ಕೊರೊನಾದಿಂದ ಪ್ರಾಣ ಬಿಡುವುದಕ್ಕೂ ಮುನ್ನ ವಿಡಿಯೋ ಮೂಲಕ ದಾರುಣ ಸ್ಥಿತಿ ವಿವರಿಸಿದ್ದ ನಟ ರಾಹುಲ್
Rahul Vohra: ರಾಹುಲ್ ನಿಧನರಾದ ಮರುದಿನವೇ ಅವರ ಪತ್ನಿ ಜ್ಯೋತಿ ತಿವಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆಕ್ಸಿಜನ್ ಇಲ್ಲದೇ ಆಸ್ಪತ್ರೆಯ ಬೆಡ್ನಲ್ಲಿ ಮಲಗಿಕೊಂಡು ಕರುಣಾಜನಕ ಸ್ಥಿತಿಯನ್ನು ರಾಹುಲ್ ವಿವರಿಸುತ್ತಿರುವ ದೃಶ್ಯ ಆ ವಿಡಿಯೋದಲ್ಲಿದೆ.
ಕೊರೊನಾ ವೈರಸ್ ಸೋಂಕು ತಗುಲಿದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಅನೇಕರು ಸಾವಿಗೆ ಈಡಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾನುವಾರವಷ್ಟೇ (ಮೇ 9) ಜನಪ್ರಿಯ ನಟ ರಾಹುಲ್ ವೋಹ್ರಾ ನಿಧನರಾದ ಕಹಿ ಸುದ್ದಿ ಕೇಳಿಬಂದಿತ್ತು. ದೆಹಲಿಯ ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದರು. ಅವರು ಸಾಯುವುದಕ್ಕೂ ಮುನ್ನ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ವಿಡಿಯೋ ಮೂಲಕ ವಿವರಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ರಾಹುಲ್ ನಿಧನರಾದ ಮರುದಿನವೇ ಅವರ ಪತ್ನಿ ಜ್ಯೋತಿ ತಿವಾರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆಕ್ಸಿಜನ್ ಇಲ್ಲದೇ ಆಸ್ಪತ್ರೆಯ ಬೆಡ್ನಲ್ಲಿ ಮಲಗಿಕೊಂಡು ಕರುಣಾಜನಕ ಸ್ಥಿತಿಯನ್ನು ರಾಹುಲ್ ವಿವರಿಸುತ್ತಿರುವ ದೃಶ್ಯ ಆ ವಿಡಿಯೋದಲ್ಲಿದೆ. ‘ರಾಹುಲ್ ನಿಧನರಾದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ ಸತ್ತರು ಎಂಬುದು ಯಾರಿಗೂ ಗೊತ್ತಿಲ್ಲ. ಇದು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಇಲ್ಲಿ ರೋಗಿಗಳನ್ನು ಈ ರೀತಿ ನೋಡಿಕೊಳ್ಳಲಾಗುತ್ತದೆ’ ಎಂಬ ಕ್ಯಾಪ್ಷನ್ ಜೊತೆ ಜ್ಯೋತಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ನಿಧನರಾಗುವುದಕ್ಕೂ ಮುನ್ನ ರಾಹುಲ್ ಅವರು ಸಹಾಯಕ್ಕಾಗಿ ಅಂಗಲಾಚಿದ್ದರು. ‘ಇಂದು ಆಕ್ಸಿಜನ್ ಮಾಸ್ಕ್ ತುಂಬ ಅವಶ್ಯಕವಾಗಿದೆ. ನನಗೆ ಇದನ್ನು ಕೊಟ್ಟಿದ್ದಾರೆ. ಆದರೆ ಇದರಿಂದ ಆಕ್ಸಿಜನ್ ಕಿಂಚಿತ್ತೂ ಬರುತ್ತಿಲ್ಲ. ಸಹಾಯಕ್ಕಾಗಿ ಎಷ್ಟೇ ಬಾರಿ ಕರೆದರೂ ಯಾರೂ ಬರುತ್ತಿಲ್ಲ. ಒಂದು ನಿಮಿಷ ಎಂದು ಹೇಳಿ ಹೋದವರು 2 ಗಂಟೆ ಆದಮೇಲೆ ಬರುತ್ತಾರೆ’ ಎಂದು ಈ ವಿಡಿಯೋ ಮೂಲಕ ರಾಹುಲ್ ನೋವು ತೋಡಿಕೊಂಡಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ಆಸ್ಪತ್ರೆಯಲ್ಲಿ ಇದ್ದಾಗಲೇ ಅವರು ಸಹಾಯಕ್ಕಾಗಿ ಫೇಸ್ಬುಕ್ನಲ್ಲಿ ಅಂಗಲಾಜಿದ್ದರು. ‘ನನಗೂ ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನು ಕೂಡ ಬದುಕುತ್ತಿದ್ದೆ. ಮತ್ತೆ ಜನ್ಮತಾಳಿ ಬಂದು ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಶನಿವಾರ ಫೇಸ್ಬುಕ್ನಲ್ಲಿ ರಾಹುಲ್ ಬರೆದುಕೊಂಡಿದ್ದರು. ತಾವಿರುವ ಆಸ್ಪತ್ರೆಯ ಹೆಸರು, ತಮ್ಮ ವಯಸ್ಸು, ಬೆಡ್ ಸಂಖ್ಯೆ ಮುಂತಾದ ವಿವರಗಳನ್ನು ಈ ಪೋಸ್ಟ್ನಲ್ಲಿ ಬರೆದು, ದಯವಿಟ್ಟು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ವೋಹ್ರಾ ಟ್ಯಾಗ್ ಮಾಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.
ಇದನ್ನೂ ಓದಿ:
ಆಕ್ಸಿಜನ್ ಬೇಕು ಎಂದು ಮೋದಿಗೆ ಕೈ ಮುಗಿದು ಬೇಡಿಕೊಂಡಿದ್ದ ನಟ ರಾಹುಲ್ ಕೊರೊನಾದಿಂದ ನಿಧನ
ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ