ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!

ತನ್ನ ಹೊಸ ಮ್ಯೂಸಿಕ್ ವಿಡಿಯೊದ ಪೋಸ್ಟರ್ ಶೇರ್ ಮಾಡುವ ಮೂಲಕ ತಾನು ಗರ್ಭಿಣಿ ಅಲ್ಲ ಎಂಬ ವಿಷಯವನ್ನು ಗಾಯಕಿ ನೇಹಾ ಕಕ್ಕರ್ ಇನ್​ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!
ನೇಹಾ ಕಕ್ಕರ್
Rashmi Kallakatta

|

Dec 20, 2020 | 1:01 PM

ನವದೆಹಲಿ: ಗಾಯಕಿ ನೇಹಾ ಕಕ್ಕರ್ ಅಮ್ಮನಾಗುತ್ತಿದ್ದಾರೆ ಎಂಬುದು ಎರಡು ದಿನಗಳ ಹಿಂದೆ ಸುದ್ದಿಯಾಗಿತ್ತು. ಶುಕ್ರವಾರ ಪತಿ ರೋಹನ್​ಪ್ರೀತ್ ಜತೆಯಿರುವ ಫೋಟೊವೊಂದನ್ನು ಶೇರ್ ಮಾಡಿದ್ದ ನೇಹಾ #KhyaalRakhyaKar ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದರು.

ಫೋಟೊದಲ್ಲಿ ನೇಹಾ ಗರ್ಭಿಣಿಯಂತೆ ಕಾಣುತ್ತಿದ್ದು, ಹಲವಾರು ಮಂದಿ ಶುಭಾಶಯ ಕೋರಿದ್ದರು. ಆಕೆಯ ಪತಿ ರೋಹನ್, ಇನ್ನು ನಾನು ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ ಎಂದು ಕಾಮೆಂಟಿಸಿದ್ದರು. ನೇಹಾ ಸಹೋದರ ಟೋನಿ ಕಕ್ಕರ್ ನಾನು ಮಾವ ಆಗುತ್ತಿದ್ದೇನೆಎಂದು ಕಾಮೆಂಟ್ ಮಾಡಿದ್ದರಿಂದ ಬಹುತೇಕ ಮಂದಿ ನೇಹಾ ಅಮ್ಮನಾಗುತ್ತಿದ್ದಾಳೆ ಎಂದೇ ನಂಬಿದ್ದರು.

ಆದರೆ ಶನಿವಾರ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹೊಸ ಮ್ಯೂಸಿಕ್ ವಿಡಿಯೊದ ಪ್ರೊಮೊ ಪೋಸ್ಟರ್ ಶೇರ್ ಮಾಡಿ #KhyaalRakhyaKar 22nd December ಎಂದು ಬರೆದುಕೊಂಡಿದ್ದರಿಂದ ಇದು ಪ್ರಚಾರ ತಂತ್ರ ಎಂಬುದು ಸ್ಪಷ್ಟವಾಗಿದೆ.

ಮದುವೆಯಾದ ಎರಡೇ ತಿಂಗಳಿಗೆ ನೇಹಾ ಕಕ್ಕರ್​ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada