ಸಂಗೀತದ ಜ್ಞಾನವಿಲ್ಲದವನನ್ನೂ ತಡೆದು ನಿಲ್ಲಿಸುವ ಸ್ವರ ಮಾಧುರ್ಯದ ಒಡತಿ ನೇಹಾ ಕಕ್ಕರ್​​ಗೆ ಸಾಂಪ್ರದಾಯಿಕ ಉಡುಗೆ ಬಹಳ ಇಷ್ಟ!

ಸಾಂಪ್ರದಾಯಿಕ ಉಡುಗೆಯನ್ನು ಜಾಸ್ತಿ ಇಷ್ಟಪಡುವ ನೇಹಾ ಹಾಡುಗಾರಿಕೆ ಜೊತೆ ರಿಯಾಲಿಟಿ ಶೋಗಳಲ್ಲಿ ಜ್ಯೂರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನೇಹಾಗೆ ಮಾಡ್ ಉಡುಗೆಗಳೂ ಇಷ್ಟವಾಗುತ್ತವೆ.

ಬಾಲಿವುಡ್ ಹಾಡುಗಳನ್ನು ಕೇಳುವ ಅಭಿರುಚಿ ನಿಮ್ಮಲಿದ್ದರೆ ಖಂಡಿತವಾಗಿಯೂ ‘ಬಾಟ್ಲಾ ಹೌಸ್’ ಚಿತ್ರದ ‘ಓ ಸಾಕಿ ಸಾಕಿ’ ಹಾಡನ್ನು ಕೇಳಿರುತ್ತೀರಿ. ಹಾಡು ಭಾರೀ ಜನಪ್ರಿಯಗೊಳ್ಳುವ ಹಿಂದೆ ಎರಡು ಕಾರಣಗಳಿದ್ದವು. ಮೊದಲನೆಯದ್ದು, ಹಾಡಿಗೆ ತನ್ನ ಮೈ ಬಳುಕಿಸುತ್ತಾ ಕುಣಿದು ನೋಡುಗರ ದೇಹ ತಾಪಮಾನ ಹೆಚ್ಚಿಸಿದ ನೊರಾ ಫತೇಹಿ ಮತ್ತು ಸುಶ್ರಾವ್ಯ ಮತ್ತು ಮಾದಕ ಧ್ವನಿಯೊಂದಿಗೆ ಹಾಡಿಗೆ ಜೀವ ತುಂಬಿದ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್! 33 ವರ್ಷ ವಯಸ್ಸಿನ ನೇಹಾ ಹೇಳಿಕೊಳ್ಳುವಂಥ ಸುಂದರಿ ಅಲ್ಲದಿದ್ದರೂ ತನ್ನ ಸುಮಧರ ಕಂಠದಿಂದ ನಿಮ್ಮನ್ನು ಭಾವಪರವಶಗೊಳಿಸುತ್ತಾರೆ. ಆಕೆಯ ಅಕ್ಕ ಸೋನು ಮತ್ತು ಸಹೋದರ ಟೋನಿ ಕಕ್ಕರ್ ಸಹ ಉತ್ತಮ ಗಾಯಕರು ಮತ್ತು ಸಾಕಷ್ಟು ಖ್ಯಾತಿಯನ್ನು ಸಂಪಾದಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಉಡುಗೆಯನ್ನು ಜಾಸ್ತಿ ಇಷ್ಟಪಡುವ ನೇಹಾ ಹಾಡುಗಾರಿಕೆ ಜೊತೆ ರಿಯಾಲಿಟಿ ಶೋಗಳಲ್ಲಿ ಜ್ಯೂರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನೇಹಾಗೆ ಮಾಡ್ ಉಡುಗೆಗಳೂ ಇಷ್ಟವಾಗುತ್ತವೆ.

ಅತ್ಯಂತ ಕಿರಿ ವಯಸ್ಸಿನಲ್ಲೇ ಅಂದರೆ ಬಾಲ ಕಲಾವಿದೆಯಾಗಿ ಆಧ್ಯಾತ್ಮಿಕ ಹಾಡುಗಳಿಗೆ ದನಿಯಾಗುತ್ತಿದ್ದ ನೇಹಾ ಮತ್ತು ಆಕೆಯ ಕುಟುಂಬ ಈ ಹಂತ ತಲುಪಲು ಬಹಲ ಸ್ಟ್ರಗಲ್ ಮಾಡಿದೆ. ಊಟಕ್ಕೂ ತಾಪತ್ರಯ ಪಡುತ್ತಿದ್ದ ಕಾಲವೊಂದಿತ್ತು ಅಂತ ಒಮ್ಮೆ ರಿಯಾಲಿಟಿ ಶೋ ಒಂದರಲ್ಲಿ ಖುದ್ದು ನೇಹಾ ಕಣ್ಣೀರು ಹಾಕುತ್ತಾ ಹೇಳಿದ್ದರು.

ಈಗ ಆಕೆ ಭಾರತದ ಅತ್ಯಂತ ಪಾಪ್ಯುಲರ್ ಮತ್ತು ಸೆಲಿಬ್ರಿಟಿ ಸಿಂಗರ್. ಅನೇಕ ಪ್ರಶಸ್ತಿ ಪುರಸ್ಕಾರಗಳೊಂದಿಗೆ ಯೂಟ್ಯೂಬ್ ಡೈಮಂಟ್ ಅವಾರ್ಡ್ಗೆ ಪಾತ್ರರಾದ ಮೊದಲ ಭಾರತೀಯಳೆಂಬ ಖ್ಯಾತಿಯೂ ಆಕೆಯದ್ದು.

ಆಕೆಯ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, ಮೊದಲು ನಟ ಹಿಮಾಂಶ್ ಕೊಹ್ಲಿ ಜೊತೆ ಜೊತೆ ಮದುವೆ ಆಗುತ್ತಾರೆ ಅಂತ ವದಂತಿ ಹರಡಿತ್ತು. ಸುಮಾರು ವರ್ಷಗಳ ಕಾಲ ಅವರು ರಿಲೇಷನ್​ಶಿಪ್​ನಲ್ಲಿದ್ದರು.

ಆದರೆ ಇದ್ದಕ್ಕಿದ್ದಂತೆ ಕೊಹ್ಲಿಯಿಂದ ಬೇರ್ಪಟ್ಟ ನೇಹಾ ಪಂಜಾಬಿ ಗಾಯಕ ರೋಹನ್ಪ್ರೀತ್ ಸಿಂಗ್ ಅವರನ್ನು ಅಕ್ಟೋಬರ್ 2020ರಲ್ಲಿ ಮದುವೆಯಾದರು. ಜೊತೆಯಾಗಿ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರ ನಡುವಿನ ಕೆಮಿಸ್ಟ್ರಿ ಬಹಳ ಅದ್ಭುತವಾಗಿದೆ.

ಇದನ್ನೂ ಓದಿ:  Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!

Click on your DTH Provider to Add TV9 Kannada