AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾದೇಶಿಕ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಲು ಬಾಲಿವುಡ್ ಮಂದಿ ರಿಮೇಕ್ ಮಾಡುತ್ತಿದ್ದಾರೆ ಎಂದ ನಟಿ

‘ಲಸ್ಟ್ ಸ್ಟೋರಿಸ್​’, ‘ಕಬೀರ್ ಸಿಂಗ್’, ‘ಶೇರ್ಷಾ’ ಮೊದಲಾದ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಕಿಯಾರಾಗೆ ಇದೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಸಿನಿಮಾ ರಿಮೇಕ್​ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಪ್ರಾದೇಶಿಕ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಲು ಬಾಲಿವುಡ್ ಮಂದಿ ರಿಮೇಕ್ ಮಾಡುತ್ತಿದ್ದಾರೆ ಎಂದ ನಟಿ
ಕಿಯಾರಾ
TV9 Web
| Edited By: |

Updated on:May 05, 2022 | 8:29 PM

Share

ಸದ್ಯ ಬಾಲಿವುಡ್​ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಅಧಿಪತ್ಯ ಸಾಧಿಸುತ್ತಿವೆ. ‘ಕೆಜಿಎಫ್ 2’, (KGF Chapter 2) ‘ಆರ್​ಆರ್​ಆರ್​’, ‘ಪುಷ್ಪ’ ಚಿತ್ರಗಳು ಹಿಂದಿಗೆ ಡಬ್​ ಆಗಿ ತೆರೆಕಂಡು ಧೂಳೆಬ್ಬಿಸಿವೆ. ಇದಲ್ಲದೆ, ಸಾಕಷ್ಟು ದಕ್ಷಿಣದ ಸಿನಿಮಾಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ಈ ಬಗ್ಗೆ ಎಲ್ಲರೂ ತಮ್ಮತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ರಿಮೇಕ್ ಅನ್ನೋದು ಸಾಮಾನ್ಯ ಪ್ರಕ್ರಿಯೆ ಎಂಬ ರೀತಿಯಲ್ಲಿ ನೋಡಿದರೆ, ಇನ್ನೂ ಕೆಲವರು ಈ ಬಗ್ಗೆ ಮಡಿವಂತಿಕೆ ತೋರುತ್ತಾರೆ. ‘ತಾವು ರಿಮೇಕ್ ಸಿನಿಮಾ ಮಾಡುವುದಿಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಕಿಯಾರಾ ಅಡ್ವಾಣಿ (Kiara Advani) ತಮ್ಮ ಅಭಿಪ್ರಾಯ ಏನು ಎನ್ನುವುದನ್ನು ಹಂಚಿಕೊಂಡಿದ್ದಾರೆ.

‘ಲಸ್ಟ್ ಸ್ಟೋರಿಸ್​’, ‘ಕಬೀರ್ ಸಿಂಗ್’, ‘ಶೇರ್ಷಾ’ ಮೊದಲಾದ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಕಿಯಾರಾಗೆ ಇದೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಸಿನಿಮಾ ರಿಮೇಕ್​ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಕಥೆಗಾಗಿ ನಾವು ದಕ್ಷಿಣ ಭಾರತವನ್ನು ಅವಲಂಬಿತವಾಗಿದ್ದೇವೆ ಎಂಬುದು ತಪ್ಪು. ಯಾವುದೇ ಭಾಷೆಯಲ್ಲಿ ಮಾಡಿದ ಸಿನಿಮಾ ಇರಬಹುದು. ಅದು ಒಂದು ಭಾಷೆಗೆ ಮಾತ್ರ ಸೀಮಿತವಾಗಿರುತ್ತದೆ. ಹಿಂದಿಯನ್ನು ನಮ್ಮ ದೇಶದಲ್ಲಿ ಹೆಚ್ಚು ಜನರು ಮಾತನಾಡುತ್ತಾರೆ. ಹೀಗಾಗಿ, ಉತ್ತಮ ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡಿದರೆ ಹೆಚ್ಚು ಜನರಿಗೆ ತಲುಪಬಹುದು’ ಎಂದಿದ್ದಾರೆ ಅವರು.

‘ಕಬೀರ್ ಸಿಂಗ್ ರಿಮೇಕ್ ಸಿನಿಮಾ. ಅದರಲ್ಲಿ ನಾನು ನಟಿಸಿದ್ದೆ. ಆಗ ಒಟಿಟಿ ವ್ಯಾಪ್ತಿ ಅಷ್ಟೊಂದು ವಿಸ್ತಾರವಾಗಿರಲಿಲ್ಲ. ಆದರೆ ಇಂದು ಒಟಿಟಿ ಪ್ಲಾಟ್‌ಫಾರ್ಮ್‌ ವ್ಯಾಪ್ತಿ ಹೆಚ್ಚಿದೆ. ಈ ಸಂದರ್ಭದಲ್ಲಿ ರಿಮೇಕ್ ಮಾಡುವಾಗ ಎರಡು ಬಾರಿ ಯೋಚಿಸುತ್ತೇನೆ. ನಾನು ಸಾಕಷ್ಟು ಡಬ್ಬಿಂಗ್ ಚಿತ್ರಗಳನ್ನು ನೋಡುತ್ತೇನೆ. ಇತರ ಭಾಷೆಯ ಬಹಳಷ್ಟು ಚಿತ್ರಗಳನ್ನು ನೋಡುತ್ತೇನೆ. ರಿಮೇಕ್ ಮಾಡುವಾಗ ಕೆಲ ಬದಲಾವಣೆಗಳನ್ನು ಮಾಡುತ್ತಾರೆ ಎಂದರೆ ನಾನು ನಟಿಸಲು ಒಪ್ಪುತ್ತೇನೆ’ ಎಂದಿದ್ದಾರೆ ಕಿಯಾರಾ.

ಇದನ್ನೂ ಓದಿ
Image
‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
Image
‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ
Image
ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಸಿಂಪಲ್ ಸುನಿ? ‘ಅವತಾರ ಪುರುಷ’ ನಿರ್ದೇಶಕ ಹೇಳಿದ್ದಿದು..
Image
ರಾಕಿ ಭಾಯ್​ಗೆ ಈದ್​ ಗಿಫ್ಟ್​; ಹಬ್ಬದ ದಿನವೇ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 9.57 ಕೋಟಿ ರೂ. ಬಾಚಿದ ‘ಕೆಜಿಎಫ್​ 2’

ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಪರಸ್ಪರ ಪ್ರೀತಿಸುತ್ತಿದ್ದರು. ‘ಶೇರ್ಷಾ’ ಚಿತ್ರದ ಮೂಲಕ ಇಬ್ಬರಿಗೂ ದೊಡ್ಡ ಗೆಲುವು ಸಿಕ್ಕಿತು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬ ಗಾಸಿಪ್​ ಹಬ್ಬಿದೆ. ಕಿಯಾರಾ ಅಡ್ವಾಣಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಹಾಗಾಗಿ ಗಾಸಿಪ್​ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆ ಮೂಲಕ ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ. ಬಾಲಿವುಡ್​ನಲ್ಲಿ ಕಿಯಾರಾ ಅಡ್ವಾಣಿ ನಟನೆಯ ‘ಭೂಲ್​ ಭುಲಯ್ಯ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 20 ರಂದು ಇದರ ಟ್ರೇಲರ್​ ರಿಲೀಸ್​ ಆಗಲಿದೆ. ಜನರ ಪ್ರತಿಕ್ರಿಯೆ ತಿಳಿಯಲು ಕಿಯಾರಾ ಅಡ್ವಾಣಿ ಉತ್ಸುಕರಾಗಿದ್ದಾರೆ.

Published On - 8:19 pm, Thu, 5 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್