Mandira Bedi: ಗಂಡ ಸತ್ತು ವರ್ಷ ಕಳೆದಿಲ್ಲ, ಬೇರೆ ಪುರುಷನ ಜತೆ ಹಿಂಗೆಲ್ಲ ಪೋಸ್​ ನೀಡಿದ್ದಕ್ಕೆ ಮಂದಿರಾ ಬೇಡಿ ಸಖತ್​ ಟ್ರೋಲ್​

ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳನ್ನು ಇಟ್ಟುಕೊಂಡು ಟ್ರೋಲ್​ ಮಾಡಲಾಗುತ್ತಿದೆ. ಕೆಲವರು ಮಂದಿರಾ ಬೇಡಿ ಪರವಾಗಿ ಮಾತನಾಡುತ್ತಿದ್ದಾರೆ.

Mandira Bedi: ಗಂಡ ಸತ್ತು ವರ್ಷ ಕಳೆದಿಲ್ಲ, ಬೇರೆ ಪುರುಷನ ಜತೆ ಹಿಂಗೆಲ್ಲ ಪೋಸ್​ ನೀಡಿದ್ದಕ್ಕೆ ಮಂದಿರಾ ಬೇಡಿ ಸಖತ್​ ಟ್ರೋಲ್​
ಮಂದಿರಾ ಬೇಡಿ ವೈರಲ್​ ಫೋಟೋ
Follow us
TV9 Web
| Updated By: ಮದನ್​ ಕುಮಾರ್​

Updated on: May 05, 2022 | 3:36 PM

ಈ ಸೋಶಿಯಲ್​ ಮೀಡಿಯಾ ಯುಗದಲ್ಲಿ ಸೆಲೆಬ್ರಿಟಿಗಳನ್ನು ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ನಟ-ನಟಿಯರು ಹಂಚಿಕೊಳ್ಳುವ ಪ್ರತಿ ಫೋಟೋ ಮತ್ತು ವಿಡಿಯೋವನ್ನು ನೆಟ್ಟಿಗರು ಹತ್ತಿರದಿಂದ ನೋಡುತ್ತಾರೆ. ಅದರಲ್ಲಿ ಏನಾದರೂ ಎಡವಟ್ಟು ಕಾಣಿಸಿದರೆ ಮುಲಾಜಿಲ್ಲದೇ ಟ್ರೋಲ್​ ಮಾಡುತ್ತಾರೆ. ಈ ಸತ್ಯ ಗೊತ್ತಿದ್ದರೂ ಕೂಡ ಕೆಲವು ಸೆಲೆಬ್ರಿಟಿಗಳು ಮನಬಂದಂತೆ ಫೋಟೋ ಹಂಚಿಕೊಳ್ಳುತ್ತಾರೆ. ನಟಿ ಮಂದಿರಾ ಬೇಡಿ (Mandira Bedi) ಅವರ ಕಥೆ ಹೀಗೆಯೇ ಆಗಿದೆ. ಗೆಳೆಯನ ಹುಟ್ಟುಹಬ್ಬಕ್ಕಾಗಿ ಅವರು ಒಂದೆರಡು ಫೋಟೋ ಪೋಸ್ಟ್​ ಮಾಡಿದ್ದಾರೆ. ಅದನ್ನು ಕಂಡ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ (Troll) ಮಾಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಕೆಲವೇ ತಿಂಗಳ ಹಿಂದೆ ಮಂದಿರಾ ಬೇಡಿ ಅವರು ಪತಿಯನ್ನು ಕಳೆದುಕೊಂಡರು. ಅವರ ಗಂಡ (Mandira Bedi Husband) ರಾಜ್​ ಕೌಶಲ್ ಹೃದಯಾಘಾತದಿಂದ ನಿಧನರಾಗಿದ್ದು ಬಾಲಿವುಡ್​ ಸೆಲೆಬ್ರಿಟಿಗಳ ವಲಯದಲ್ಲಿ ತೀವ್ರ ನೋವುಂಟು ಮಾಡಿತ್ತು. ಆ ನೋವನ್ನು ಮರೆತಿರುವ ಮಂದಿರಾ ಬೇಡಿ ಅವರು ಬದುಕಿನಲ್ಲಿ ಮೂವ್​ ಆನ್​ ಆದಂತಿದೆ. ಹಾಗಾಗಿ ಗೆಳೆಯನ ಜೊತೆ ಈ ರೀತಿಯಲ್ಲಿ ಖುಷಿಖುಷಿಯಾಗಿ, ಸಾಕಷ್ಟು ಆಪ್ತವಾಗಿ ಪೋಸ್​ ನೀಡಿದ್ದಾರೆ. ಅದನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

ಮಂದಿರಾ ಬೇಡಿ ಸ್ವಿಮಿಂಗ್​ ಪೂಲ್​ನಲ್ಲಿ ಬಿಕಿನಿ ಧರಿಸಿ, ಗೆಳೆಯನ ಜೊತೆ ಎಂಜಾಯ್​ ಮಾಡುತ್ತಿರುವ ಖುಷಿಯ ಕ್ಷಣಗಳು ಈ ಫೋಟೋದಲ್ಲಿವೆ. ಅವರ ಫ್ರೆಂಡ್​ ಹೆಸರು ಆದಿ. ‘ಹ್ಯಾಪಿ ಬರ್ತ್​ಡೇ ಆದಿ. ನನ್ನ ಪಾಲಿಗೆ ನೀನು ಏನು? ನಮ್ಮ ಸಂಬಂಧ ಯಾವ ರೀತಿ ಇದೆ? ಎಷ್ಟು ವರ್ಷಗಳಿಂದ ನಾವಿಬ್ಬರು ಪರಿಚಿತರು ಎಂಬುದನ್ನು ಈ ಫೋಟೋವೇ ಹೇಳುತ್ತಿದೆ’ ಎಂದು ಮಂದಿರಾ ಬೇಡಿ ಕ್ಯಾಪ್ಷನ್​ ನೀಡಿದ್ದಾರೆ.

ಇದನ್ನೂ ಓದಿ
Image
ಬ್ಯಾಕ್​ಲೆಸ್​ ಡ್ರೆಸ್​ ಧರಿಸಿ ಟ್ರೋಲ್​ ಆದ ಜಾನ್ವಿ ಕಪೂರ್​; ನೆಟ್ಟಿಗರು ಹೋಲಿಕೆ ಮಾಡಿದ್ದು ಯಾರ ಜೊತೆ?
Image
ಅನನ್ಯಾ ಪಾಂಡೆ ಹಾಟ್​ ಡ್ರೆಸ್​ ಬಗ್ಗೆ ಟ್ರೋಲ್​ ದಾಳಿ; ಮಗಳ ರಕ್ಷಣೆಗೆ ಬಂದ ತಂದೆ ಹೇಳಿದ್ದೇನು?
Image
ಎಷ್ಟೇ ಟ್ರೋಲ್​ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್​ ಕಮೆಂಟ್​ ಬರಲು ಕಾರಣ ಏನು?
Image
ಅತಿಯಾಯ್ತು ನಟಿಯ ಹಾಟ್​ ಡ್ರೆಸ್​ ಹಾವಳಿ; ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು

ಸ್ವಿಮಿಂಗ್​ ಪೂಲ್​ನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿರುವ ಮಂದಿರಾ ಬೇಡಿ ಮತ್ತು ಆದಿ ಒಂದು ಫೋಟೋದಲ್ಲಿ ವಿಚಿತ್ರವಾಗಿ ಪೋಸ್​ ನೀಡಿದ್ದಾರೆ. ಆದಿಯ ಮೂಗಿನೊಳಗೆ ಮಂದಿರಾ ಬೇಡಿ ಬೆರಳು ತೂರಿಸಿದ್ದಾರೆ! ‘ಕೊವಿಡ್​ ಸಂದರ್ಭದಲ್ಲಿ ಈ ರೀತಿ ಮಾಡುತ್ತೇನೆ ಎಂದರೆ ನಿನ್ನನ್ನು ನಾನು ಎಷ್ಟು ನಂಬುತ್ತೇನೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ. ನಿನಗೆ ಇನ್ನಷ್ಟು ಖುಷಿ, ಯಶಸ್ಸು, ಪ್ರೀತಿ ಸಿಗಲಿ. 17ನೇ ವಯಸ್ಸಿನಿಂದಲೂ ಆತ್ಮೀಯ ಸ್ನೇಹಿತನಾಗಿರುವ ನಿನ್ನನ್ನು ನಾನು ಪ್ರೀತಿಸುತ್ತೇನೆ’ ಎಂದು ಮಂದಿರಾ ಬೇಡಿ ಬರೆದುಕೊಂಡಿದ್ದಾರೆ.

ನಟಿಯ ಈ ವಿಚಿತ್ರ ಅವತಾರಗಳನ್ನು ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಕಮೆಂಟ್​ ಮಾಡಲು ಆರಂಭಿಸಿದರು. ‘ಇವರ ಗಂಡ ಸತ್ತು ಹೋಗಿದ್ದಾರೆ. ಹಾಗಾದ್ರೆ ಫೋಟೋದಲ್ಲಿ ಇರೋದು ಯಾರು?’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದರು. ‘ನಿಮ್ಮ ಗಂಡ ಸತ್ತು ಕೆಲವೇ ತಿಂಗಳುಗಳಾಗಿದೆ. ಸ್ಪಲ್ಪ ಕಾಲವಾದರೂ ತಡೆಯಿರಿ’ ಎಂದು ವ್ಯಕ್ತಿಯೊಬ್ಬರು ಕಟುವಾಗಿ ಕಮೆಂಟ್​ ಮಾಡಿದರು. ತೀರಾ ಕೆಟ್ಟ ಕಮೆಂಟ್​ಗಳು ಬರಲು ಆರಂಭಿಸಿದ ಬಳಿಕ ಮಂದಿರಾ ಬೇಡಿ ಅವರು ತಮ್ಮ ಪೋಸ್ಟ್​ಗೆ ಕಮೆಂಟ್​ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

View this post on Instagram

A post shared by Mandira Bedi (@mandirabedi)

ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗುತ್ತಿವೆ. ಕೆಲವರು ಮಂದಿರಾ ಬೇಡಿ ಪರವಾಗಿ ಮಾತನಾಡುತ್ತಿದ್ದಾರೆ. ಯಾರ ಜೊತೆ ಬೇಕಾದರೂ ಆಪ್ತವಾಗಿರುವ ಸ್ವಾತಂತ್ರ್ಯ ಅವರಿಗೆ ಇದೆ ಎಂದು ಅವರ ಅಭಿಮಾನಿಗಳು ವಾದ ಮಂಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ