AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು.

ನಟಿ ಊರ್ವಶಿ ರೌಟೇಲಾಗಾಗಿ 17 ಗಂಟೆ ಕಾದಿದ್ದ ಟೀಂ ಇಂಡಿಯಾ ಕ್ರಿಕೆಟಿಗ; ರಿಲೇಶನ್​ಶಿಪ್​ ವಿಚಾರ ನಿಜವೇ?
ಊರ್ಚಶಿ-ರಿಷಭ್ ಪಂತ್
TV9 Web
| Edited By: |

Updated on: Mar 21, 2022 | 6:00 AM

Share

ಬಾಲಿವುಡ್​ಗೂ (Bollywood) ಕ್ರಿಕೆಟ್​ ಲೋಕಕ್ಕೂ ಮೊದಲಿನಿಂದಲೂ ನಂಟಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್​ ನಟಿಯರ ಜತೆ ಡೇಟಿಂಗ್ ಮಾಡಿದ್ದಾರೆ. ಇನ್ನೂ ಕೆಲ ಕ್ರಿಕೆಟಿಗರು (Cricket) ಬಾಲಿವುಡ್​ ಬೆಡಗಿಯರನ್ನು ಮದುವೆ ಕೂಡ ಆಗಿದ್ದಾರೆ. ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ (Urvashi Rautela) ಭೇಟಿಗಾಗಿ ಖ್ಯಾತ ಕ್ರಿಕೆಟಿಗ ರಿಷಭ್​ ಪಂತ್ ಬರೋಬ್ಬರಿ 17 ಗಂಟೆ ಕಾದಿದ್ದರು. ಆ ಬಳಿಕ ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರ ಹರಿದಾಡಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಈ ಸುದ್ದಿಯನ್ನು ಅಲ್ಲಗಳೆಯುತ್ತಾರೆ.

2013ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2015ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದಲ್ಲೂ ಊರ್ವಶಿ ನಟಿಸಿದ್ದರು. ನಂತರ ಹಿಂದಿ ಚಿತ್ರರಂಗದಲ್ಲಿ ಊರ್ವಶಿ ಬ್ಯುಸಿ ಆದರು. ಕೆಲ ವರ್ಷಗಳ ಹಿಂದೆ ಈ ನಟಿಯ ಹೆಸರು ರಿಷಭ್ ಜತೆ ತಳುಕು ಹಾಕಿಕೊಂಡಿತ್ತು. ರಿಷಭ್​ ಅವರನ್ನು 17 ಗಂಟೆ ಕಾಯಿಸಿದ ಬಗ್ಗೆಯೂ ವರದಿ ಆಗಿತ್ತು.

ಊರ್ವಶಿ ಅವರು ಶೂಟಿಂಗ್​ಗಾಗಿ ವಾರಾಣಸಿಗೆ ಬಂದಿದ್ದರು. ಅವರಿಗೆ ಬ್ಯುಸಿ ಶ್ಯೆಡ್ಯೂಲ್​ ಇದ್ದ ಕಾರಣ ಯಾರಿಗೂ ಭೇಟಿ ಮಾಡೋಕೆ ಅವಕಾಶ ನೀಡಬೇಡಿ ಎಂದು ಸಹಾಯಕರಿಗೆ ಹೇಳಿದ್ದರು. ಈ ಸಂದರ್ಭದಲ್ಲಿ ರಿಷಭ್ ಕೂಡ ವಾರಾಣಸಿಯಲ್ಲೇ ಇದ್ದರು. ಹೀಗಾಗಿ, ಊರ್ವಶಿ ಅವರನ್ನು ಭೇಟಿ ಮಾಡೋಕೆ ಅವರು ತೆರಳಿದ್ದರು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ, ನಟಿಯನ್ನು ಭೇಟಿ ಮಾಡೋಕೆ 16-17 ಗಂಟೆಗಳ ಕಾಲ ಕಾದು ನಂತರ ಊರ್ವಶಿ ಅವರನ್ನು ಭೇಟಿ ಮಾಡಿದ್ದಾರೆ ರಿಷಭ್.

2019ರಲ್ಲಿ ರಿಷಭ್ ಹಾಗೂ ಊರ್ವಶಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಚ್ಚರಿಯ ವಿಚಾರ ಎಂದರೆ, ರಿಷಭ್​ಗಿಂತಲೂ ಊರ್ವಶಿ ಸುಮಾರು ಮೂರು ವರ್ಷ ದೊಡ್ಡವರು. ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ನಿಜ, ಆದರೆ, ಇವರ ನಡುವೆ ಯಾವುದೇ ರಿಲೇಶನ್​ಶಿಪ್ ಇರಲಿಲ್ಲ ಎಂದು ಮೂಲಗಳು ಸ್ಪಷ್ಟಡಿಸಿದ್ದವು.

2021ರ ಮಿಸ್ ಯೂನಿವರ್ಸ್​​ನಲ್ಲಿ ಊರ್ವಶಿ ಜಡ್ಜ್​ ಆಗಿದ್ದರು. ಭಾರತದ ಹರ್ನಾಜ್​ ಸಂಧು ಮಿಸ್ ಯೂನಿವರ್ಸ್ 2021 ಪ್ರಶಸ್ತಿ ಗೆದ್ದು ಬೀಗಿದ್ದಕ್ಕೆ ಊರ್ವಶಿ ಸಂತಸ ವ್ಯಕ್ತಪಡಿಸಿದ್ದರು. ‘ಇನ್​ಸ್ಪೆಕ್ಟರ್​ ಕವಿನಾಶ್​’ ವೆಬ್​ ಸರಣಿಯಲ್ಲಿ ರಣದೀಪ್​ ಹೂಡಾ ಜತೆ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ 

ಊರ್ವಶಿ ಫೋಟೋ ಕಂಡು ಮರುಳಾಗದವರುಂಟೆ?

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು