ಅತಿಯಾಯ್ತು ನಟಿಯ ಹಾಟ್​ ಡ್ರೆಸ್​ ಹಾವಳಿ; ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು

ದಿನಕ್ಕೊಂದು ಹಾಟ್​ ವೇಷ ಧರಿಸಿ ಊರ್ಫಿ ಜಾವೇದ್​ ಪೋಸ್​ ನೀಡುತ್ತಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಬಗೆಬಗೆಯ ಫೋಟೋಗಳನ್ನು ಪೋಸ್ಟ್​ ಮಾಡಿಕೊಳ್ಳುತ್ತಿದ್ದಾರೆ.

ಅತಿಯಾಯ್ತು ನಟಿಯ ಹಾಟ್​ ಡ್ರೆಸ್​ ಹಾವಳಿ; ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ ನೆಟ್ಟಿಗರು
ಊರ್ಫಿ ಜಾವೇದ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 28, 2021 | 10:08 AM

‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೇಮಸ್​ ಆಗಿದ್ದ ನಟಿ ಊರ್ಫಿ ಜಾವೇದ್​ (Urfi Javed) ಅವರು ಚಿತ್ರ ವಿಚಿತ್ರ ಕಾಸ್ಟ್ಯೂಮ್​ಗಳಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ ನೆಟ್ಟಿಗರಿಗೆ ಇದು ಕೆಲವೊಮ್ಮೆ ಕಿರಿಕಿರಿ ಕೂಡ ಉಂಟು ಮಾಡುತ್ತಿದೆ. ಆ ಕಾರಣದಿಂದ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ (Troll)​ ಮಾಡಲಾಗುತ್ತಿದೆ. ದಿನಕ್ಕೊಂದು ಹಾಟ್​ ವೇಷ ಧರಿಸಿ ಊರ್ಫಿ ಜಾವೇದ್​ ಪೋಸ್​ ನೀಡುತ್ತಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಬಗೆಬಗೆಯ ಫೋಟೋಗಳನ್ನು (Urfi Javed Photos) ಪೋಸ್ಟ್​ ಮಾಡಿಕೊಳ್ಳುತ್ತಿದ್ದಾರೆ. ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಬಟ್ಟೆಗಳನ್ನು ನಾವೇ ಡಿಸೈನ್​ ಮಾಡಿಕೊಳ್ಳುವ ಮೂಲಕ ಊರ್ಫಿ ಜಾವೇದ್​ ಫೇಮಸ್​ ಆಗಿದ್ದಾರೆ. ಕರಣ್​ ಜೋಹರ್​ ನಡೆಸಿಕೊಟ್ಟ ‘ಬಿಗ್​ ಬಾಸ್​ ಓಟಿಟಿ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಯ ಒಳಗೆ ಕಾಲಿಟ್ಟಾಗಲೂ ಊರ್ಫಿ ಅದೇ ರೀತಿ ಮಾಡಿದ್ದರು. ದೊಡ್ಮನೆಯೊಳಗೆ ತಮ್ಮ ಇಷ್ಟದ ಪ್ರಕಾರ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳಲು ಅವರಿಗೆ ಎಲ್ಲ ಪರಿಕರಗಳು ಸಿಕ್ಕಿರಲಿಲ್ಲ. ಹಾಗಾಗಿ ಇರುವ ಕೆಲವು ವಸ್ತುಗಳನ್ನೇ ಬಳಸಿಕೊಂಡು ಅವರು ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದರು. ಅಚ್ಚರಿ ಎಂದರೆ ಅವರು ಕಸದ ಚೀಲವನ್ನು ಬಳಸಿಕೊಂಡು ತಮ್ಮ ಹೊಸ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದರು.

‘ಬಿಗ್​ ಬಾಸ್​ ಓಟಿಟಿ’ ಬಳಿಕ ಊರ್ಫಿ ಜಾವೇದ್​ ಅವರ ಖ್ಯಾತಿ ಹೆಚ್ಚಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ 19 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಊರ್ಫಿ ಹಾಕುವ ಡ್ರೆಸ್​ಗಳನ್ನು ಕೆಲವರು ಇಷ್ಟ ಪಡುತ್ತಾರೆ. ಆದರೆ ಇತ್ತೀಚೆಗೆ ಅದರಿಂದ ನೆಟ್ಟಿಗರಿಗೆ ಕಿರಿಕಿರಿ ಆಗುತ್ತಿದೆ. ಹಾಗಾಗಿ ಖಾರದ ಕಮೆಂಟ್​ಗಳ ಮೂಲಕ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ಭೇಟಿ ಮಾಡಲು ಅಮೆರಿಕದ ವಿಮಾನ ಹತ್ತಿದ್ರಾ ನಟಿ ರಶ್ಮಿಕಾ ಮಂದಣ್ಣ?

‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ​ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್​ ಸಂಬಂಧಿ

Published On - 9:58 am, Sun, 28 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ