ಸ್ಕೂಟರ್ಗಳ ಮೈಲೇಜ್ ನಿಮ್ಮ ತಲೆ ತಿನ್ನುತ್ತಿರುವ ವಿಷಯವಾದರೆ, ಈ 5 ಸ್ಕೂಟರ್ಗಳನ್ನು ಒಮ್ಮೆ ಗಮನಿಸಿ
ಲೀಟರ್ಗೆ 60ಕ್ಕಿಂತ ಜಾಸ್ತಿ ಕಿಮೀ ಓಡುವ 5 ಸ್ಕೂಟರ್ಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ವಾಹನವೆಂದರೆ ಸುಜುಕಿ ಆಕ್ಸೆಸ್. ಇದು ಪ್ರತಿ ಲೀಟರ್ ಗೆ 64 ಕಿಮೀ ಓಡುತ್ತದೆ ಎಂದು ಹೇಳಲಾಗುತ್ತದೆ.
ಆಫೀಸು, ಮಾರುಕಟ್ಟೆ ಅಥವಾ ಮತ್ಯಾವುದೋ ಕೆಲಸದ ನಿಮಿತ್ತ ಬೈಕ್ ಇಲ್ಲವೇ ಸ್ಕೂಟರ್ನಲ್ಲಿ ಪೆಟ್ರೋಲ್ ಹಾಕಿಸಲು ಬಂಕ್ ಬಳಿ ಹೋಗಿ ಇಂಧನ ತುಂಬಿಸಿಕೊಡು ಹಣ ನೀಡುವಾಗ ಸರ್ಕಾರವನ್ನು ಶಪಿಸದ ವ್ಯಕ್ತಿ ನಿಮಗೆ ಕಂಡಾನೆಯೇ? ಊಹುಂ, ಸಾಧ್ಯವೇ ಇಲ್ಲ ಮಾರಾಯ್ರೇ. ಆದರೆ ಕೆಲ ದ್ವಿಚಕ್ರ ವಾಹನಗಳ ಮಾಲೀಕರಿಗೆ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ್ದರೂ ಅವರ ಮುಖದಲ್ಲಿ ಆತಂಕ ಕಾಣುತ್ತಿಲ್ಲ. ಆದಕ್ಕೆ ಕಾರಣವಿದೆ. ಅದೇನು ಗೊತ್ತಾ? ಅವರು ಓಡಿಸುವ ವಾಹನಗಳ ಮೈಲೇಜ್ ಅದ್ಭುತವಾಗಿದೆ. ಸ್ಕೂಟರ್ಗಳ ವಿಷಯದಲ್ಲಿ ಹೇಳವುದಾದರೆ, ಈ ಸೆಗ್ಮೆಂಟ್ನ ಹಲವಾರು ವಾಹನಗಳು ಪ್ರತಿ ಲೀಟರ್ ಗೆ 40-45 ಕಿಮೀಗಿಂತ ಹೆಚ್ಚಿನ ಮೈಲೇಜ್ ಕೊಡಲಾರವು.
ಲೀಟರ್ಗೆ 60ಕ್ಕಿಂತ ಜಾಸ್ತಿ ಕಿಮೀ ಓಡುವ 5 ಸ್ಕೂಟರ್ಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ವಾಹನವೆಂದರೆ ಸುಜುಕಿ ಆಕ್ಸೆಸ್. ಇದು ಪ್ರತಿ ಲೀಟರ್ ಗೆ 64 ಕಿಮೀ ಓಡುತ್ತದೆ ಎಂದು ಹೇಳಲಾಗುತ್ತದೆ. ಇದರ ಎಕ್ಸ್ ಶೋರೂಮ್ ಬೆಲೆ ರೂ. 73,267. ಯಮಾಹಾ ಫ್ಯಾಸಿನೋ ಎರಡನೇ ಸ್ಥಾನದಲ್ಲಿರುವ ಸ್ಕೂಟರ್ ಆಗಿದ್ದು ಇದು ಪ್ರತಿ ಲೀಟರ್ಗೆ 63 ಕಿಮೀ ಓಡುತ್ತದಂತೆ. ಇದರ ಎಕ್ಸ್ ಶೋರೂಮ್ ಬೆಲೆ ರೂ. 72,030.
ಲೀಟರ್ ಪೆಟ್ರೋಲ್ ಹಾಕಿದರೆ ಹೀರೋ ಪ್ಲೆಶರ್ ಪ್ಲಸ್ ಸ್ಕೂಟರ್ 63 ಕಿಮೀ ಕ್ರಮಿಸುತ್ತದೆ ಎಂದು ಹೇಳುತ್ತಾರೆ. ಇದರ ಎಕ್ಸ್ ಶೋರೂಮ್ ಬೆಲೆ ರೂ. 64, 950 ಆಗಿದೆ. ಎಲ್ಲ ಸ್ಕೂಟರ್ಗಳ ಆರಂಭಿಕ ಬೆಲೆಯನ್ನು ಮಾತ್ರ ನಾವಿಲ್ಲಿ ಉಲ್ಲೇಖಿಸುತ್ತಿದ್ದೇವೆ. ಮೈಲೇಜ್ ರೇಸ್ನಲ್ಲಿ ನಾಲ್ಕನೆ ಸ್ಥಾನದಲ್ಲಿರೋದು ಸ್ಕೂಟಿ ಪೆಪ್, ಇದರ ಎಕ್ಸ್ ಶೋರೂಮ್ ಬೆಲೆ 59,992 ಮತ್ತು ಲೀಟರ್ಗೆ 62 ಕಿಮೀ ಓಡುತ್ತದೆ.
ಕೊನೆಯದಾಗಿ ಹೊಂಡಾ ಡಿಯೋ. ಒಂದು ಲೀಟರ್ ಪೆಟ್ರೋಲ್ನಲ್ಲಿ ಇದು 60 ಕಿಮೀ ದೂರವನ್ನು ಕ್ರಮಿಸುತ್ತದೆ. ಅಂದಹಾಗೆ ಹೊಂಡಾ ಡಿಯೋ ಎಕ್ಸ್ ಶೋರೂಮ್ ಬೆಲೆ ರೂ. 67,944.
ಇದನ್ನೂ ಓದಿ: ಬಾಯ್ಫ್ರೆಂಡ್ ಜತೆ ಬಿಗ್ ಬಾಸ್ ಒಟಿಟಿ ವಿನ್ನರ್ ದಿವ್ಯಾ ಅಗರ್ವಾಲ್ ಮೋಜು ಮಸ್ತಿ; ವಿಡಿಯೋ ವೈರಲ್