2021ರ ಡಿಸೆಂಬರ್ನಲ್ಲಿ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆ ನೆರವೇರಿತು. ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ಕತ್ರಿನಾ ಕೈಫ್ ಬಗ್ಗೆ ಒಂದು ವದಂತಿ ಹಬ್ಬಿದೆ. ಆ ಕುರಿತು ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.
1 / 5
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಆಗಿ 6 ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಕತ್ರಿನಾ ಕೈಫ್ ಅವರು ಪ್ರೆಗ್ನೆಂಟ್ ಎಂದು ಗಾಸಿಪ್ ಮಂದಿ ಮಾತನಾಡಿಕೊಂಡಿದ್ದಾರೆ. ಇದು ವಿಕ್ಕಿ ಕೌಶಲ್ ಕಿವಿಗೆ ಬಿದ್ದಿದೆ. ಅವರ ತಂಡದವರಿಂದ ಸ್ಪಷ್ಟನೆ ನೀಡಲಾಗಿದೆ.
2 / 5
ಕತ್ರಿನಾ ಕೈಫ್ ಅವರು ಪ್ರೆಗ್ನೆಂಟ್ ಆಗಿಲ್ಲ. ಸದ್ಯ ಅವರು ಕೆಲಸದ ಕಡೆಗೆ ಗಮನ ಹರಿಸಿದ್ದಾರೆ ಎಂದು ವಿಕ್ಕಿ ಕೌಶಲ್ ತಂಡದವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿ ಆಗಿದೆ. ಹಲವು ಸಿನಿಮಾ ಕೆಲಸಗಳಲ್ಲಿ ಕತ್ರಿನಾ ಕೈಫ್ ಬ್ಯುಸಿ ಆಗಿದ್ದಾರೆ.
3 / 5
ನಟಿಯೊಬ್ಬರು ಪ್ರೆಗ್ನೆಂಟ್ ಎಂದು ಸುದ್ದಿ ಹಬ್ಬಿಸಿದರೆ ಅದರಿಂದ ಆ ನಟಿಗೆ ನಷ್ಟ ಆಗುತ್ತದೆ. ಕೆಲವು ಸಿನಿಮಾ ಆಫರ್ಗಳು ಕೈ ತಪ್ಪುತ್ತವೆ. ಕತ್ರಿನಾ ಕೈಫ್ ಈಗ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಬಗ್ಗೆ ಗಾಸಿಪ್ ಹಬ್ಬಿಸಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
4 / 5
ಸೋಶಿಯಲ್ ಮೀಡಿಯಾದಲ್ಲಿ ಕತ್ರಿನಾ ಕೈಫ್ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಶೂಟಿಂಗ್ ಬಿಡುವಿನಲ್ಲಿ ಅವರು ಅನೇಕ ಪೋಸ್ಟ್ಗಳನ್ನು ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಪತಿ ವಿಕ್ಕಿ ಕೌಶಲ್ ಜೊತೆ ಕ್ಲಿಕ್ಕಿಸಿಕೊಂಡ ಅನೇಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.