AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನನ್ಯಾ ಪಾಂಡೆ ಹಾಟ್​ ಡ್ರೆಸ್​ ಬಗ್ಗೆ ಟ್ರೋಲ್​ ದಾಳಿ; ಮಗಳ ರಕ್ಷಣೆಗೆ ಬಂದ ತಂದೆ ಹೇಳಿದ್ದೇನು?

Ananya Panday: ‘ಅನನ್ಯಾ ಪಾಂಡೆ ಇರುವುದು ಬಣ್ಣದ ಲೋಕದಲ್ಲಿ. ಹಾಗಾಗಿ ಆಕೆ ಗ್ಲಾಮರಸ್​ ಆಗಿ ಕಾಣುವುದು ಅಗತ್ಯ’ ಎಂದು ತಂದೆ ಚಂಕಿ ಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.

ಅನನ್ಯಾ ಪಾಂಡೆ ಹಾಟ್​ ಡ್ರೆಸ್​ ಬಗ್ಗೆ ಟ್ರೋಲ್​ ದಾಳಿ; ಮಗಳ ರಕ್ಷಣೆಗೆ ಬಂದ ತಂದೆ ಹೇಳಿದ್ದೇನು?
ಅನನ್ಯಾ ಪಾಂಡೆ, ಚಂಕಿ ಪಾಂಡೆ
TV9 Web
| Edited By: |

Updated on: Mar 21, 2022 | 9:15 AM

Share

ಸೆಲೆಬ್ರಿಟಿಗಳಿಗೆ ಟ್ರೋಲ್​ (Troll) ಕಾಟ ತಪ್ಪಿದ್ದಲ್ಲ. ಅದರಲ್ಲೂ ಗ್ಲಾಮರಸ್​ ಆಗಿ ಬಟ್ಟೆ ಧರಿಸುವ ಬಾಲಿವುಡ್​ ಮಂದಿಯನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತದೆ. ಕೆಲವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವೊಮ್ಮೆ ಪ್ರತಿಕ್ರಿಯೆ ನೀಡದೇ ಬೇರೆ ಆಯ್ಕೆ ಇರುವುದಿಲ್ಲ. ನಟಿ ಅನನ್ಯಾ ಪಾಂಡೆ (Ananya Panday) ಕೂಡ ಟ್ರೋಲ್​ ಕಾಟಕ್ಕೆ ಒಳಗಾಗಿದ್ದಾರೆ. ಈಗತಾನೇ ಹಿಂದಿ ಚಿತ್ರರಂಗದಲ್ಲಿ ಮಿಂಚಲು ಆರಂಭಿಸಿರುವ ಅವರು ಬಗೆಬಗೆಯ ಬಟ್ಟೆ ಧರಿಸುತ್ತಾರೆ. ಅದನ್ನು ನೋಡಿದ ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ. ಈ ವಿಚಾರ ಅನನ್ಯಾ ಪಾಂಡೆ ಅವರ ತಂದೆ ಚಂಕಿ ಪಾಂಡೆ (Chunky Panday) ಕಿವಿಗೆ ಬಿದ್ದಿದೆ. ಅದಕ್ಕೆ ಅವರು ಖಡಕ್​ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಚಂಕಿ ಪಾಂಡೆ ಅವರಿಗೆ 4 ದಶಕಗಳ ಅನುಭವ ಇದೆ. ಬಣ್ಣದ ಲೋಕದ ಪ್ರತಿ ಆಯಾಮವನ್ನೂ ಅವರು ಚೆನ್ನಾಗಿ ನೋಡಿದ್ದಾರೆ. ಈಗ ಅವರ ಮಗಳು ಅನನ್ಯಾ ಪಾಂಡೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಮಗಳ ಡ್ರೆಸ್​ ಬಗ್ಗೆ ಕಮೆಂಟ್​ ಮಾಡಿದವರಿಗೆ ಚಂಕಿ ಪಾಂಡೆ ಉತ್ತರ ನೀಡಿದ್ದಾರೆ. ಪುತ್ರಿಯ ಪರವಾಗಿ ಅವರು ಬ್ಯಾಟ್​ ಬೀಸಿದ್ದಾರೆ.

ಅಷ್ಟಕ್ಕೂ ಅನನ್ಯಾ ಪಾಂಡೆ ಅವರ ಡ್ರೆಸ್​ ವಿಚಾರ ಈ ಪರಿ ಚರ್ಚೆ ಆಗಿದ್ದು ಯಾವಾಗ? ಇತ್ತೀಚೆಗೆ ನಿರ್ಮಾಪಕ ಅಪೂರ್ವ ಮೆಹ್ತಾ ಅವರ 50ನೇ ವರ್ಷದ ಹುಟ್ಟುಹಬ್ಬದ ಪಾರ್ಟಿಗೆ ಅನನ್ಯಾ ಹಾಜರಿ ಹಾಕಿದ್ದರು. ಆ ಪಾರ್ಟಿಗೆ ತೆರಳುವಾಗಿ ಅವರು ಹಾಟ್​ ಆದಂತಹ ಬಟ್ಟೆ ಧರಿಸಿದ್ದರು. ಆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಅದನ್ನು ಕಂಡ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ಅಹಸ್ಯವಾಗಿದೆ’ ಎಂದು ಕೆಲವರು ಟೀಕಿಸಿದ್ದರೆ, ‘ನೀವು ಊರ್ಫಿ ಜಾವೇದ್​ ರೀತಿ ಕಾಣುತ್ತಿದ್ದೀರಿ’ ಎಂದು ಇನ್ನೂ ಕೆಲವರು ಕಾಲೆಳೆದಿದ್ದರು.

ಈ ಎಲ್ಲ ವಿಚಾರಗಳ ಕುರಿತಂತೆ ಅನನ್ಯಾ ಪಾಂಡೆ ತಂದೆ ಚಂಕಿ ಪಾಂಡೆ ಅವರು ‘ಹಿಂದುಸ್ತಾನ್​ ಟೈಮ್ಸ್​’ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ತಂದೆ-ತಾಯಿಯಾಗಿ ನಾವು ನಮ್ಮ ಮಕ್ಕಳಿಗೆ ಇಂಥದ್ದೇ ಬಟ್ಟೆ ಧರಿಸಬೇಕು ಅಂತ ನಿರ್ಬಂಧ ಹೇರಿಲ್ಲ. ನಾವು ನಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದೇವೆ. ಅವರಿಗೆ ಪ್ರಜ್ಞೆ ಇದೆ. ಅನನ್ಯಾ ಇರುವುದು ಬಣ್ಣದ ಲೋಕದಲ್ಲಿ. ಹಾಗಾಗಿ ಆಕೆ ಗ್ಲಾಮರಸ್​ ಆಗಿ ಕಾಣುವುದು ಅಗತ್ಯ’ ಎಂದು ಚಂಕಿ ಪಾಂಡೆ ಹೇಳಿದ್ದಾರೆ.

‘ನನ್ನ ಹೆಣ್ಣುಮಕ್ಕಳ ಬಗ್ಗೆ ಒಂದು ವಿಚಾರ ನನಗೆ ಚೆನ್ನಾಗಿ ತಿಳಿದಿದೆ. ಅವರಲ್ಲಿ ಮುಗ್ಧತೆ ಇನ್ನೂ ಹಾಗೆಯೇ ಇದೆ. ಅಶ್ಲೀಲವಾಗಿ ಕಾಣದಂತೆ ಅವರು ಯಾವುದೇ ಬಟ್ಟೆಯನ್ನು ಧರಿಸಬಹುದು. ಅನನ್ಯಾ ಬಟ್ಟೆ ಬಗ್ಗೆ ತಂದೆಯಾಗಿ ನಾನೇ ಚಿಂತೆ ಮಾಡುತ್ತಿಲ್ಲ ಎಂದಮೇಲೆ ಬೇರೆ ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದು ಚಂಕಿ ಪಾಂಡೆ ಹೇಳಿದ್ದಾರೆ. ಟ್ರೋಲ್​ಗಳನ್ನು ನೋಡಿ ನಕ್ಕು ಸುಮ್ಮನಾಗಬೇಕು ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ. ಮಗಳಿಗೂ ಅದನ್ನೇ ಕಲಿಸಿದ್ದಾರೆ. ‘ಒಳ್ಳೆಯದು ಅಥವಾ ಕೆಟ್ಟದ್ದು ಏನಾದರೂ ಪರವಾಗಿಲ್ಲ. ಕಡೇ ಪಕ್ಷ ಜನರು ನಿನ್ನ ಬಗ್ಗೆ ಮಾತನಾಡುತ್ತಿದ್ದಾರಲ್ಲ’ ಎಂಬ ಪಾಸಿಟಿವ್​ ಆಲೋಚನೆಯನ್ನು ಮಗಳ ತಲೆಯಲ್ಲಿ ಚಂಕಿ ಪಾಂಡೆ ಬಿತ್ತಿದ್ದಾರೆ.

2019ರಲ್ಲಿ ‘ಸ್ಟೂಡೆಂಟ್​ ಆಫ್​ ದಿ ಇಯರ್​ 2’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನನ್ಯಾ ಪಾಂಡೆ ಕಾಲಿಟ್ಟರು. ಇತ್ತೀಚೆಗೆ ಒಟಿಟಿ ಮೂಲಕ ತೆರೆಕಂಡ ‘ಗೆಹರಾಯಿಯಾ’ ಸಿನಿಮಾದಿಂದ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ವಿಜಯ್​ ದೇವರಕೊಂಡ ಜೊತೆ ಅವರು ‘ಲೈಗರ್​’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ಚಿತ್ರ ಕೂಡ ಸಖತ್​ ನಿರೀಕ್ಷೆ ಮೂಡಿಸಿದೆ. ‘ಲೈಗರ್​’ನಿಂದ ಅನನ್ಯಾ ಖ್ಯಾತಿ ಹೆಚ್ಚುವುದು ಖಚಿತ ಎನ್ನಲಾಗುತ್ತಿದೆ. ಇನ್ನೂ ಅನೇಕ ಸಿನಿಮಾ ಆಫರ್​ಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ:

ಹಾಟ್​ ಬಟ್ಟೆ ಧರಿಸಿ ಟ್ರೋಲ್​ ಆದ ಸುಶಾಂತ್​ ಸಹೋದರಿ; ಅಭಿಮಾನಿಗಳ ಕೋಪಕ್ಕೆ ಕಾರಣ ಏನು?

‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ

Follow Us
Web contact
Web contact

TV9 Kannada

Read More
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!