾವಚಿತ್ರ’ ಹೆಸರಿನ (Bhavachitra Movie) ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಈಗ ‘ಭಾವಚಿತ್ರ’ ವೂಟ್​ನಲ್ಲಿ ರಿಲೀಸ್ ಆಗಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಗಿರೀಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ‘ಭಾವಚಿತ್ರ’ ಮೂಡಿ ಬಂದಿದೆ. ರಿಷಬ್ ಶೆಟ್ಟಿ ಅವರ ‘ಹೀರೋ’ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್‌ ಮಿಂಚಿದ್ದರು. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ‘ಭಾವಚಿತ್ರ’ ಸಿನಿಮಾದಲ್ಲೂ ಅವರ ನಟನೆಯನ್ನು  ಶ್ಲಾಘಿಸಿದ್ದರು. ಈಗ ವೂಟ್​ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಈ ಸಿನಿಮಾದ ಕಥಾವಸ್ತು ಫೋಟೊ ಮತ್ತು ಫೋಟೊಗ್ರಫಿ. ಈ ಚಿತ್ರದಲ್ಲಿ ನಟ ಛಾಯಾಗ್ರಹಣದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾನೆ. ಕೆಲ ಕಾರಣದಿಂದ ನಟಿಯೊಂದಿಗೆ ಜಗಳ ಮಾಡಿಕೊಂಡು ಸೋಲೋ ಟ್ರಿಪ್‌ ಹೋಗುತ್ತಾನೆ. ನಂತರ ಒಂದು ವಿಚಿತ್ರ ಕುಗ್ರಾಮಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ನಡೆಯುವ ಬೆಳವಣಿಗೆಯೇ ಇಡೀ ಸಿನಿಮಾದ ಹೈಲೈಟ್.

ನಟಿ ಗಾನವಿ ಲಕ್ಷ್ಮಣ್‌ ಕೂಡ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ಈ ಸಿನಿಮಾದಲ್ಲಿ ಚಿತ್ರ ಎನ್ನುವ ಹೆಸರಿನಲ್ಲಿ ನಟಿಸಿದ್ದೇನೆ. ಈ ರೀತಿಯ ಚಿತ್ರದಲ್ಲಿ ನಟಿಸುವ ಹಂಬಲ ಮೊದಲಿನಿಂದಲೂ ಇತ್ತು. ಅದನ್ನು ನಿರ್ದೇಶಕರು ಪೂರ್ತಿ ಮಾಡಿದ್ದಾರೆ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ವೂಟ್‌ ಸೆಲೆಕ್ಟ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗಲಿದೆ’ ಎಂದಿದ್ದಾರೆ ಅವರು.

ಸಿನಿಮಾ ಕುರಿತು ನಟ ಚಕ್ರವರ್ತಿ ರೆಡ್ಡಿ ಮಾತನಾಡಿದ್ದಾರೆ. ‘ನನಗೆ ಥ್ರಿಲ್ಲರ್‌ ಸಿನಿಮಾ ಬಗ್ಗೆ ಹೆಚ್ಚು ಪ್ರೀತಿ. ನನಗೇ ಇಂಥ ಪಾತ್ರ ಸಿಕ್ಕಾಗ ಅದನ್ನು ನಿರಾಕರಿಸುವ ಮಾತೇ ಇಲ್ಲ. ಇದು ಕೇವಲ ಥ್ರಿಲರ್‌ ಚಿತ್ರ ಮಾತ್ರವಲ್ಲ, ಮಿಸ್ಟರಿಯಿಂದ ಕೂಡಿದ ಸಿನಿಮಾ. ಈ ಚಿತ್ರ ಖಂಡಿತ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುತ್ತದೆ’ ಎಂದಿದ್ದಾರೆ ಅವರು.

‘ಥ್ರಿಲ್ಲರ್‌ ಶೈಲಿಯ ಕಥೆ ಬರೆಯುವುದು ಅತ್ಯಂತ ಕ್ಲಿಷ್ಟಕರ. ಜನರಿಗೆ ಇಷ್ಟವಾಗುವ ಹಾಗೂ ಅವರಲ್ಲಿ ಆಸಕ್ತಿಯನ್ನು ಕಟ್ಟಿಕೊಡುವ ರೀತಿಯಲ್ಲಿ ಬರೆಯಬೇಕು. ಈ ಸಿನಿಮಾ ಜನರಿಗೆ ಇಷ್ಟವಾಗಿದೆ. ಈಗ ವೂಟ್‌ನಲ್ಲಿ ಸಿನಿಮಾ ನೋಡಬಹುದು’ ಎಂದಿದ್ದಾರೆ ಗಿರೀಶ್‌ ಕುಮಾರ್‌.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada