ಫಿಲ್ಮಿ ಶೈಲಿಯಲ್ಲಿ ಮಂಡ್ಯದಲ್ಲಿ ದರೋಡೆ; ಅಡ್ಡಗಟ್ಟಿ 20 ಲಕ್ಷ ನಗದು, ಕಾರಿನ ಜೊತೆ ಎಸ್ಕೇಪ್

ಫಿಲ್ಮಿ ಶೈಲಿಯಲ್ಲಿ ಮಂಡ್ಯದಲ್ಲಿ ದರೋಡೆ; ಅಡ್ಡಗಟ್ಟಿ 20 ಲಕ್ಷ ನಗದು, ಕಾರಿನ ಜೊತೆ ಎಸ್ಕೇಪ್
ಸಾಂದರ್ಭಿಕ ಚಿತ್ರ

ಮಂಡ್ಯದ ಹೊಸಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನ ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಸ್ವಿಫ್ಟ್ ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ.

TV9kannada Web Team

| Edited By: sandhya thejappa

May 14, 2022 | 10:57 AM

ಮಂಡ್ಯ: ಹೊಸಬೂದನೂರು ಬಳಿ ಕಾರನ್ನ (Car) ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ (Robbery) ಮಾಡಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 20 ಲಕ್ಷ ನಗದು ಹಾಗೂ ಕಾರಿನ ಜೊತೆ ಎಸ್ಕೇಪ್ ಆಗಿದ್ದಾರೆ. ಹ್ಯೂಂಡಾಯ್ ಕ್ರೇಟಾ ಕಾರಿನಲ್ಲಿ ಬಂದು ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ. ಬೆಂಗಳೂರಿನಿಂದ ನಿಲೇಶ್ ಹಾಗೂ ಅವರ ಸ್ನೇಹಿತ ರುಷಿಕೇಶ್ 20 ಲಕ್ಷ ಹಣದ ಜೊತೆ ಕೇರಳಕ್ಕೆ ತೆರಳುತ್ತಿದ್ದರು. ಬೆಂಗಳೂರಿನ ರಾಜಾ ಮಾರ್ಕೆಟ್​ನ ತಿರುಮಲ ಜ್ಯುವೆಲರಿ ಶಾಪ್​ನಲ್ಲಿ ಬಂಗಾರವನ್ನ ಮಾರಾಟ ಮಾಡಿ 20 ಲಕ್ಷ ನಗದು ಜೊತೆ ತೆರಳುವ ಮಾರ್ಗ ಮಧ್ಯೆ ಈ ಕೃತ್ಯ ನಡೆದಿದೆ.

ಮಂಡ್ಯದ ಹೊಸಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನ ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಸ್ವಿಫ್ಟ್ ಕಾರಿನ ಸಮೇತ ಎಸ್ಕೇಪ್ ಆಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ 6 ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ.

ರಾಯಚೂರು ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಸರಣಿ ಬೈಕ್ ಕಳ್ಳತನ: ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸರಣಿ ಬೈಕ್ ಕಳ್ಳತನ ಹೆಚ್ಚಾಗಿದೆ. ಎರಡು ಬೈಕ್ ಕಳ್ಳರ ಒಂದೇ ವಾರದಲ್ಲಿ ಅರೆಸ್ಟ್ ಆಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಒಟ್ಟು 10 ಲಕ್ಷ ಮೌಲ್ಯದ 22 ಬೈಕ್​ಗಳನ್ನ ಜಪ್ತಿ ಮಾಡಿದ್ದಾರೆ. ಶಂಕರ್, ಗಣೇಶ್, ಪೀರಸಾಬ್ ಹಾಗೂ ಅಭಿಷೇಕ್ ಸೇರಿ ಒಟ್ಟು ಐವರು ಅರೆಸ್ಟ್ ಆಗಿದ್ದಾರೆ. ಆರೋಪಿ ಪೀರ್ ಸಾಬ್ ಅಣ್ಣ ಅಮೀನುದ್ದಿನ್ ಸಾಬ್ ಎಸ್ಕೇಪ್ ಆಗಿದ್ದಾನೆ. ಆರೋಪಿಗಳು ಬಸ್ ನಿಲ್ದಾಣ, ಮಾರ್ಕೆಟ್​ಗಳಲ್ಲಿ ನಿಲ್ಲಿಸಿರುವ ಬೈಕ್​ಗಳನ್ನ ಟಾರ್ಗೆಟ್ ಮಾಡಿ ಕದಿಯುತ್ತಿದ್ದರು. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇಬ್ಬರು ಡ್ರಗ್ ಪೆಡ್ಲರ್​ಗಳ ಬಂಧನ: ಬೆಂಗಳೂರು: ನಗರದಲ್ಲಿ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್​ಗಳನ್ನ ಬಂಧಸಿದ್ದಾರೆ. ಆರೋಪಿಗಳು ದೊಡ್ಡಬ್ಯಾಲಕೆರೆ ಗ್ರಾಮದ ಕಸಿಪು ಬಾರ್ ಆ್ಯಂಡ್ ರೆಸ್ಟೋರೆಂಟ್​ನಲ್ಲಿ ಸೆರೆಯಾಗಿದ್ದಾರೆ. ಡ್ರಗ್ ಪೆಡ್ಲರ್ ಅಖಿಬ್ ಪಾಷಾ(26), ಪ್ರದೀಪ್(34) ಬಂಧಿತ ಆರೋಪಿಗಳು. ಆರೋಪಿಗಳಿಂದ ಪೊಲೀಸರು 15 ಲಕ್ಷ ಮೌಲ್ಯದ 160 ಗ್ರಾಂ ಎಂಡಿಎಂಎ ಮಾತ್ರೆ, 3 ಮೊಬೈಲ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಜಪ್ತಿ ಮಾಡಿದ್ದಾರೆ.

ಆರೋಪಿಗಳು ಡ್ರಗ್​ನ ನೈಜಿರಿಯಾ ಪ್ರಜೆ ಚಿಕೆ ಅಥೋನಿ ಸಾಮ್ಯುವಲ್​ನಿಂದ ಖರೀದಿಸಿ, ವಿದ್ಯಾರ್ಥಿಗಳು, ಹೊರ ರಾಜ್ಯದವರಿಗೆ ಮಾರಾಟ ಮಾಡುತ್ತಿದ್ದರು. ಅಧಿಕ ಹಣ ಸಂಪಾದನೆಗೆ ಡ್ರಗ್ಸ್​ ಮಾರಾಟಕ್ಕಿಳಿದಿದ್ದರು. ಆರೋಪಿ ಚಿಕೆ ಅಥೋನಿ ಸಾಮ್ಯುವಲ್ ಮಿಬಾತನಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ

ಮುಂದಿನ ಚುನಾವಣೆಯಲ್ಲಿ ಹೆಚ್​ಡಿ ಕುಮಾರಸ್ವಾಮಿಗೆ ಮತ ನೀಡಿ ಎಂದು ಮದುವೆ ಮನೆಯಲ್ಲಿ ಮನವಿ ಮಾಡಿದ ನವ ದಂಪತಿ; ವೈರಲ್ ಆದ ವಿಡಿಯೋ ಇದೆ

ಇದನ್ನೂ ಓದಿ

ಎಷ್ಟೇ ಸಿನಿಮಾ ಸೋತ್ರೂ ಪೂಜಾ ಹೆಗ್ಡೆಗೆ ಸಿಕ್ತಿದೆ ಹೊಸ ಆಫರ್ಸ್​; ಈಗ ವಿಜಯ್​ ಜತೆ ‘ಜನ ಗಣ ಮನ’

Follow us on

Related Stories

Most Read Stories

Click on your DTH Provider to Add TV9 Kannada