3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ

Prashanth Neel: ಪ್ರಶಾಂತ್​ ನೀಲ್​ ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗಳ ಬಗ್ಗೆ ಭಾರಿ ಕುತೂಹಲ ನಿರ್ಮಾಣ ಆಗಿದೆ. ಈ ಚಿತ್ರಗಳ ಕಥೆಯನ್ನು ಫ್ಯಾನ್ಸ್​ ಊಹಿಸುತ್ತಿದ್ದಾರೆ.

3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ
ಯಶ್​, ಪ್ರಭಾಸ್​, ಜ್ಯೂ. ಎನ್​ಟಿಆರ್​
Follow us
TV9 Web
| Updated By: ಮದನ್​ ಕುಮಾರ್​

Updated on: May 22, 2022 | 8:11 AM

ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್​ 1’ ಮತ್ತು ‘ಕೆಜಿಎಫ್​ 2’ ಸಿನಿಮಾದಿಂದ ಅವರ ಖ್ಯಾತಿ ವಿಶ್ವಮಟ್ಟದಲ್ಲಿ ಹೆಚ್ಚಿದೆ. ಭಾರತದ ಘಟಾನುಘಟಿ ನಿರ್ದೇಶಕರ ಜೊತೆ ಅವರನ್ನು ಹೋಲಿಸಲಾಗುತ್ತಿದೆ. ಪ್ರಶಾಂತ್​ ನೀಲ್​ ಮಾಡುವ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಇದೆ. ಸದ್ಯ ಅವರು ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹಾಗಂತ ಸುಮ್ಮನೆ ಕುಳಿತಿಲ್ಲ. ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ಪ್ರಶಾಂತ್​ ನೀಲ್​ ಬ್ಯುಸಿ ಆಗಿದ್ದಾರೆ. ಅಷ್ಟೇ ಅಲ್ಲದೇ ಜ್ಯೂ. ಎನ್​ಟಿಆರ್​ ಜೊತೆ ಕೂಡ ಕೈ ಜೋಡಿಸಿ, ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ಅದಕ್ಕೆ ತಾತ್ಕಾಲಿಕವಾಗಿ ‘ಎನ್​ಟಿಆರ್​31’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಶಾಂತ್​ ನೀಲ್​ ಹಂಚಿಕೊಂಡಿರುವ ಪೋಸ್ಟರ್​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಹೌದು, ‘ಕೆಜಿಎಫ್​ 2’ ಹಾಗೂ ‘ಸಲಾರ್​’ ಜೊತೆಗೆ ‘ಎನ್​ಟಿಆರ್​31’ (NTR 31) ಚಿತ್ರದ ಪೋಸ್ಟರ್​ ಅನ್ನು ಜೋಡಿಸಿ, ತಮ್ಮ ಫೇಸ್​ ಬುಕ್​ ಹಾಗೂ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಶಾಂತ್​ ನೀಲ್​ ಓರ್ವ ಪ್ರತಿಭಾವಂತ ನಿರ್ದೇಶಕ. ಅವರ ಆಲೋಚನೆಗಳು ಸಖತ್​ ಡಿಫರೆಂಟ್​ ಆಗಿರುತ್ತವೆ. ಈಗ ಅವರು ಈ ಮೂರು ಸಿನಿಮಾಗಳ ಪೋಸ್ಟರ್​ಗಳನ್ನು ಒಟ್ಟಿಗೆ ಜೋಡಿಸಿರುವುದರಿಂದ ಸಿನಿಪ್ರಿಯರ ಮನದಲ್ಲಿ ಹೊಸ ಪ್ರಶ್ನೆ ಮೂಡಿದೆ. ‘ಕೆಜಿಎಫ್​ 2’, ‘ಸಲಾರ್​’ ಹಾಗೂ ‘ಎನ್​ಟಿಆರ್​ 31’ ಚಿತ್ರಗಳ ಕಥೆ ಒಂದಕ್ಕೊಂದು ಕನೆಕ್ಟ್​ ಆಗಿದೆ ಎಂದು ಜನರು ಊಹಿಸುತ್ತಿದ್ದಾರೆ. ಅದನ್ನು ಕಮೆಂಟ್​ಗಳ ಮೂಲಕ ತಿಳಿಸಲಾಗುತ್ತಿದೆ. ಆದರೆ ಈ ಕಮೆಂಟ್​ಗಳಿಗೆ ಪ್ರಶಾಂತ್​ ನೀಲ್​ ಅವರು ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಜ್ಯೂ.ಎನ್​ಟಿಆರ್​ ಜತೆ ಕಾಣಿಸಿಕೊಂಡ ಪ್ರಶಾಂತ್​ ನೀಲ್​; ಇದಕ್ಕಿದೆ ಮಹತ್ವದ ಕಾರಣ

ಇದನ್ನೂ ಓದಿ
Image
‘ಕೆಜಿಎಫ್​ 2’ ಚಿತ್ರದ ‘ತೂಫಾನ್​..’ ವಿಡಿಯೋ ಸಾಂಗ್​ ಮೂಲಕ ಮತ್ತೆ ಧೂಳೆಬ್ಬಿಸಿದ ರಾಕಿ ಭಾಯ್​ ಯಶ್​
Image
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​
Image
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​
Image
‘ಕೆಜಿಎಫ್​’ ಗಾಯಕಿ ನೇಹಾ ಕಕ್ಕರ್​ ಗಂಡನ ಡೈಮಂಡ್​ ರಿಂಗ್​, ಐಫೋನ್​, ಹಣ ದರೋಡೆ ಮಾಡಿದ ಕಳ್ಳರು

‘ಸಲಾರ್​’, ‘ಕೆಜಿಎಫ್​ 2’, ‘ಎನ್​ಟಿಆರ್​ 31’ ಮಾತ್ರವಲ್ಲದೇ ‘ಬಘೀರ’ ಚಿತ್ರದ ಕಥೆ ಕೂಡ ಒಂದಕ್ಕೊಂದು ಕನೆಕ್ಟ್​ ಆಗಿರಬಹುದೇ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಅನೇಕ ಊಹಾಪೋಹಗಳು ಹರಿದಾಡಿವೆ. ‘ಸಲಾರ್’​ ಮತ್ತು ‘ಕೆಜಿಎಫ್​ 3’ ಒಂದೇ ಸಿನಿಮಾ. ಈ ಚಿತ್ರದಲ್ಲಿ ರಾಕಿ ಭಾಯ್​ ಮತ್ತು ಸಲಾರ್ ಪಾತ್ರಗಳು ಪರಸ್ಪರ ಭೇಟಿ ಆಗುತ್ತವೆ. ಎಂದೆಲ್ಲ ಜನರು ಊಹಿಸುತ್ತಿದ್ದಾರೆ. ಅಂತಿಮವಾಗಿ ಪ್ರಶಾಂತ್​ ನೀಲ್​ ಅವರು ಅಭಿಮಾನಿಗಳ ಮುಂದೆ ಯಾವ ರೀತಿ ಈ ಸಿನಿಮಾಗಳನ್ನು ತೆರೆದಿಡಲಿದ್ದಾರೆ ಎಂಬುದು ಚಿತ್ರ ಬಿಡುಗಡೆ ಆದಾಗಲೇ ತಿಳಿಯಬೇಕಿದೆ.

ಇದನ್ನೂ ಓದಿ: ‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ

ಪ್ರಶಾಂತ್​ ನೀಲ್​ ಅವರ ದೂರದೃಷ್ಟಿ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಅವರ ಮೇಕಿಂಗ್​ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡದ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದ ಅವರ ಚಾಕಚಕ್ಯತೆಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಮುಂಬರುವ ಸಿನಿಮಾಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಶಾಂತ್​ ನೀಲ್​ ಅವರ ಕಾಲ್​ಶೀಟ್​ ಕೂಡ ದುಬಾರಿ ಆಗಿದೆ. ಅವರ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಸ್ಟಾರ್​ ನಟರು ಕಾಯುತ್ತಿದ್ದಾರೆ. ಆದ್ದರಿಂದ ಪ್ರಶಾಂತ್​ ನೀಲ್​ ಇಡಲಿರುವ ಪ್ರತಿ ಹೆಜ್ಜೆಯನ್ನೂ ಭಾರತೀಯ ಚಿತ್ರರಂಗ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ