ಸ್ಟಾರ್​ ಹೀರೋ ಜತೆಗಿನ ಜಗಳದ ಬಗ್ಗೆ ಮೌನ ಮುರಿದ ಅಜಯ್​ ದೇವಗನ್​: ‘ಇದೆಲ್ಲ ಫ್ಯಾನ್ಸ್​ ಕೆಲಸ’ ಎಂದ ನಟ

TV9 Digital Desk

| Edited By: ಮದನ್​ ಕುಮಾರ್​

Updated on: May 06, 2022 | 8:00 AM

‘ಅಭಿಮಾನಿ ಸಂಘಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರು ಸ್ಟಾರ್ ನಟರ ನಡುವೆಯೇ ಜಗಳ ಆಗಿದೆ ಎಂಬ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಸ್ಟಾರ್​ ಹೀರೋ ಜತೆಗಿನ ಜಗಳದ ಬಗ್ಗೆ ಮೌನ ಮುರಿದ ಅಜಯ್​ ದೇವಗನ್​: ‘ಇದೆಲ್ಲ ಫ್ಯಾನ್ಸ್​ ಕೆಲಸ’ ಎಂದ ನಟ
ಅಜಯ್ ದೇವಗನ್

ಬಾಲಿವುಡ್​ ನಟ ಅಜಯ್​ ದೇವಗನ್​ (Ajay Devgn) ಅವರು ಅನೇಕ ಕಾರಣಗಳಿಂದ ಹೈಲೈಟ್​ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ರಾಷ್ಟ್ರ ಭಾಷೆ ಕುರಿತು ಕಮೆಂಟ್​ ಮಾಡಿ ಸುದ್ದಿ ಆಗಿದ್ದರು. ಅದರಲ್ಲೂ ಕಿಚ್ಚ ಸುದೀಪ್​ಗೆ ಟ್ವಿಟರ್​ನಲ್ಲಿ ಪಾಠ ಮಾಡಲು ಬಂದು, ನಂತರ ತಾವೇ ಪಾಠ ಕಲಿತು ಸೈಲೆಂಟ್​ ಆಗಿದ್ದರು. ಇದರ ಬೆನ್ನಲ್ಲೇ ಅವರು ನಟಿಸಿದ ‘ರನ್​ವೇ 34’ ಸಿನಿಮಾ (Runway 34 Movie) ಬಿಡುಗಡೆ ಆಯಿತು. ಏ.29ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಅಜಯ್​ ದೇವಗನ್​ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಉತ್ತಮ ವಿಮರ್ಶೆ ಸಿಕ್ಕರೂ ಕೂಡ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋಲುಂಡಿದೆ. ಈ ನಡುವೆ ಅವರು ಶಾರುಖ್​ ಖಾನ್​ (Shah Rukh Khan) ಬಗ್ಗೆ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ನಟನಾಗಿ ಗುರುತಿಸಿಕೊಂಡಿರುವ ಶಾರುಖ್​ ಜೊತೆ ಅಜಯ್​ ದೇವಗನ್​ ಅವರಿಗೆ ದುಶ್ಮನಿ ಇದೆ ಎಂದು ಬಹಳ ದಿನಗಳಿಂದಲೂ ಹೇಳಲಾಗುತ್ತಿತ್ತು. ಆ ಕುರಿತು ಈಗ ಅವರು ಮಾತನಾಡಿದ್ದಾರೆ. ಶಾರುಖ್​ ಖಾನ್​ ಮತ್ತು ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಸಿನಿಮಾ ವಿಚಾರದಲ್ಲಿ ಅಜಯ್​ ದೇವಗನ್​ ಹಾಗೂ ಶಾರುಖ್​ ಖಾನ್​ ನಡುವೆ ವೈಮನಸ್ಸು ಮೂಡಿತ್ತು. 2012ರಲ್ಲಿ ಅಜಯ್​ ದೇವಗನ್​ ನಟನೆಯ ‘ಸನ್​ ಆಫ್​ ಸರ್ದಾರ್​’ ಹಾಗೂ ಶಾರುಖ್ ಖಾನ್​​ ನಟನೆಯ ‘ಜಬ್​ ತಕ್​ ಹೈ ಜಾನ್​’ ಸಿನಿಮಾಗಳು ಏಕಕಾಲಕ್ಕೆ ತೆರೆಕಂಡವು. ಆ ಸಂದರ್ಭದಲ್ಲಿ ಉಂಟಾದ ರಿಲೀಸ್​ ಕ್ಲ್ಯಾಶ್​ನಿಂದಾಗಿ ಇಬ್ಬರ ನಡುವೆ ಕಿರಿಕ್​ ಶುರುವಾಯಿತು ಎಂದು ಸುದ್ದಿ ಆಗಿತ್ತು. ಆದರೆ ಆ ಎಲ್ಲ ವಿಚಾರಗಳನ್ನು ಅಜಯ್​ ದೇವಗನ್​ ತಳ್ಳಿ ಹಾಕಿದ್ದಾರೆ.

ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಅಜಯ್​ ದೇವಗನ್​ ಹಾಗೂ ಶಾರುಖ್​ ಖಾನ್​ ಜೊತೆಯಾಗಿ ನಟಿಸಿದ್ದಾರೆ. ಆ ಮೂಲಕ ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಈಗಾಗಲೇ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಶಾರುಖ್​ ಖಾನ್​ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ

‘90ರ ದಶಕದಲ್ಲಿ ನಾನು ಮತ್ತು ಶಾರುಖ್​ ಖಾನ್​ ಒಟ್ಟಾಗಿ ವೃತ್ತಿಜೀವನ ಆರಂಭಿಸಿದವರು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಮಾಧ್ಯಮದವರು ಬರೆಯುವ ರೀತಿಯಲ್ಲಿ ನಮ್ಮ ಮಧ್ಯೆ ಯಾವುದೇ ಜಗಳ ಆಗಿಲ್ಲ. ನಾವು ಈಗಲೂ ಫೋನ್​ನಲ್ಲಿ ಮಾತನಾಡುತ್ತೇವೆ. ನಾವು ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರಲ್ಲಿ ಒಬ್ಬರಿಗೆ ಏನೇ ಸಮಸ್ಯೆ ಎದುರಾದರೂ ಇನ್ನೊಬ್ಬರು ಸಹಾಯಕ್ಕೆ ಧಾವಿಸುತ್ತೇವೆ. ಇಬ್ಬರಿಗೂ ಪರಸ್ಪರ ನಂಬಿಕೆ ಇದೆ. ನಮ್ಮ ನಡುವೆ ಯಾವತ್ತೂ ಮನಸ್ತಾಪ ಇರಲೇ ಇಲ್ಲ’ ಎಂದಿದ್ದಾರೆ ಅಜಯ್​ ದೇವಗನ್​.

ಹಾಗಾದರೆ, ಈ ಇಬ್ಬರು ಸ್ಟಾರ್​ ನಟರ ನಡುವೆ ಮನಸ್ತಾಪ ಇದೆ ಎಂದು ಸುದ್ದಿ ಹಬ್ಬಲು ಕಾರಣ ಏನಿರಬಹುದು. ಈ ವಿಚಾರದಲ್ಲಿ ಅಜಯ್​​ ದೇವಗನ್​ ಅವರು ಫ್ಯಾನ್ಸ್​ ಮೇಲೆ ಆರೋಪ ಹೊರಿಸಿದ್ದಾರೆ. ‘ಅಭಿಮಾನಿ ಸಂಘಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರು ಸ್ಟಾರ್ ನಟರ ನಡುವೆಯೇ ಜಗಳ ಆಗಿದೆ ಎಂಬ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada