ಕತ್ರಿನಾ ಕೈಫ್ ತಾಯಿಗೆ 70ನೇ ವರ್ಷದ ಹುಟ್ಟುಹಬ್ಬ; ವಿಶೇಷವಾಗಿ ಬರ್ತ್​ಡೇ ಆಚರಿಸಿದ ನಟಿ

ಅಮ್ಮನ ಜತೆ ಕೇಕ್​ ಇಟ್ಟು ಫೋಟೋ ಹಂಚಿಕೊಂಡಿದ್ದಾರೆ ಕತ್ರಿನಾ. ಮತ್ತೊಂದು ಫೋಟೋದಲ್ಲಿ ಸಹೋದರಿಯರ ಜತೆ ನಿಂತಿದ್ದಾರೆ ಕತ್ರಿನಾ. ಈ ಫೋಟೋಗೆ ಪ್ರೀತಿಯಿಂದ ಅವರು ಕ್ಯಾಪ್ಶನ್ ನೀಡಿದ್ದಾರೆ.

ಕತ್ರಿನಾ ಕೈಫ್ ತಾಯಿಗೆ 70ನೇ ವರ್ಷದ ಹುಟ್ಟುಹಬ್ಬ; ವಿಶೇಷವಾಗಿ ಬರ್ತ್​ಡೇ ಆಚರಿಸಿದ ನಟಿ
ಕತ್ರಿನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 05, 2022 | 5:58 PM

ಕತ್ರಿನಾ ಕೈಫ್ ಅವರು (Katrina Kaif) ಮದುವೆ ನಂತರದಲ್ಲಿ ಸಿನಿಮಾ ಹಾಗೂ ಕುಟುಂಬ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಕೆಲಸದ ಮಧ್ಯೆ ವಿದೇಶ ಪ್ರಯಾಣವನ್ನೂ ಮಾಡಿ ಬರುತ್ತಾರೆ ಕತ್ರಿನಾ. ಈಗ ಕ್ಯಾಟ್ ತಾಯಿ ಸುಝೇನ್ (Suzanne Turquotte)​ ಅವರ 70ನೇ ವರ್ಷದ ಬರ್ತ್​ಡೇ ಆಚರಿಸಿದ್ದಾರೆ. ಈ ಫೋಟೋವನ್ನು ಕತ್ರಿನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋಗೆ ಕತ್ರಿನಾ ಫ್ಯಾನ್ಸ್ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಅಮ್ಮನ ಜತೆ ಕೇಕ್​ ಇಟ್ಟು ಫೋಟೋ ಹಂಚಿಕೊಂಡಿದ್ದಾರೆ ಕತ್ರಿನಾ. ಮತ್ತೊಂದು ಫೋಟೋದಲ್ಲಿ ಸಹೋದರಿಯರ ಜತೆ ನಿಂತಿದ್ದಾರೆ ಕತ್ರಿನಾ. ಈ ಫೋಟೋಗೆ ಪ್ರೀತಿಯಿಂದ ಅವರು ಕ್ಯಾಪ್ಶನ್ ನೀಡಿದ್ದಾರೆ. ‘70ನೇ ವರ್ಷದ ಶುಭಾಶಯಗಳು ಅಮ್ಮ. ನೀವು ಈಗಿರುವಂತೆ ಸಂತೋಷ ಮತ್ತು ಧೈರ್ಯದಿಂದ ಜೀವನವನ್ನು ನಡೆಸಿ. ಗದ್ದಲ ಮಾಡುವ ಮಕ್ಕಳು ಸುತ್ತುವರಿದಿದ್ದಾರೆ’ ಎಂದು ಕತ್ರಿನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡು ಫೋಟೋ ಪೋಸ್ಟ್ ಮಾಡಿದ ನಟಿ; ನಂತರ ಏನಾಯ್ತು?
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Image
ರಣಬೀರ್​ ಕಪೂರ್​ ಮದುವೆಗೆ ಬರ್ತಾರಾ ಮಾಜಿ ಗರ್ಲ್​ಫ್ರೆಂಡ್ಸ್​ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?
Image
ಮದುವೆ ಬಳಿಕ ಬೇರೆ ನಟನ ಜತೆ ಕತ್ರಿನಾ ಕಣ್ಣಾಮುಚ್ಚಾಲೆ; ವಿಕ್ಕಿ ಎಲ್ಲಿ ಎಂದು ಕೇಳುತ್ತಿರುವ ಫ್ಯಾನ್ಸ್

ಈ ಫೋಟೋಗೆ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ. ನಟಿ ನೇಹಾ ಧೂಪಿಯಾ ಅವರು ‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಶರ್ಮಾ ಕೂಡ ಈ ಫೋಟೋಗೆ ಕಮೆಂಟ್ ಹಾಕಿದ್ದಾರೆ. ‘ತುಂಬಾ ಕ್ಯೂಟ್ ಆಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು, ಅಭಿಮಾನಿಗಳು ‘ವಿಕ್ಕಿ ಕೌಶಲ್ ಮಿಸ್ಸಿಂಗ್, ಅವರು ಎಲ್ಲಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ 2021ರ ಡಿಸೆಂಬರ್ 9ರಂದು ಮದುವೆ ಆದರು. ರಾಜಸ್ಥಾನದ ಸಿಕ್ಸ್​ ಸೆನ್ಸಸ್ ಫೋರ್ಟ್​ನಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಆಪ್ತರಿಗೆ ಮಾತ್ರ ಈ ಮದುವೆಗೆ ಆಹ್ವಾನ ನೀಡಲಾಗಿತ್ತು. ಮದುವೆ ಫೋಟೋಗಳನ್ನು ಕತ್ರಿನಾ-ವಿಕ್ಕಿ ಹಂಚಿಕೊಂಡಿದ್ದರು.

View this post on Instagram

A post shared by Katrina Kaif (@katrinakaif)

‘ಟೈಗರ್​ 3’ ಸಿನಿಮಾ ಕೆಲಸಗಳಲ್ಲಿ ಕತ್ರಿನಾ ಬ್ಯುಸಿ ಇದ್ದಾರೆ. ಸಲ್ಮಾನ್​ ಖಾನ್ ಅವರು ಈ ಸಿನಿಮಾದ ಹೀರೋ. ಈ ಸರಣಿಯ ಎರಡು ಚಿತ್ರಗಳು ಹಿಟ್ ಆಗಿವೆ. ಇದಲ್ಲದೆ, ‘ಮೇರಿ ಕ್ರಿಸ್​ಮಸ್​’ ಚಿತ್ರದಲ್ಲೂ ಕತ್ರಿನಾ ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ ಕೆಲ ಸಿನಿಮಾಗಳು ಅವರ ಕೈಯಲ್ಲಿವೆ.

ಆಲಿಯಾ ಮದುವೆಗೆ ಕತ್ರಿನಾ ಉಡುಗೊರೆ

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ತಮ್ಮ ಮದುವೆಗೆ ಕೆಲವೇ ಕೆಲವು ಮಂದಿಯನ್ನು ಮಾತ್ರ ಆಹ್ವಾನಿಸಿದ್ದರು. ಸಂಬಂಧಿಕರು, ಆಪ್ತ ಸ್ನೇಹಿತರು ಮಾತ್ರವೇ ಈ ಮದುವೆಯಲ್ಲಿ ಭಾಗಿ ಆಗಿದ್ದರು. ಬಾಲಿವುಡ್​ ಸೆಲೆಬ್ರಿಟಿಗಳ ವಿವಾಹ ಎಂದರೆ ಅದ್ದೂರಿಯಾಗಿರಲೇ ಬೇಕು. ಅದಕ್ಕೆ ತಕ್ಕಂತೆಯೇ ನವದಂಪತಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಗಳು ಬಂದಿವೆ. ಕರೀನಾ ಕಪೂರ್​, ರಣವೀರ್​ ಸಿಂಗ್​, ಕತ್ರಿನಾ ಕೈಫ್​, ವರುಣ್​ ಧವನ್​, ಸಿದ್ದಾರ್ಥ್​ ಮಲ್ಹೋತ್ರ, ದೀಪಿಕಾ ಪಡುಕೋಣೆ ಮುಂತಾದವರು ಲಕ್ಷಾಂತರ ರೂಪಾಯಿ ಮೌಲ್ಯದ ಗಿಫ್ಟ್​ ನೀಡಿದ್ದರು. ರಣಬೀರ್​ ಕಪೂರ್​ ಅವರ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಅವರು ತಲಾ 15 ಲಕ್ಷ ಬೆಲೆಬಾಳುವ ಎರಡು ವಾಚ್​ಗಳನ್ನು ನವದಂಪತಿಗೆ ನೀಡಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Published On - 5:54 pm, Thu, 5 May 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ