AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neha Kakkar: ಮದುವೆ ಆಗಿ 7 ತಿಂಗಳು ಕಳೆಯುವ ಮುನ್ನವೇ ಗಂಡನ ಜೊತೆ ಕೆಜಿಎಫ್​ ಗಾಯಕಿ ಫೈಟ್​; ವಿಡಿಯೋ ವೈರಲ್​

Neha Kakkar Fight Video: ಈ ವಿಡಿಯೋವನ್ನು ಸ್ವತಃ ನೇಹಾ ಕಕ್ಕರ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇಬ್ಬರೂ ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಅದರಲ್ಲಿ ಇದೆ.

Neha Kakkar: ಮದುವೆ ಆಗಿ 7 ತಿಂಗಳು ಕಳೆಯುವ ಮುನ್ನವೇ ಗಂಡನ ಜೊತೆ ಕೆಜಿಎಫ್​ ಗಾಯಕಿ ಫೈಟ್​; ವಿಡಿಯೋ ವೈರಲ್​
ನೇಹಾ ಕಕ್ಕರ್​ - ರೋಹನ್​ಪ್ರೀ​ತ್​ ಸಿಂಗ್​ ವೈರಲ್​ ವಿಡಿಯೋ
ಮದನ್​ ಕುಮಾರ್​
| Edited By: |

Updated on:May 11, 2021 | 6:25 PM

Share

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಗಾಯಕಿಯರಲ್ಲಿ ನೇಹಾ ಕಕ್ಕರ್​ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿಬರುತ್ತದೆ. ಬಾಲಿವುಡ್​ನ ಅನೇಕ ಹಿಟ್​ ಗೀತೆಗಳಿಗೆ ಅವರು ಧ್ವನಿ ಆಗಿದ್ದಾರೆ. ಸಿಂಗಿಂಗ್​ ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಧೂಳೆಬ್ಬಿಸುತ್ತಿರುವ ಹಿಂದಿಯ ಅನೇಕ ರಿಮಿಕ್ಸ್​ ಹಾಡುಗಳು ಮೂಡಿಬಂದಿರುವುದು ಇದೇ ನೇಹಾ ಕಂಠದಲ್ಲಿ. ಯಶ್​ ನಟನೆಯ ಕೆಜಿಎಫ್​: ಚಾಪ್ಟರ್​ 1 ಚಿತ್ರದ ಹಿಂದಿ ಅವತರಣಿಕೆಯ ‘ಗಲಿ ಗಲಿ ಮೆ..’ ಹಾಡಿಗೆ ನೇಹಾ ಧ್ವನಿ ನೀಡಿದ್ದರು. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನೇಹಾ ಈಗ ಗಂಡನ ಜೊತೆಗಿನ ಫೈಟ್​ ಕಾರಣಕ್ಕೆ ಸುದ್ದಿ ಆಗಿದ್ದಾರೆ.

ಕಳೆದ ವರ್ಷ ಲಾಕ್​ಡೌನ್​ ಸಡಿಲಿಕೆ ಆದ ಬಳಿಕ, ಅಂದರೆ ಅಕ್ಟೋಬರ್​ 24ರಂದು ಪಂಜಾಬಿ ಗಾಯಕ ರೋಹನ್​ಪ್ರೀತ್​ ಸಿಂಗ್​ ಜೊತೆ ನೇಹಾ ಬಾಳಬಂಧನಕ್ಕೆ ಒಳಗಾದರು. ಮದುವೆ ಆಗಿ ಇನ್ನೂ 7 ತಿಂಗಳು ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಗಂಡನ ಜೊತೆ ಅವರು ಬಡಿದಾಡಿಕೊಂಡಿರುವ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತಿದೆ. ಹಾಗಂತ ನೇಹಾ ನಿಜವಾಗಿಯೂ ಪತಿ ರೋಹನ್​ಪ್ರೀತ್​ ಸಿಂಗ್​ ಜೊತೆ ಮಾರಾಮಾರಿ ಮಾಡಿಕೊಂಡಿದ್ದಾರಾ? ಇಲ್ಲಿದೆ ಟ್ವಿಸ್ಟ್​.

ಈ ವಿಡಿಯೋವನ್ನು ಸ್ವತಃ ನೇಹಾ ಕಕ್ಕರ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇಬ್ಬರೂ ಕೈ ಕೈ ಮಿಲಾಯಿಸುತ್ತಿರುವ ದೃಶ್ಯ ಅದರಲ್ಲಿ ಇದೆ. ಒಂದು ಕ್ಷಣ ನೋಡಿದರೆ ಇಬ್ಬರ ಸಂಸಾರದಲ್ಲಿ ಏನೋ ಕಿರಿಕ್​ ಆಗಿದೆ ಎಂಬಂತಿರುವ ಈ ವಿಡಿಯೋದ ಅಸಲಿಯತ್ತು ಬೇರೆಯೇ ಇದೆ. ಇಬ್ಬರೂ ಜೊತೆಯಾಗಿ ಒಂದು ಹೊಸ ಮ್ಯೂಸಿಕ್​ ವಿಡಿಯೋ ಮಾಡಿದ್ದಾರೆ. ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದೆ. ಅದರ ಪ್ರಕಾರಕ್ಕಾಗಿ ಅವರು ಈ ರೀತಿ ಗಿಮಿಕ್​ ಮಾಡಿದ್ದಾರೆ.

ನೇಹಾ ಮತ್ತು ರೋಹನ್​ಪ್ರೀತ್​ ಸಿಂಗ್​ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಇಂಥ ಗಿಮಿಕ್​ ಮಾಡಿದ್ದರು. ಮದುವೆ ಆಗಿ ಎರಡು ತಿಂಗಳು ಕಳೆಯುವುದರೊಳಗೆ ತಾವು ಪ್ರೆಗ್ನೆಂಟ್​ ಎಂದು ಬಿಂಬಿಸುವ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿದ್ದರು ನೇಹಾ. ನಂತರ ಅದು ಕೂಡ ಅವರ ಹೊಸ ಹಾಡಿನ ಪ್ರಮೋಷನ್​ ಗಿಮಿಕ್​ ಎಂಬುದು ಗೊತ್ತಾಗಿತ್ತು.

ಇದನ್ನೂ ಓದಿ:

ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್​ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..

ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!

Published On - 4:05 pm, Tue, 11 May 21

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು