‘ಕೆಜಿಎಫ್​’ ಗಾಯಕಿ ನೇಹಾ ಕಕ್ಕರ್​ ಗಂಡನ ಡೈಮಂಡ್​ ರಿಂಗ್​, ಐಫೋನ್​, ಹಣ ದರೋಡೆ ಮಾಡಿದ ಕಳ್ಳರು

‘ಕೆಜಿಎಫ್​’ ಗಾಯಕಿ ನೇಹಾ ಕಕ್ಕರ್​ ಗಂಡನ ಡೈಮಂಡ್​ ರಿಂಗ್​, ಐಫೋನ್​, ಹಣ ದರೋಡೆ ಮಾಡಿದ ಕಳ್ಳರು
ರೋಹತ್​ಪ್ರೀತ್​ ಸಿಂಗ್​, ನೇಹಾ ಕಕ್ಕರ್​

Neha Kakkar: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್​ನಲ್ಲಿ ನೇಹಾ ಕಕ್ಕರ್​ ಪತಿ ರೋಹನ್​ಪ್ರೀತ್​ ಸಿಂಗ್​ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ.

TV9kannada Web Team

| Edited By: Madan Kumar

May 15, 2022 | 1:19 PM

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನಲ್ಲಿ ‘ಗಲಿ ಗಲಿ..’ ಹಾಡಿಗೆ ನೇಹಾ ಕಕ್ಕರ್​ (Neha Kakkar) ಧ್ವನಿ ಆಗಿದ್ದರು. ಆ ಹಾಡು ಸಖತ್​ ಫೇಮಸ್​ ಆಯಿತು. ಗಾಯಕಿ ನೇಹಾ ಕಕ್ಕರ್​ ಅವರ ಪತಿ ರೋಹನ್​ಪ್ರೀತ್​ ಸಿಂಗ್​ ಕೂಡ ಫೇಮಸ್​ ಗಾಯಕ. ಅವರು ಪಂಜಾಬಿ ಇಂಡಸ್ಟ್ರಿಯಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಈಗ ಅವರ ಕುರಿತು ಒಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ರೋಹನ್​ಪ್ರೀತ್​ ಸಿಂಗ್ (Rohanpreet Singh)​ ಉಳಿದುಕೊಂಡಿದ್ದ ಖಾಸಗಿ ಹೋಟೆಲ್​ನಲ್ಲಿ ಕಳ್ಳತನ ಆಗಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಕಳ್ಳತನ (Robbery) ಆಗಿವೆ. ಡೈಮಂಡ್​ ರಿಂಗ್​, ಐ-ಫೋನ್​, ಆ್ಯಪಲ್​ ವಾಚ್​ ಮತ್ತು ಹಣವನ್ನು ಕದ್ದು ಕಳ್ಳರು ಪರಾರಿ ಆಗಿದ್ದಾರೆ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಐಷಾರಾಮಿ ಹೋಟೆಲ್​ನಲ್ಲಿ ರೋಹನ್​ಪ್ರೀತ್​ ಸಿಂಗ್​ ಅವರು ಉಳಿದುಕೊಂಡಿದ್ದರು. ಶನಿವಾರ (ಮೇ 14) ರಾತ್ರಿ ಈ ಕಳ್ಳತನ ನಡೆದಿದೆ. ಈ ಘಟನೆ ಕುರಿತಂತೆ ನೇಹಾ ಕಕ್ಕರ್​ ಅವರಾಗಲಿ, ರೋಹನ್​ಪ್ರೀತ್​ ಸಿಂಗ್​ ಅವರಾಗಲಿ ಇನ್ನೂ ಹೇಳಿಕೆ ನೀಡಿಲ್ಲ. ಈ ಘಟನೆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಸಂಗೀತ ಲೋಕದಲ್ಲಿ ನೇಹಾ ಕಕ್ಕರ್​-ರೋಹನ್​ಪ್ರೀತ್​ ಸಿಂಗ್​ ಬ್ಯುಸಿ:

2020ರ ಅಕ್ಟೋಬರ್​ ತಿಂಗಳಲ್ಲಿ ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಕೂಡ ಸಂಗೀತ ಕ್ಷೇತ್ರಕ್ಕೆ ಸೇರಿದವರು. ಇಬ್ಬರು ಜೊತೆಯಾಗಿ ಕೆಲವು ಮ್ಯೂಸಿಕ್​ ವಿಡಿಯೋಗಳನ್ನು ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಈ ದಂಪತಿ ಆಗಾಗ ತಮ್ಮ ವೃತ್ತಿಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ.

ಮದುವೆಯಾಗಿ ಎರಡೇ ತಿಂಗಳಿಗೆ ಪ್ರೆಗ್ನೆಂಟ್​ ಎಂದಿದ್ದ ನೇಹಾ!

ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ಅವರು ಮದುವೆ ಆಗಿ ಎರಡೇ ತಿಂಗಳಿಗೆ ಒಂದು ನ್ಯೂಸ್​ ನೀಡಿದ್ದರು. ನೇಹಾ ಕಕ್ಕರ್ ಅವರು ತಾವು ಗರ್ಭಿಣಿ ಎಂದು ಬಿಂಬಿಸುವ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿ, ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಅದೊಂದು ಪ್ರ್ಯಾಂಕ್​ ಎಂಬುದು ಗೊತ್ತಾಯಿತು. ತಮ್ಮ ಹೊಸ ಮ್ಯೂಸಿಕ್​ ವಿಡಿಯೋದ ಪ್ರಮೋಷನ್​ಗಾಗಿ ಅವರು ಆ ರೀತಿ ಮಾಡಿದ್ದರು. ಮದುವೆ ಆಗಿ 7 ತಿಂಗಳು ಕಳೆಯುವುದರೊಳಗೆ ಮತ್ತೆ ಅಂಥದ್ದೇ ಒಂದು ಗಿಮಿಕ್​ ಮಾಡಿದ್ದರು. ಇಬ್ಬರೂ ಪರಸ್ಪರ ಬಡಿದಾಡಿಕೊಳ್ಳುತ್ತಿರುವ ವಿಡಿಯೋವನ್ನು ಅವರು ಪೋಸ್ಟ್​ ಮಾಡಿದ್ದರು. ಇಬ್ಬರೂ ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಅದರಲ್ಲಿ ಇತ್ತು. ಒಂದು ಕ್ಷಣ ನೋಡಿದರೆ ಇಬ್ಬರ ಸಂಸಾರದಲ್ಲಿ ಏನೋ ಕಿರಿಕ್​ ಆಗಿದೆ ಎಂಬಂತಿರುವ ಈ ವಿಡಿಯೋದ ಅಸಲಿಯತ್ತು ಬೇರೆಯೇ ಆಗಿತ್ತು. ಇಬ್ಬರೂ ಜೊತೆಯಾಗಿ ಒಂದು ಹೊಸ ಮ್ಯೂಸಿಕ್​ ವಿಡಿಯೋ ಮಾಡಿದ್ದು, ಅದರ ಪ್ರಚಾರವನ್ನು ಈ ರೀತಿ ಡಿಫರೆಂಟ್​ ಆಗಿ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada