AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vicky Kaushal Birthday: ವಿಕ್ಕಿ ಕೌಶಲ್​ಗೆ ಜನ್ಮದಿನ ಸಂಭ್ರಮ; ಕತ್ರಿನಾ ಕೈಫ್​ ಜತೆ ಮದುವೆ ಆದ ಬಳಿಕ ಮೊದಲ ಬರ್ತ್​ಡೇ

Vicky Kaushal: ಖ್ಯಾತ ನಟ ವಿಕ್ಕಿ ಕೌಶಲ್​ ಅವರಿಗೆ ಇಂದು (ಮೇ 16) ಹುಟ್ಟುಹಬ್ಬದ ಸಡಗರ. ಪತ್ನಿ ಕತ್ರಿನಾ ಕೈಫ್​ ಜೊತೆ ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ.

Vicky Kaushal Birthday: ವಿಕ್ಕಿ ಕೌಶಲ್​ಗೆ ಜನ್ಮದಿನ ಸಂಭ್ರಮ; ಕತ್ರಿನಾ ಕೈಫ್​ ಜತೆ ಮದುವೆ ಆದ ಬಳಿಕ ಮೊದಲ ಬರ್ತ್​ಡೇ
ಕತ್ರಿನಾ ಕೈಫ್, ವಿಕ್ಕಿ ಕೌಶಲ್
TV9 Web
| Edited By: |

Updated on: May 16, 2022 | 7:30 AM

Share

ನಟ ವಿಕ್ಕಿ ಕೌಶಲ್​ (Vicky Kaushal) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಹೀರೋ ಆಗಿ ಮಿಂಚುತ್ತಿದ್ದಾರೆ. ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಅವರಿಗೆ ಇಂದು (ಮೇ 16) ಜನ್ಮದಿನದ ಸಂಭ್ರಮ. ಅವರ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ವಿಶ್​ ಮಾಡುತ್ತಿದ್ದಾರೆ. ಈ ಬಾರಿ ವಿಕ್ಕಿ ಕೌಶಲ್​ ಅವರಿಗೆ ಹುಟ್ಟುಹಬ್ಬ (Vicky Kaushal Birthday) ತುಂಬ ಸ್ಪೆಷಲ್​. ಯಾಕೆಂದರೆ ಕತ್ರಿನಾ ಕೈಫ್​ ಜೊತೆ ಮದುವೆ ಆದ ಬಳಿಕ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದು. ಹಾಗಾಗಿ ವಿಕ್ಕಿ ಕೌಶಲ್​ ಅವರು ತುಂಬ ವಿಶೇಷವಾಗಿ ಈ ದಿನವನ್ನು ಕಳೆಯಲಿದ್ದಾರೆ. ಪತ್ನಿ ಕತ್ರಿನಾ ಕೈಫ್​ ಮತ್ತು ಕುಟುಂಬದವರ ಜೊತೆ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ ಸಿನಿಮಾ ಕೆಲಸಗಳಲ್ಲಿ ವಿಕ್ಕಿ ಕೌಶಲ್​ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಪ್ರತಿ ದಿನ ಶೂಟಿಂಗ್​, ಡಬ್ಬಿಂಗ್​ ಎಂದು ಓಡಾಡುತ್ತಿದ್ದಾರೆ. ಆದರೆ ಮದುವೆ ಬಳಿಕ ಸೆಲೆಬ್ರೇಟ್​ ಮಾಡಿಕೊಳ್ಳುತ್ತಿರುವ ಮೊದಲ ಜನ್ಮದಿನ ಆದ್ದರಿಂದ ಎಲ್ಲ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿ ಸಂತಸದಿಂದ ಕಾಲ ಕಳೆಯಲಿದ್ದಾರೆ. ಕತ್ರಿನಾ ಕೈಫ್​ (Katrina Kaif) ಕಡೆಯಿಂದ ವಿಕ್ಕಿ ಕೌಶಲ್​ ಅವರಿಗೆ ಯಾವ ಗಿಫ್ಟ್​ ಸಿಗಬಹುದು ಎಂಬ ಕೌತುಕ ಅಭಿಮಾನಿಗಳಲ್ಲಿ ಇದೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ಪ್ರೀತಿಸಿ, ಕಳೆದ ವರ್ಷ ಮದುವೆ ಆದರು. ತಮ್ಮ ಪ್ರೀತಿಯ ವಿಚಾರವನ್ನು ಅವರು ಬಹಳ ದಿನಗಳವರೆಗೂ ಬಹಿರಂಗಪಡಿಸಿರಲಿಲ್ಲ. ಪ್ರತಿ ಬಾರಿ ಅವರ ಲವ್​ ಬಗ್ಗೆ ಗಾಸಿಪ್​ ಕೇಳಿಬಂದಾಗಲೆಲ್ಲ ಅದನ್ನು ಈ ಜೋಡಿ ಅಲ್ಲಗಳೆದಿತ್ತು. ಕೊನೆಗೂ ಅವರು ಮದುವೆ ಆಗುತ್ತಿರುವ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿತು. ಮದುವೆ ಮುಹೂರ್ತ ಬರುವವರೆಗೂ ಕತ್ರಿನಾ ಕೈಫ್​ ಆಗಲಿ, ವಿಕ್ಕಿ ಕೌಶಲ್​ ಅವರಾಗಲಿ ಯಾವುದೇ ವಿಚಾರ ಬಾಯಿ ಬಿಡಲಿಲ್ಲ. ಅಂತಿಮವಾಗಿ ಮದುವೆ ಫೋಟೋ ಬಹಿರಂಗ ಪಡಿಸುವ ಮೂಲಕ ಅವರು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದರು.

ಹಂತಹಂತವಾಗಿ ಬೆಳೆದು ಬಂದ ನಟ:

ಇದನ್ನೂ ಓದಿ
Image
ನಟಿ ಕತ್ರಿನಾ ಕೈಫ್​ ತಾಯಿ ಆಗ್ತಿದ್ದಾರಾ? ಪತಿ ವಿಕ್ಕಿ ಕೌಶಲ್​ ಟೀಮ್​ ಕಡೆಯಿಂದ ಬಂತು ಸ್ಪಷ್ಟನೆ
Image
‘ನಾನು ಮತ್ತು ನನ್ನವನು’; ಸ್ವಿಮ್ಮಿಂಗ್​ಪೂಲ್​ನಲ್ಲಿ ವಿಕ್ಕಿಯನ್ನು ತಬ್ಬಿ ಫೋಟೋ ಹಂಚಿಕೊಂಡ ಕತ್ರಿನಾ
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Image
ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ವಿಕ್ಕಿ ಕೌಶಲ್​ ಅವರಿಗೆ ಹೋಲಿಸಿದರೆ ಬಾಲಿವುಡ್​ನಲ್ಲಿ ಕತ್ರಿನಾ ಕೈಫ್​ ಸೀನಿಯರ್​. ಕತ್ರಿನಾ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ವಿಕ್ಕಿ ಕೌಶಲ್​ ಸಿನಿ ಜರ್ನಿ ಆರಂಭಿಸಿದ್ದು 2012ರಲ್ಲಿ. 2015ರಲ್ಲಿ ಬಂದ ‘ಮಸಾಣ್​’ ಸಿನಿಮಾದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು. ಆದರೆ ಬಹುದೊಡ್ಡ ಗೆಲುವು ಸಿಕ್ಕಿದ್ದು ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾದಿಂದ. ಭಾರತ ನಡೆಸಿದ್ದ ಸರ್ಜಿಕಲ್​ ಸ್ಟ್ರೈಕ್​ ಘಟನೆಯನ್ನೇ ಆಧರಿಸಿ ಆ ಸಿನಿಮಾ ಮಾಡಲಾಗಿತ್ತು. 2019ರಲ್ಲಿ ತೆರೆಕಂಡ ಆ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಹೀಗೆ ಹಂತ ಹಂತವಾಗಿ ಬೆಳೆದುಬಂದ ವಿಕ್ಕಿ ಕೌಶಲ್​ ಅವರು ಈಗ ಸ್ಟಾರ್​ ನಟನಾಗಿ ಗುರುತಿಸಿಕೊಂಡಿದ್ದಾರೆ.

ವಿಕ್ಕಿ ಕೌಶಲ್​-ಕತ್ರಿನಾ ಕೈಫ್​ ನಡುವೆ ವಯಸ್ಸಿನ ಅಂತರ:

ವಯಸ್ಸಿನಲ್ಲಿ ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ 5 ವರ್ಷ ದೊಡ್ಡವರು. ಆದರೂ ಕೂಡ ಇಬ್ಬರ ನಡುವೆ ಪ್ರೀತಿ ಚಿಗುರಿತು. ಇವರಿಬ್ಬರು ಯಾವುದೇ ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡಿಲ್ಲ. ಆದರೂ ಋಣಾನುಬಂಧ ಕೂಡಿಬಂತು. ಈಗ ಈ ಜೋಡಿ ಹಾಯಾಗಿ ಸಂಸಾರ ನಡೆಸುತ್ತಿದೆ. ವಿಕ್ಕಿ ಕೌಶಲ್​ ಜತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಕತ್ರಿನಾ ಕೈಫ್​ ಹಂಚಿಕೊಳ್ಳುತ್ತಾರೆ. ಅವುಗಳಿಗೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು