AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಕ್​ಲೆಸ್​ ಡ್ರೆಸ್​ ಧರಿಸಿ ಟ್ರೋಲ್​ ಆದ ಜಾನ್ವಿ ಕಪೂರ್​; ನೆಟ್ಟಿಗರು ಹೋಲಿಕೆ ಮಾಡಿದ್ದು ಯಾರ ಜೊತೆ?

Janhvi Kapoor: ತಿಳಿ ನೀಲಿ ಬಣ್ಣದ ಡ್ರೆಸ್​ ಧರಿಸಿ ಜಾನ್ವಿ ಕಪೂರ್​ ಅವರು ಪೋಸ್​ ನೀಡಿದ್ದಾರೆ. ಅವರ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಬ್ಯಾಕ್​ಲೆಸ್​ ಡ್ರೆಸ್​ ಧರಿಸಿ ಟ್ರೋಲ್​ ಆದ ಜಾನ್ವಿ ಕಪೂರ್​; ನೆಟ್ಟಿಗರು ಹೋಲಿಕೆ ಮಾಡಿದ್ದು ಯಾರ ಜೊತೆ?
ಜಾನ್ವಿ ಕಪೂರ್
TV9 Web
| Edited By: |

Updated on: Apr 08, 2022 | 8:58 AM

Share

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಅಭಿಮಾನಿಗಳು ಅವರನ್ನು ಹೆಚ್ಚಾಗಿ ಗಮನಿಸುತ್ತಾರೆ. ಜಾನ್ವಿ ಕಪೂರ್​ ಎಲ್ಲೇ ಹೋದರೂ ಅವರನ್ನು ಪಾಪರಾಜಿ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ಅವರು ಧರಿಸುವ ಬಟ್ಟೆ, ಆಭರಣ, ಬಳಸುವ ವಸ್ತುಗಳ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಾರೆ. ಒಟ್ಟಿನಲ್ಲಿ, ಸಿನಿಮಾಗಳಿಗಿಂತಲೂ (Janhvi Kapoor Movies) ಹೆಚ್ಚಾಗಿ ತಮ್ಮ ಖಾಸಗಿ ವಿಚಾರದ ಸಲುವಾಗಿಯೇ ಜಾನ್ವಿ ಕಪೂರ್​ ಅವರು ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಈಗ ಅವರಿಗೆ ನಟಿ ಅನನ್ಯಾ ಪಾಂಡೆ ಜೊತೆಗೆ ಹೆಚ್ಚು ಸ್ನೇಹ ಬೆಳೆದಿದೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಅನನ್ಯಾ ಪಾಂಡೆ ಜೊತೆಗೆ ಸುತ್ತಾಡಿದ್ದಾರೆ. ಈ ವೇಳೆ ಅವರು ಧರಿಸಿದ್ದ ಡ್ರೆಸ್​ ಎಲ್ಲರ ಕಣ್ಣು ಕುಕ್ಕಿದೆ. ಫ್ಯಾಷನ್​ ಬಗ್ಗೆ ಜಾನ್ವಿ ಕಪೂರ್​ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಆಕರ್ಷಕವಾದ ಉಡುಗೆಗಳನ್ನು ಧರಿಸಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರು ಬ್ಯಾಕ್​ಲೆಸ್​ ಡ್ರೆಸ್​ ತೊಟ್ಟಿದ್ದಕ್ಕಾಗಿ ಟ್ರೋಲ್​ ಆಗಿದ್ದಾರೆ. ಆ ಫೋಟೋ  (Janhvi Kapoor Photos) ಮತ್ತು ವಿಡಿಯೋಗಳು ಸಖತ್​ ವೈರಲ್​ ಆಗಿವೆ.

ತಿಳಿ ನೀಲಿ ಬಣ್ಣದ ಡ್ರೆಸ್​ ಧರಿಸಿ ಬಂದಿದ್ದ ಜಾನ್ವಿ ಕಪೂರ್​ ಅವರು ಪಾಪರಾಜಿ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಹಾಟ್​ ಆಗಿ ಕಾಣುವಂತೆ ಬಟ್ಟೆ ಧರಿಸಿದ್ದ ಅವರ ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಜಾನ್ವಿ ಕಪೂರ್​ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವುದು ಹೆಚ್ಚುತ್ತಿದೆ. ಮುಂದೇನಾಗಬಹುದು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಸ್ಪರ್ಧಿಸಿದ ನಟಿ ಉರ್ಫಿ ಜಾವೇದ್​ ಅವರು ಅತಿ ಮಾದಕವಾದ ಬಟ್ಟೆಗಳನ್ನು ಧರಿಸುವ ಮೂಲಕ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಈಗ ಜನರು ಜಾನ್ವಿ ಕಪೂರ್​ ಅವರನ್ನು ಉರ್ಫಿ ಜಾವೇದ್​ಗೆ ಹೋಲಿಸುತ್ತಿದ್ದಾರೆ. ಇನ್ನೂ ಕೆಲವರು ‘ಈಕೆ ಭಾರತದ ಕಿಮ್​ ಕರ್ದಾಶಿಯಾನ್​’ ಎಂದು ಹೋಲಿಕೆ​ ಮಾಡಿದ್ದಾರೆ. ‘ಜಾನ್ವಿ ಕಪೂರ್​ ದೊಡ್ಡವರಾದ ಮೇಲೆ ಮಲೈಕಾ ಅರೋರಾ ರೀತಿ ಆಗುತ್ತಾರೆ’ ಎಂಬ ಕಮೆಂಟ್​ ಕೂಡ ಬಂದಿದೆ.

ಜನರ ಟೀಕೆ ಏನೇ ಇರಲಿ, ಅವುಗಳ ಬಗ್ಗೆ ಜಾನ್ವಿ ಕಪೂರ್​ ತಲೆ ಕೆಡಿಸಿಕೊಂಡಿಲ್ಲ. ತಮಗೆ ಸರಿ ಎನಿಸುವ ಬಟ್ಟೆ ಧರಿಸಿ ಅವರು ಓಡಾಡುತ್ತಿದ್ದಾರೆ. ಸದ್ಯ ಅವರಿಗೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಅವರ ತಂದೆ ಬೋನಿ ಕಪೂರ್​ ಅವರು ಮಗಳಿಗಾಗಿ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ‘ಮಿಲಿ’ ಎಂದು ಶೀರ್ಷಿಕೆ ಇಡಲಾಗಿದೆ. ಶ್ರೀದೇವಿ ಪುತ್ರಿ ಎಂಬ ಕಾರಣದಿಂದ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ಆದರೆ ಈವರೆಗೂ ಜಾನ್ವಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ.

ಜಾನ್ವಿ ಕಪೂರ್​ ಮತ್ತು ಇಶಾನ್​ ಖಟ್ಟರ್​ ಅವರು ಜೊತೆಯಾಗಿ ‘ಧಡಕ್​’ ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ಅದು ಹೆಚ್ಚು ದಿನ ಮುಂದುವರಿಯಲಿಲ್ಲ. ಬಳಿಕ ಇಶಾನ್​ ಖಟ್ಟರ್​ ಅವರು ಅನನ್ಯಾ ಪಾಂಡೆ ಜೊತೆ ಓಡಾಡಲು ಶುರುಮಾಡಿದರು. ಇತ್ತೀಚೆಗೆ ಆ ಸಂಬಂಧ ಕೂಡ ಮುರಿದು ಬಿದ್ದಿದೆ ಎನ್ನಲಾಗಿದೆ. ಈಗ ಇಶಾನ್​ ಅವರ ಮಾಜಿ ಗೆಳತಿಯರಾದ ಅನನ್ಯಾ ಪಾಂಡೆ ಮತ್ತು ಜಾನ್ವಿ ಕಪೂರ್​ ಜೊತೆಜೊತೆಯಾಗಿ ಸುತ್ತಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಕೂಡ ಮೂಡಿದೆ. ಸದ್ಯಕ್ಕಂತೂ ಅದಕ್ಕೆ ಉತ್ತರವಿಲ್ಲ.

ಇದನ್ನೂ ಓದಿ:

ದಿನದಿನಕ್ಕೂ ಹೆಚ್ಚುತ್ತಿದೆ ಜಾನ್ವಿ ಕಪೂರ್​ ಗ್ಲಾಮರ್​; ಫೋಟೋ ಕಂಡು ಟ್ರೋಲ್ ಮಾಡಿದ ನೆಟ್ಟಿಗರು

ಅವಾರ್ಡ್​ ಫಂಕ್ಷನ್​​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡ ಜಾನ್ವಿ ಕಪೂರ್; ಇಲ್ಲಿವೆ ಫೋಟೋಗಳು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್