AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಚಿಕಿತ್ಸೆ ಉಚಿತವಿದ್ರೂ.. ಬಿಲ್ ಕೊಟ್ಟು ಕೈ ಸುಟ್ಟುಕೊಂಡ ಅಪೋಲೊ: ಆಸ್ಪತ್ರೆ ನೀಡಿದ ಪರಿಹಾರದ ಮೊತ್ತ ಎಷ್ಟು ಗೊತ್ತಾ?

ಪಾಲಿಕೆ ಕಮಿಷನರ್ ಸೂಚನೆ ಮೇರೆಗೆ ಬಿಬಿಎಂಪಿ ಕೋಟಾದಲ್ಲಿ ಕೊರೊನಾಗೆ ಚಿಕಿತ್ಸೆ ಪಡೆದ ರೋಗಿಗೆ ಅಪೋಲೊ ಆಸ್ಪತ್ರೆ ಬಿಲ್ ನೀಡಿ ದಂಡ ಪಾವತಿಸುವಂತಾಗಿದೆ.

ಕೊರೊನಾ ಚಿಕಿತ್ಸೆ ಉಚಿತವಿದ್ರೂ.. ಬಿಲ್ ಕೊಟ್ಟು ಕೈ ಸುಟ್ಟುಕೊಂಡ ಅಪೋಲೊ: ಆಸ್ಪತ್ರೆ ನೀಡಿದ ಪರಿಹಾರದ ಮೊತ್ತ ಎಷ್ಟು ಗೊತ್ತಾ?
ಮಾನವ ಹಕ್ಕುಗಳ ಹೋರಾಟಗಾರ ನರಸಿಂಹ ಮೂರ್ತಿ
ಆಯೇಷಾ ಬಾನು
ಆಯೇಷಾ ಬಾನು|

Updated on:Dec 20, 2020 | 12:31 PM

Share

ಬೆಂಗಳೂರು: ಮಹಾಮಾರಿ ಕೊರೊನಾಗೆ ಚಿಕಿತ್ಸೆ ನೀಡಿ ಹಣ ಪಡೆಯುವ ಖಾಸಗಿ ಆಸ್ಪತ್ರೆಗಳು ಇನ್ನುಮುಂದೆ ಬಹಳ ಎಚ್ಚರಿಕೆಯಿಂದಿರ ಬೇಕು. ಆಸ್ಪತ್ರೆಯ ಮಾನ ಹರಾಜಾಗಿ ದಂಡವೂ ಕಟ್ಟಬೇಕಾಗುತ್ತೆ. ಇದೇ ರೀತಿ ಇಲ್ಲಿ ರೋಗಿಯೊಬ್ಬರು ಕೊರೊನಾಗೆ ಚಿಕಿತ್ಸೆ ನೀಡಿ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ್ದಾರೆ. ಸೋಂಕಿತರ ಬಳಿ ಹಣ ಪೀಕೋ ಮನ್ನ ಎಚ್ಚರದಿಂದಿರಿ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಹಣದಾಸೆಗೆ ಖಾಸಗಿ ಆಸ್ಪತ್ರೆ ಮಾಡಿದ ಎಡವಟ್ಟಿನ ಸ್ಟೋರಿಯನ್ನು ಟಿವಿ9 ಬಿಚ್ಚಿಡ್ತಿದೆ.

ಹಣದಾಸೆಗೆ ಬಿದ್ದು ದಂಡ ಕಟ್ಟುವಂತಾಯ್ತು ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ನರಸಿಂಹ ಮೂರ್ತಿ ಅಕ್ಟೋಬರ್ 10 ರಂದು ಪಾಲಿಕೆ ಕಮಿಷನರ್ ಸೂಚನೆ ಮೇರೆಗೆ ಬಿಬಿಎಂಪಿ ಕೋಟಾದಲ್ಲಿ ನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದರು. ಡಿಸ್ಚಾರ್ಜ್ ವೇಳೆ ನರಸಿಂಹ ಮೂರ್ತಿ ಅವರಿಗೆ ಅಪೋಲೊ ಆಸ್ಪತ್ರೆ 10 ಸಾವಿರ ಬಿಲ್ ಮಾಡಿದೆ. ಹಾಗೂ ಹಣ ಪಾವತಿಸುವಂತೆ ತಿಳಸಿದೆ. ಬಿಬಿಎಂಪಿ ಕೋಟಾದಿಂದ ದಾಖಲಾದ ಸೋಂಕಿತರಿಗೆ ಉಚಿತವಾಗಿ ಟ್ರೀಟ್ಮೆಂಟ್ ಕೊಡ್ಬೇಕು. ಆದರೆ ಅಪೋಲೊ ಆಸ್ಪತ್ರೆ 10 ಸಾವಿರ ಬಿಲ್ ಮಾಡಿದೆ.

ಹೀಗಾಗಿ ಕೊರೊನಾದಿಂದ ಗುಣಮುಖರಾಗಿರುವ ನರಸಿಂಹ ಮೂರ್ತಿ ಆಸ್ಪತ್ರೆಯ ವಿರುದ್ಧ ಪಾಲಿಕೆ, ಬೆಂಗಳೂರು ಪೊಲೀಸ್​ ಕಮಿಷನರ್ ಹಾಗೂ ರಾಜ್ಯಪಾಲ ವಜೂಭಾಯ್ ವಾಲಾಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಅಪೋಲೊ ಆಸ್ಪತ್ರೆ ನರಸಿಂಹ ಮೂರ್ತಿ ಅವರಿಗೆ ಕ್ಷಮಾಪಣೆ ಪತ್ರ ನೀಡಿ, ಕಟ್ಟಿಸಿಕೊಂಡಿದ್ದ 10 ಸಾವಿರದ ಜೊತೆಗೆ 1 ರೂಪಾಯಿಯನ್ನ ಪರಿಹಾರವಾಗಿ ನೀಡಿದೆ.

1ರೂವನ್ನು ಪರಿಹಾರವಾಗಿ ಕೇಳಿ ಪಡೆದ ನರಸಿಂಹ ಮೂರ್ತಿ ಇನ್ನು ಅಪೋಲೊ ಆಸ್ಪತ್ರೆ ಪರಿಹಾರವಾಗಿ ಕೇವಲ ಒಂದು ರೂಪಾಯಿಯನ್ನು ನರಸಿಂಹ ಮೂರ್ತಿ ಅವರು ಕೇಳಿ ಪಡೆದಿದ್ದಾರೆ. ಈ ಘಟನೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಪಾಠವಾಗಬೇಕಿದೆ. ಇನ್ನು ಮುಂದೆ ಪಾಲಿಕೆ ಕೋಟಾದಲ್ಲಿ ಕೊರೊನಾ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡಬಾರದು. ಮಾಡಿದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತೆ.

ಗಂಟೆಗಟ್ಟಲೆ ಗೇಟ್ ಮುಂದೆ ಕಾದ್ರೂ ದಾಖಲಿಸಿಕೊಂಡಿಲ್ಲ, ಅಪೋಲೋ ವಿರುದ್ಧ ನಟಿ ಗರಂ

Published On - 12:29 pm, Sun, 20 December 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.