‘ನಾನು ಮತ್ತು ನನ್ನವನು’; ಸ್ವಿಮ್ಮಿಂಗ್​ಪೂಲ್​ನಲ್ಲಿ ವಿಕ್ಕಿಯನ್ನು ತಬ್ಬಿ ಫೋಟೋ ಹಂಚಿಕೊಂಡ ಕತ್ರಿನಾ

ಕತ್ರಿನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದಾರೆ. ವಿಕ್ಕಿ ಶರ್ಟ್​ಲೆಸ್​ ಆಗಿದ್ದಾರೆ. ಕತ್ರಿನಾ ಅವರು ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ.

‘ನಾನು ಮತ್ತು ನನ್ನವನು’; ಸ್ವಿಮ್ಮಿಂಗ್​ಪೂಲ್​ನಲ್ಲಿ ವಿಕ್ಕಿಯನ್ನು ತಬ್ಬಿ ಫೋಟೋ ಹಂಚಿಕೊಂಡ ಕತ್ರಿನಾ
ಕತ್ರಿನಾ-ವಿಕ್ಕಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 07, 2022 | 2:47 PM

ಕತ್ರಿನಾ ಕೈಫ್ (Katrina Kaif)​ ಹಾಗೂ ವಿಕ್ಕಿ ಕೌಶಲ್ (Vicky Kaushal) ಕಳೆದ ವರ್ಷ ಹೊಸ ಬದುಕು ಆರಂಭಿಸಿದ್ದಾರೆ. ಸುಖವಾಗಿ ದಾಂಪತ್ಯ ಜೀವನವನ್ನು ಅವರು ನಡೆಸುತ್ತಿದ್ದಾರೆ. ಕತ್ರಿನಾ ಅವರು ವಿಕ್ಕಿ ಜತೆಗಿನ ಸಾಕಷ್ಟು ಫೋಟೋಗಳನ್ನು ಈ ಮೊದಲು ಹಂಚಿಕೊಂಡಿದ್ದಿದೆ. ಈಗ ಅವರು ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ವಿಕ್ಕಿ ಅವರನ್ನು ತಬ್ಬಿ ನಿಂತಿದ್ದಾರೆ ಕತ್ರಿನಾ. ಈ ಫೋಟೋಗೆ ಸೆಲೆಬ್ರಿಟಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಮದುವೆ ಆದರು. ಆ ಬಳಿಕ ಅವರು ಹನಿಮೂನ್​ಗೂ ತೆರಳಿದ್ದರು. ಬಳಿಕ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಆಗಾಗ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಾರೆ. ವೃತ್ತಿ ಜೀವನದಲ್ಲಿ ಒಬ್ಬರ ಬೆಂಬಲಕ್ಕೆ ಒಬ್ಬರು ನಿಂತಿದ್ದಾರೆ. ಇದರ ಜತೆಗೆ ವಿಶೇಷ ಫೋಟೋಗಳನ್ನು ಇವರು ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ
Image
ಕತ್ರಿನಾ ಕೈಫ್ ತಾಯಿಗೆ 70ನೇ ವರ್ಷದ ಹುಟ್ಟುಹಬ್ಬ; ವಿಶೇಷವಾಗಿ ಬರ್ತ್​ಡೇ ಆಚರಿಸಿದ ನಟಿ
Image
ರಣಬೀರ್​ ಕಪೂರ್​ ಮದುವೆಗೆ ಬರ್ತಾರಾ ಮಾಜಿ ಗರ್ಲ್​ಫ್ರೆಂಡ್ಸ್​ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?
Image
ಹಾಲಿಡೇ ಎಂಜಾಯ್ ಮಾಡುತ್ತಿರುವ ಕತ್ರಿನಾ ಕೈಫ್; ಇಲ್ಲಿವೆ ಫೋಟೋಗಳು
Image
ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ಕತ್ರಿನಾ ಹಾಗೂ ವಿಕ್ಕಿ ಸ್ವಿಮ್ಮಿಂಗ್​ ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದಾರೆ. ವಿಕ್ಕಿ ಶರ್ಟ್​ಲೆಸ್​ ಆಗಿದ್ದಾರೆ. ಕತ್ರಿನಾ ಅವರು ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ. ಇದಕ್ಕೆ ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಶನ್​ಅನ್ನು ಕತ್ರಿನಾ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಜೋಡಿಯನ್ನು ಅನೇಕ ಸೆಲಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ವಿಕ್ಕಿಗಿಂತ ಕತ್ರಿನಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಿಯೇ ಇಲ್ಲ. ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಇವರು ಮದುವೆ ಆಗುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಿದರು. ಈಗ ಇವರು ಹಂಚಿಕೊಂಡ ಫೋಟೋಗೆ, ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಹೃತಿಕ್ ರೋಶನ್ ಅವರು ‘ಸೋ ನೈಸ್​’ ಎಂದು ಕಮೆಂಟ್ ಮಾಡಿದ್ದಾರೆ. ‘ಬ್ಯಾಂಗ್​ ಬ್ಯಾಂಗ್​’ ಸಿನಿಮಾದಲ್ಲಿ ಕತ್ರಿನಾ ಹಾಗೂ ಹೃತಿಕ್ ಒಟ್ಟಾಗಿ ನಟಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿ ಪೋಸ್ಟ್ ಮಾಡಿದ್ದಾರೆ.

View this post on Instagram

A post shared by Katrina Kaif (@katrinakaif)

ಕತ್ರಿನಾ ಹಾಗೂ ವಿಕ್ಕಿ ಇಬ್ಬರು ತಮ್ಮತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಟೈಗರ್ 3’ ಸಿನಿಮಾದ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ಈ ಸರಣಿಯ ಎರಡು ಸಿನಿಮಾಗಳು ಹಿಟ್​ ಆಗಿವೆ.  ಇನ್ನೂ ಕೆಲ ಚಿತ್ರಗಳು ಅವರ ಕೈಯಲ್ಲಿ ಇವೆ. ‘ಗೋವಿಂದ ನಾಮ್​ ಮೇರಾ’ ಮೊದಲಾದ ಸಿನಿಮಾ ಕೆಲಸಗಳಲ್ಲಿ ವಿಕ್ಕಿ ತೊಡಗಿಕೊಂಡಿದ್ದಾರೆ. ಇಬ್ಬರನ್ನು ಒಟ್ಟಾಗಿ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ