Temple Tour: ಮೀಸೆ ಹೊತ್ತ ಶಕ್ತಿ ದೇವತೆ ಉಚ್ಚಂಗವ್ವನ ದರ್ಶನ ಮಾಡಿದ್ದೀರಾ?

Temple Tour: ಮೀಸೆ ಹೊತ್ತ ಶಕ್ತಿ ದೇವತೆ ಉಚ್ಚಂಗವ್ವನ ದರ್ಶನ ಮಾಡಿದ್ದೀರಾ?

TV9 Web
| Updated By: ಆಯೇಷಾ ಬಾನು

Updated on:Sep 23, 2021 | 8:15 AM

ತಿಂಗಳಿಗೆ ಒಮ್ಮೆ ಈ ಕ್ಷೇತ್ರಕ್ಕೆ ಬಂದು ತಾಯಿಯ ದರ್ಶನ ಮಾಡಿ, ಹರಕೆ ತೀರಿಸಿ ಹೋಗುವ ಜನರಿದ್ದಾರೆ. ಉಚ್ಚಂಗಮ್ಮ ನೆಲೆ ನಿಂತ ಸ್ಥಳ ಭಕ್ತಾದಿಗಳ ಪಾಲಿಗೆ ಕೇಳಿದ್ದನ್ನು ಕರುಣಿಸುವ ಮಹಾ ಆಲಯ.

ದಾವಣಗೆರೆಯಲ್ಲಿರುವ ಉಚ್ಚಂಗಿ ದೇವಾಲಯ ಯಾರಿಗೆ ಗೊತ್ತಿಲ್ಲ ಹೇಳಿ. ದುಷ್ಟ ಶಕ್ತಿ ಸಂಹಾರಿಣಿಯಾಗಿರುವ ಉಚ್ಚಂಗವ್ವನ ಮಹಿಮೆ ಇಂದಿಗೂ ಅಪಾರ. ಬೆಟ್ಟವನ್ನೇರಿ ಕುಳಿತ ತಾಯಿಯ ದರ್ಶನಕ್ಕೆ ನೆರೆ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸ್ತಾರೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಿಂದ ಭಕ್ತರು ಹರಕೆ ಹೊತ್ತು ಬರುತ್ತಾರೆ. ರಾಜ್ಯದ ನಾನಾ ಮೂಲೆಗಳಿಂದ ಬರುವ ಭಕ್ತರ ಕೋರಿಕೆಯನ್ನು ಈಡೇರಿಸುವ ತಾಯಿ ಕುರಿ, ಕೋಳಿಯ ನೈವೇದ್ಯ ಬೇಡುತ್ತಾಳೆ. ಇಡೀ ರಾಜ್ಯವೇ ಈ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಭಾವವನ್ನ ಹೊಂದಿದೆ. ಈ ಕ್ಷೇತ್ರದ ಹೆಸರು ಕೇಳಿದರೆ ಸಾಕು ನಿಂತ ನೆಲದಲ್ಲೇ ಜನರು ಕೈ ಎತ್ತಿ ಮುಗಿಯುತ್ತಾರೆ. ತಿಂಗಳಿಗೆ ಒಮ್ಮೆ ಈ ಕ್ಷೇತ್ರಕ್ಕೆ ಬಂದು ತಾಯಿಯ ದರ್ಶನ ಮಾಡಿ, ಹರಕೆ ತೀರಿಸಿ ಹೋಗುವ ಜನರಿದ್ದಾರೆ. ಉಚ್ಚಂಗಮ್ಮ ನೆಲೆ ನಿಂತ ಸ್ಥಳ ಭಕ್ತಾದಿಗಳ ಪಾಲಿಗೆ ಕೇಳಿದ್ದನ್ನು ಕರುಣಿಸುವ ಮಹಾ ಆಲಯ. ಈ ದೇವಾಲಯದ ವಿಶೇಷತೆಗಳ ಬಗ್ಗೆ ವಿಡಿಯೋದಲ್ಲಿದೆ ನೋಡಿ.

Published on: Sep 23, 2021 08:13 AM