AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್ ಹತ್ತಿ ರೈಡ್ ಹೊರಟ ನಟಿಯರು; ಇದಕ್ಕಿದೆ ಸಿನಿಮಾ ಕನೆಕ್ಷನ್

‘ಧಕ್ ಧಕ್​’ ಚಿತ್ರದ ಫಸ್ಟ್​ ಲುಕ್ ಅನಾವರಣಗೊಂಡಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ. ಕಾರಣ ರತ್ನಾ, ದಿಯಾ, ಫಾತಿಮಾ ಹಾಗೂ ಸಂಜನಾ ಒಟ್ಟಾಗಿ ನಟಿಸುತ್ತಿದ್ದಾರೆ.

ಬೈಕ್ ಹತ್ತಿ ರೈಡ್ ಹೊರಟ ನಟಿಯರು; ಇದಕ್ಕಿದೆ ಸಿನಿಮಾ ಕನೆಕ್ಷನ್
ಧಕ್ ಧಕ್ ತಂಡ
TV9 Web
| Edited By: |

Updated on:May 16, 2022 | 3:06 PM

Share

ನಟಿ ರತ್ನಾ ಪಾಟಕ್ ಶಾ, ದಿಯಾ ಮಿರ್ಜಾ (Dia Mirza), ಫಾತಿಮಾ ಸನಾ ಶೇಖ್​ ಹಾಗೂ ಸಂಜನಾ ಸಂಘಿ ಬೈಕ್​ ರೈಡ್ ಹೊರಟಿದಿದ್ದಾರೆ. ಬುಲೆಟ್ ಬೈಕ್ ಏರಿ ಲಾಂಗ್​ ರೈಡ್ ಹೋಗೋಕೆ ರೆಡಿ ಆಗಿದ್ದಾರೆ. ಸೆಲೆಬ್ರಿಟಿಗಳು ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್​ ತೆಗೆದುಕೊಂಡು ವೆಕೇಶನ್ ಹೋಗೋದು ಕಾಮನ್. ಇವರೂ ಹಾಗೆ ಟ್ರಿಪ್​ಗೆ ಹೊರಟರು ಎಂದುಕೊಳ್ಳಬೇಡಿ. ಹೊಸ ಚಿತ್ರಕ್ಕಾಗಿ ಈ ನಾಲ್ಕು ಹೀರೋಯಿನ್​ಗಳು ಒಂದಾಗುತ್ತಿದ್ದಾರೆ. ‘ಧಕ್​ ಧಕ್​’ (Dhak Dhak Movie) ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಬೈಕ್​ ರೈಡ್ ಕಥೆ ಹೈಲೈಟ್ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ರಿಲೀಸ್ ಆಗಿರುವ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

‘ಧಕ್ ಧಕ್​’ ಚಿತ್ರದ ಫಸ್ಟ್​ ಲುಕ್ ಅನಾವರಣಗೊಂಡಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ. ಕಾರಣ ರತ್ನಾ, ದಿಯಾ, ಫಾತಿಮಾ ಹಾಗೂ ಸಂಜನಾ ಒಟ್ಟಾಗಿ ನಟಿಸುತ್ತಿದ್ದಾರೆ. ಪೋಸ್ಟರ್​ ನೋಡಿದ ಮಹಿಳಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೈಕ್​ನಲ್ಲಿ ರೈಡ್ ಹೋಗಬೇಕು ಎಂದು ಯುವತಿಯರು ಕನಸು ಕಾಣುತ್ತಾರೆ. ಅಂಥವರಿಗೆ ಈ ಸಿನಿಮಾ ಮೂಲಕ ಸ್ಫೂರ್ತಿ ಸಿಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ
Image
30 ವರ್ಷಗಳ ಬಳಿಕ ಖುಷ್ಬೂ ಎದುರು ಹೋಗಿ ನಿಂತ ‘ರಣಧೀರ’ ಬಾಲಕ; ನಟಿಯ ರಿಯಾಕ್ಷನ್ ಹೇಗಿತ್ತು?
Image
777 Charlie Trailer: ‘777 ಚಾರ್ಲಿ’ ಸಿನಿಮಾ ಟ್ರೇಲರ್​ ರಿಲೀಸ್​: ಎಮೋಷನಲ್​ ಕಥೆಯ ಸುಳಿವು ನೀಡಿದ ರಕ್ಷಿತ್​ ಶೆಟ್ಟಿ
Image
Taapsee Pannu: ಹೊಸ ಫೋಟೋಶೂಟ್ ಮೂಲಕ ಮಿಂಚಿದ ನಟಿ ತಾಪ್ಸಿ ಪನ್ನು
Image
ಹೆಂಡತಿ ಜತೆ ಗಂಡನ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂಬ ಕೋರ್ಟ್​ ಆದೇಶಕ್ಕೆ ತಾಪ್ಸೀ ಪನ್ನು ಖಡಕ್​ ಪ್ರತಿಕ್ರಿಯೆ

ಪೋಸ್ಟರ್ ಹಂಚಿಕೊಂಡಿರುವ ದಿಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತಾವು ಅನ್ವೇಷಣೆ ಮಾಡಿಕೊಳ್ಳಲು ನಾಲ್ಕು ಮಹಿಳೆಯರು ಬೈಕ್​ ರೈಡ್ ಹೊರಡುತ್ತಾರೆ. ಇದು ಸಿನಿಮಾದ ಕಥೆ. ಫಾತಿಮಾ ಟಾಪ್​ ಮತ್ತು ಶಾರ್ಟ್ಸ್​ ಹಾಕಿದ್ದಾರೆ.  ರತ್ನಾ ಸಲ್ವಾರ್​ ಸ್ಯೂಟ್​ ಧರಿಸಿದ್ದಾರೆ. ಸಂಜನಾ ಅವರು ಡೆನಿಮ್ ಹಾಕಿದ್ದಾರೆ. ದಿಯಾ ಅವರು ಹಿಜಾಬ್ ಹಾಕಿ ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ಭಿನ್ನ ಮನಸ್ಥಿತಿಯವರ ರೈಡ್​ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು.

ದಿಯಾ ಅವರು ನಿರ್ಮಾಪಕರ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ತಾಪ್ಸೀ ಪನ್ನು ಕೂಡ ನಿರ್ಮಾಪಕರಾಗಿದ್ದಾರೆ. ತಾಪ್ಸೀ ಜತೆಗೆ ಪ್ರಂಜಲ್, ಆಯುಷ್ ಮಹೇಶ್ವರಿ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ತರುಣ್ ದುಡೇಜಾ ಅವರು ನಿರ್ದೇಶನ ಮಾಡುತ್ತಿದ್ದಾರೆ. 2023ರಲ್ಲಿ ಚಿತ್ರ ಥಿಯೇಟರ್​ನಲ್ಲಿ ಬಿಡುಗಡೆ ಆಗುತ್ತಿದೆ.

‘ಧಕ್​ ಧಕ್​’ ಫಸ್ಟ್​ಲುಕ್​ಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಎಲ್ಲರೂ ಈ ಪೋಸ್ಟರ್​ ಮೆಚ್ಚಿಕೊಂಡಿದ್ದಾರೆ. ‘ಬಹಳ ಸೊಗಸಾಗಿದೆ’ ಎಂದು ಫ್ಯಾನ್ಸ್ ಓರ್ವ ಕಮೆಂಟ್ ಮಾಡಿದ್ದಾನೆ. ಅನೇಕರು ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Mon, 16 May 22

Follow Us
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​